ಮಂಡ್ಯ: ಸಕ್ಕರೆನಾಡು ಮಂಡ್ಯ ಕಬ್ಜಾ ಮಾಡಿಕೊಳ್ಳಲು ದಳಪತಿಗಳು ತಂತ್ರ ರೂಪಿಸ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆ ಅಖಾಡದಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿಗಳಾಗಿವೆ. ಬಹುತೇಕ ಈ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ (JDS) ಬಿಟ್ಟುಕೊಡೋದು ನಿಶ್ಚಿತವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ನಾಯಕರು ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಹುಟುಕಾಟದಲ್ಲಿ ಇದ್ದಾರೆ.
Advertisement
ಮಂಡ್ಯದಲ್ಲಿ ಮಾಜಿ ಸಚಿವರಾದ ಪುಟ್ಟರಾಜು, ತಮ್ಮಣ್ಣ ಹಾಗೂ ಮಾಜಿ ಶಾಸಕ ಸುರೇಶ್‍ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮಧ್ಯ ಇವರನ್ನು ಹೊರತುಪಡಿಸಿ ಮಂಡ್ಯಗೆ ಪ್ರಬಲ ನಾಯಕನನ್ನೇ ಅಭ್ಯರ್ಥಿಯಾಗಿ ತರಬೇಕೆಂದು ಜೆಡಿಎಸ್ ಲೆಕ್ಕಾಚಾರ ಹಾಕಿಕೊಂಡಿದೆ. ಅಭ್ಯರ್ಥಿ ಹುಟುಕಾಟಕ್ಕಾಗಿ ಸಭೆ ಮೇಲೆ ಸಭೆ ನಡೆಸಿದ್ದಾರೆ. ಅಂತಿಮ ಸಭೆಯಲ್ಲಿ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಬಂದ್ರೆ ಸೂಕ್ತ ಎಂದು ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ: ಮತ್ತೊಬ್ಬ ಬಿಜೆಪಿ ನಾಯಕ ದೆಹಲಿಗೆ – ಲೋಕಸಭೆ ಟಿಕೆಟ್‌ಗೆ ಸುಧಾಕರ್ ಕಸರತ್ತು?
Advertisement
Advertisement
ಮಂಡ್ಯ ಲೋಕಸಭಾ ಚುನಾವಣೆ (Loksabha Election) ಅಖಾಡಕ್ಕೆ ಹೆಚ್‍ಡಿಕೆ ಅಥವಾ ನಿಖಿಲ್ (Nikhil Kumaraswamy) ಬಂದ್ರೆ ಮಂಡ್ಯದಲ್ಲಿ ಜೆಡಿಎಸ್ ಮತ್ತೆ ಹಳೆ ಲಯಕ್ಕೆ ತಿರುಗಬಹುದು. ಜೊತೆಗೆ ಮಂಡ್ಯ ಕ್ಷೇತ್ರವನ್ನು ಸುಲಭವಾಗಿ ಗೆದ್ದು, ಜಿಲ್ಲೆಯಲ್ಲಿ ನಾಯಕರ ನಡುವೆ ಇರುವ ಅಸಮಧಾನವನ್ನು ಸರಿಪಡಿಸಬಹುದು ಎಂಬ ಲೆಕ್ಕಾಚಾರ ಜಿಲ್ಲಾ ನಾಯಕರಲ್ಲಿ ಇದೆ. ಈ ತೀರ್ಮಾನವನ್ನು ಸದ್ಯ ಪತ್ರದ ಮೂಲಕ ದೊಡ್ಡಗೌಡರಿಗೆ, ಕುಮಾರಸ್ವಾಮಿ ಅವರಿಗೆ ತಲುಪಿಸಲಾಗಿದ್ದು, ಇನ್ನೂ ಎರಡು ಮೂರು ದಿನಗಳಲ್ಲಿ ನಾಯಕರು ನಿಯೋಗದ ಮೂಲಕ ಅಧಿಕೃತವಾಗಿ ಕುಮಾರಸ್ವಾಮಿ ಹಾಗೂ ನಿಖಿಲ್‍ಗೆ ಆಹ್ವಾನ ನೀಡಲಿದ್ದಾರೆ.
Advertisement
ಒಟ್ಟಾರೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಮಂಡ್ಯ ರಾಜಕೀಯ ಗರಿಗೆದರುತ್ತಿದೆ. ಕುಮಾರಸ್ವಾಮಿ ಮಂಡ್ಯ ನಾಯಕರ ಮನವಿಯನ್ನು ಪುರಸ್ಕರಿಸ್ತಾರಾ..? ಅಥವಾ ನಿಖಿಲ್‍ರನ್ನು ಅಖಾಡಕ್ಕೆ ಇಳಿಸ್ತಾರಾ ಕಾದು ನೋಡಬೇಕಿದೆ.