ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಗೆದ್ದ ಕಾಂಗ್ರೆಸ್‍ಗೆ (Congress) ಗ್ಯಾರಂಟಿ ಮೂಲಕ ಮಹಿಳೆಯರೇ ಆಸರೆ ಆಗಿದ್ದರು. ಈಗ ಲೋಕಸಭಾ ಚುನಾವಣೆ (Loksabha Election) ಗೆಲುವಿಗೆ ಮತ್ತೆ ಮಹಿಳಾ ಶಕ್ತಿ ಮೊರೆ ಹೋಗಲು ಮುಂದಾಗಿದೆ.
ಲೋಕಸಭಾ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಒತ್ತು ಕೊಡಲು ಮುಂದಾಗಿದ್ದಾರಂತೆ. ರಾಜ್ಯದಲ್ಲಿ ಕನಿಷ್ಠ 5-6 ಮಹಿಳಾ ಅಭ್ಯರ್ಥಿಗಳು ಕಾಂಗ್ರೆಸ್‍ನಿಂದ ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಯುತ್ತಿದೆ. ಮಹಿಳೆಯರನ್ನು ಅಖಾಡಕ್ಕೆ ಇಳಿಸಲು ಜಾತಿ ಲೆಕ್ಕಾಚಾರ ವರ್ಚಸ್ಸು ಎಲ್ಲವನ್ನೂ ಲೆಕ್ಕಾ ಹಾಕಿ ತೀರ್ಮಾನ ಮಾಡಲು ಮುಂದಾಗಿದ್ದಾರೆ. ಹೀಗೆ ಮಹಿಳಾ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಬಹುದಾದ 3 ಕ್ಷೇತ್ರಗಳನ್ನು ಗುರುತಿಸಲಾಗಿದೆ ಎನ್ನಲಾಗುತ್ತಿದೆ.
Advertisement
Advertisement
ಸದ್ಯಕ್ಕೆ ದಾವಣಗೆರೆ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. 3 ಕ್ಷೇತ್ರದ ಪಟ್ಟಿ ಕೈ ನಾಯಕರ ಕೈಯಲ್ಲಿದ್ದು ಇನ್ನೂ 2-3 ಮಹಿಳಾ ಕ್ಷೇತ್ರಕ್ಕಾಗಿ ಹುಡುಕಾಟ ನಡೆದಿದೆ. ಬೆಂಗಳೂರು ಉತ್ತರ, ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಅವಕಾಶ ಆದರೆ ಮಹಿಳಾ ಅಭ್ಯರ್ಥಿ ಅಖಾಡಕ್ಕೆ ಇಳಿಸಬಹುದಾ ಎಂಬ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.
Advertisement
Advertisement
ಲೋಕಸಭೆಗೆ ಸ್ತ್ರೀಶಕ್ತಿ ಬಳಸಿ ಗೆಲುವಿನ ಬಾವುಟ ಹಾರಿಸಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿದ್ದು, ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಅರ್ಧ ಡಜನ್‍ಗೆ ತಲುಪಿದರು ತಲುಪಬಹುದು ಎಂಬ ಮಾತು ಕೈ ಪಾಳಯದಲ್ಲಿ ಕೇಳಿಬರುತ್ತಿದೆ. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭ