ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟ ಲೋಕೇಶ್

Public TV
1 Min Read
big boss lokesh

ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಬಿಗ್ ಬಾಸ್ ಓಟಿಟಿಗೆ(Bigg Boss Ott) ಮತ್ತೆ ನಟ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ದೊಡ್ಮನೆಯಲ್ಲಿ ಕಾಮಿಡಿ ಕಮಾಲ್‌ ಮಾಡಲು ಲೋಕೇಶ್(Lokesh) ಬಂದಿದ್ದಾರೆ.

lokesh

ಚಂದನವನದ ಪ್ರತಿಭಾನ್ವಿತ ನಟ ಲೋಕೇಶ್ ಬಿಗ್ ಬಾಸ್ ಓಟಿಟಿಗೆ(Bigg Boss Ott) ಎಂಟ್ರಿ ಕೊಟ್ಟಿದ್ದರು. ಆದರೆ ಕಾಲಿಗೆ ಗಾಯವಾದ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು. ಇದೀಗ 38 ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ದೊಡ್ಮನೆಗೆ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲ. ಬದಲಾಗಿ ಅತಿಥಿಯಾಗಿ ಹೋಗಿದ್ದಾರೆ. ಕಾರ್ಯಕ್ರಮದ ಕೊನೆಯ ಹಂತದಲ್ಲಿರುವಾಗ ಅತಿಥಿಯಾಗಿ ಮನೆ ಮಂದಿಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್ಐಆರ್: ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು

big boss lokesh 1

ಬಿಗ್ ಬಾಸ್ ಮನೆಗೆ ಲೋಕೇಶ್ ಅವರ ಎಂಟ್ರಿ, ಮನೆ ಮಂದಿಗೆ ಖುಷಿ ಕೊಟ್ಟಿದೆ. ಮತ್ತೆ ಮನೆಯವರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ಓಟಿಟಿ ಕೊನೆಯ ಹಂತದಲ್ಲಿದೆ. ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಗೆಲುವಿನ ಪಟ್ಟ ಯಾರ ಪಾಲಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article