ತುಮಕೂರು: ಇಲ್ಲಿನ ಲೋಕಸಭಾ ಬಿಜೆಪಿ ಟಿಕೆಟ್ ಸಿಕ್ಕೇ ಬಿಡ್ತು ಎಂದು ಈಗಾಗಲೇ ಕ್ಷೇತ್ರ ಸಂಚಾರದಲ್ಲಿದ್ದ ವಿ.ಸೋಮಣ್ಣಗೆ (V Somanna) ಇನ್ನೊಂದು ತಡೆಗೋಡೆ ಎದುರಾಗಿದೆ. ಮಾಜಿ ಸಚಿವ ಮಾಧುಸ್ವಾಮಿ (Madhuswamy) ಬಳಿಕ ಇದೀಗ ಸ್ಥಳೀಯ ಪ್ರಭಾವಿ ಮುಖಂಡ ಮತ್ತೊಂದು ದಾಳ ಉರುಳಿಸಿದ್ದಾರೆ.
Advertisement
ಹೌದು. ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಡಾ.ಪರಮೇಶ್ ಟಿಕೆಟ್‍ಗಾಗಿ ದೆಹಲಿ ಮಟ್ಟದಲ್ಲಿ ಲಾಬಿ ಶುರುಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಟಿಕೆಟ್ ಆಕಾಂಕ್ಷಿ ಡಾ.ಪರಮೇಶ್, ಸೋಮಣ್ಣಗೆ ಟಕೆಟ್ ಸಿಗಲ್ಲ.. ಹೈಕಮಾಂಡ್‍ಗೆ ಕಳುಹಿಸಿದ್ದ ನಾಲ್ವರ ಹೆಸರಲ್ಲಿ ನನ್ನ ಹೆಸರು ಮೊದಲಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಹೊರಗಿನವರಿಗೆ ಟಿಕೆಟ್ ಕೊಡಬಾರದು ಎಂದು ಹೈಕಮಾಂಡ್‍ಗೆ ಪತ್ರ ಬರೆದಿದ್ದೇವೆ ಎಂದು ಡಾ.ಪರಮೇಶ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
Advertisement
Advertisement
ಡಾ.ಪರಮೇಶ್‍ರವರ ತೀಕ್ಷ್ಣ ಮಾತುಗಳು ವಿ.ಸೋಮಣ್ಣರಿಗೆ ಕೊಂಚ ಗಲಿಬಿಲಿ ಮಾಡಿಸಿದೆ. ನಾನ್ಯಾಕೆ ವಲಸಿಗನಾಗ್ತೀನಿ, ಮೋದಿ ಅವರ ಕ್ಷೇತ್ರ ಗುಜರಾತ್ ಆದರೂ ವಾರಣಾಸಿಯಿಂದ ಸ್ಪರ್ಧೆ ಮಾಡಿಲ್ಲವೇ ಎಂದು ಪ್ರಶ್ನೆ ಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಿಂದರಾಜು ನಗರ ಕ್ಷೇತ್ರದಲ್ಲಿ (Govindrajanagar Constituency) ನನಗೆ ಟಿಕೆಟ್ ಕೊಟ್ಟರೆ ನಾನ್ಯಾಕೆ ತುಮಕೂರಿಗೆ ಬರುತ್ತಿದ್ದೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದನ್ನೂ ಓದಿ: ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಫುಲ್ ಆಕ್ಟೀವ್- ದಿಶಾ ಸಭೆಯಲ್ಲಿ ಸಂಸದ ಕ್ಷಮೆ
Advertisement
ಒಟ್ಟಾರೆ ಜಿಲ್ಲೆಯ ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಮತ ಬೇಟೆ ಆರಂಭಿಸಿದ್ದ ಸೋಮಣ್ಣಗೆ ಡಾ.ಪರಮೇಶ್ ಕೊಂಚ ಶಾಕ್ ಕೊಟ್ಟಿರೋದು ಸುಳ್ಳಲ್ಲ.