ನವದೆಹಲಿ: ಲೋಕಸಭೆಯಲ್ಲಿ ಮಾಜಿ ಕೇಂದ್ರ ಸಚಿವ, ಸ್ಯಾಂಡಲ್‍ವುಡ್ ನಟ ದಿ.ಅಂಬರೀಶ್ ಅವರಿಗೆ ಮತ್ತೆ ಅವಮಾನವಾಗಿದೆ.
ಕಲಾಪ ಆರಂಭದ ಮೊದಲ ದಿನ ನಿಧನ ಹೊಂದಿದ್ದ ಗಣ್ಯರಿಗೆ ಸಂತಾಪ ಸೂಚಿಸುವ ಸಂಪ್ರದಾಯವಿದೆ. ಮಂಗಳವಾರದಿಂದ ಆರಂಭಗೊಂಡಿರುವ ಚಳಿಗಾಲದ ಅಧಿವೇಶನದಲ್ಲಿ ಕಲಾಪ ಆರಂಭಗೊಂಡಾಗ ಮಾಜಿ ಸಚಿವ ಅನಂತ್ ಕುಮಾರ್ ಅವರಿಗೆ ಸಂತಾಪ ಸೂಚಿಸಲಾಗಿತ್ತು.
ಸಂತಾಪದ ಬಳಿಕ ಕಲಾಪ ಆರಂಭಗೊಂಡಾಗ ಮಾಜಿ ಪ್ರಧಾನಿ ದೇವೇಗೌಡ ಅವರು ಪಟ್ಟಿಯಲ್ಲಿ ಜಾಫರ್ ಶರೀಫ್ ಮತ್ತು ಅಂಬರೀಶ್ ಹೆಸರು ಕೈ ಬಿಟ್ಟ ವಿಚಾರವನ್ನು ಪ್ರಸ್ತಾಪ ಮಾಡಿದರು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಸ್ಪೀಕರ್ ಸುಮಿತ್ರಾ ಮಹಾಜನ್ ಬುಧವಾರ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದರು. ಆದರೆ ಇಂದು ಮಾಜಿ ಕೇಂದ್ರ ರೈಲ್ವೇ ಸಚಿವ ಜಾಫರ್ ಶರೀಫ್ ಅವರಿಗೆ ಸಂತಾಪ ಸೂಚಿಸಿ ಅಂಬರೀಶ್ ಹೆಸರು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಂಬರೀಶ್ ಅವರಿಗೆ ಸಂತಾಪ ಸೂಚಿಸುವಂತೆ ಮನವಿ ಮಾಡಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ಸಂತಾಪ ಸೂಚಿಸಲಾಗುವುದು ಎಂದು ಹೇಳಿ ಕಲಾಪ ಆರಂಭಕ್ಕೆ ಅನುಮತಿ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv