ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ (ಜೂನ್ 4) ಹೊರಬೀಳಲಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಮತಗಟ್ಟೆಗಳ ಸಮೀಕ್ಷೆಯಂತೆ ಬಿಜೆಪಿ (BJP) ಬಹುಮತದ ನಿರೀಕ್ಷೆಯಲ್ಲಿದೆ. ಎನ್‌ಡಿಎ ಬಹುಮತ ಬಂದರೆ ಮೋದಿಯವರು ಹ್ಯಾಟ್ರಿಕ್ ಸಾಧನೆ ಮಾಡಲಿದ್ದಾರೆ. ಹೀಗಾಗಿ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಲೆಕ್ಕಚಾರದಲ್ಲಿ ಮೋದಿಯವರು ಈ ತಯಾರಿ ಮಾಡಿಕೊಂಡಿದ್ದಾರೆ. ಮುಂದಿನ 125 ದಿನಗಳ ಪ್ಲ್ಯಾನ್‌ನೊಂದಿಗೆ ನಮೋ ಸಿದ್ಧವಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅವರು ಕಾರ್ಯ ಪ್ರವೃತ್ತರಾಗಲಿದ್ದಾರೆ.
Advertisement
ತಯಾರಿ ಏನು..?: 125 ದಿನಗಳ ಯೋಜನೆ ಸಿದ್ದಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಜೂನ್ 9 ರಂದು ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿವೆ. ಐತಿಹಾಸಿಕ ಹ್ಯಾಟ್ರಿಕ್ ಸಾಧನೆ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಪ್ಲ್ಯಾನ್ ಇದೆ.
Advertisement
Advertisement
ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಕ್ಯಾಬಿನೆಟ್ ರಚನೆ ಮಾಡಲಿದ್ದಾರೆ. ಈ ಬಾರಿ ದಕ್ಷಿಣ ಭಾರತಕ್ಕೆ ವಿಶೇಷ ಒತ್ತು ಕೊಡುವ ಸಾಧ್ಯತೆ ಇದೆ. ಕೇರಳ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣಕ್ಕೆ ವಿಶೇಷ ಒತ್ತು ನೀಡಬಹುದು. ಇದನ್ನೂ ಓದಿ: ಬಿಜೆಪಿಗೆ ಗೆಲುವು | ಹೂಡಿಕೆದಾರರ ಸಂಪತ್ತು ಒಂದೇ ದಿನ 14 ಲಕ್ಷ ಕೋಟಿ ಹೆಚ್ಚಳ – ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ
Advertisement
ಮುಂಬರುವ ದಿನಗಳಲ್ಲಿ ಆಯಾ ರಾಜ್ಯಗಳಲ್ಲಿ ಸಂಘಟನೆಗೆ ಒತ್ತು ನೀಡುವ ದೃಷ್ಠಿಯಿಂದ ಈ ಆದ್ಯತೆ ನೀಡುವ ಸಾಧ್ಯತೆಗಳಿವೆ. ಕ್ಯಾಬಿನೆಟ್ ಬೆನ್ನಲ್ಲೇ ಇಟಲಿಗೆ ಮೊದಲ ವಿದೇಶಿ ಪ್ರವಾಸ ಮಾಡಲಿದ್ದಾರೆ. ಇಟಲಿಯಲ್ಲಿ ನಡೆಯಲಿರುವ G7 ಮೀಟಿಂಗ್ ನಲ್ಲಿ ಮೋದಿ ಭಾಗಿಯಾಗಲಿದ್ದಾರೆ. ವಾಪಾಸ್ ಆದ ಬಳಿಕ 125 ದಿನಗಳ ಕಾರ್ಯಸೂಚಿ ಅನುಷ್ಠಾನ ಮಾಡಲಿದ್ದಾರೆ.