ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದು ಬಿಜೆಪಿಯವರು: ಪ್ರತಾಪ್ ಸಿಂಹ

Public TV
1 Min Read
prathap simha

ವಿಜಯಪುರ: ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದು ಬಿಜೆಪಿಯವರು. ಲೋಕಾಯುಕ್ತವನ್ನು ಕತ್ತು ಹಿಸುಕಿ ಸಾಯಿಸಿದ್ದು ಕಾಂಗ್ರೆಸ್ (Congress) ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

PRATHAP SIMHA 1

ಬಿಜೆಪಿ(BJP) ಶಾಸಕ ವಿರೂಪಾಕ್ಷಪ್ಪ (Madal Virupakshappa) ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಭ್ರಷ್ಟಾಚಾರ (Corruption) ವಿಚಾರವಾಗಿ ಬಿಜೆಪಿ ಶಾಸಕನ ಪುತ್ರ ಬಂಧನಕ್ಕೊಳಗಾಗಿದ್ದಾರೆ. ಬಿಜೆಪಿ ಶಾಸಕನ ಪುತ್ರನೆಂದು ಅವರನ್ನು ಸುಮ್ಮನೆ ಬಿಡಲಿಲ್ಲ. ಯಾರೇ ಆಗಲಿ ಬಂಧಿಸಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಬಿಜೆಪಿ ಯತ್ನಿಸಿದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ

Prathap simha 2

ಯಾರನ್ನು ರಕ್ಷಿಸಲು ಲೋಕಾಯುಕ್ತ ಮುಚ್ಚಿ ಎಸಿಬಿ ತೆರೆದಿರಿ? ಅಲ್ಲದೆ ಜಯಮಾಲಾ ವಿಷಯ ಹೊರಬಂತು ಏನಾಯಿತು? ಆಂಜನೇಯನವರ ಮನೆಯಲ್ಲಿ ಹಣ ಸಿಕ್ಕಿತು ಏನಾಯಿತು? ನೀವು ತಿಂದಿದ್ದು ಬದನೆಕಾಯಿ, ವೇದ ಹೇಳೋದಕ್ಕೆ ಹೋಗಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಲಾಭ, ನಷ್ಟ ನೋಡಿ ಅಲ್ಲ, ಜೊತೆ ಇರುವವರ ಬಗ್ಗೆಯೂ ನೋಡ್ಕೊಂಡು ನಿರ್ಧಾರ: ಸುಮಲತಾ

prathap

ಶೇ.40 ರಷ್ಟು ಕಮಿಷನ್ ಸರ್ಕಾರ ಎಂದು ಆರೋಪ ಮಾಡುವವರು ನಿಮ್ಮ ಬಳಿ ಸಾಕ್ಷಿ ಇದ್ದರೆ ದೂರು ಕೊಡಿ. ಹ್ಯಾರಿಸ್, ಜಾರ್ಜ್, ಪ್ರಿಯಾಂಕ ಖರ್ಗೆ ಬಡವರಾಗಿದ್ದರಾ? ಈ ಹಿಂದೆ ಹೇಗಿದ್ದರು, ಈಗ ಹೇಗಿದ್ದಾರೆ? ರಮೇಶ್ ಕುಮಾರ್ ಮೂರು ತಲೆಮಾರಿಗೆ ಕೂತು ತಿನ್ನುವಷ್ಟು ಮಾಡಿಕೊಂಡಿದ್ದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಇನ್ನು ಕೆಡಬ್ಲುಎಸ್‌ಹೆಚ್‌ಡಿ ಅಧಿಕಾರಿಯಾಗಿದ್ದು ಸಿಕ್ಕಿರುವ ಹಣ ಅವನ ವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಕ್ಕಿರುವ ಹಣವೋ ಅಥವಾ ಅವರ ತಂದೆಯ ವಿಚಾರದಲ್ಲಿ ಸಿಕ್ಕಿರುವುದಾ ಎಂಬುವುದು ತನಿಖೆ ಆಗಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಮಮತಾ ವಿರುದ್ಧ ಹೇಳಿಕೆ – ಬಂಗಾಳದ ಕಾಂಗ್ರೆಸ್ ವಕ್ತಾರ ಅರೆಸ್ಟ್

 

Share This Article
Leave a Comment

Leave a Reply

Your email address will not be published. Required fields are marked *