MUDA Case | ಸೋಮವಾರ ಕೋರ್ಟ್‌ಗೆ ಮುಡಾ ಕೇಸ್ ವರದಿ – ಸಿಎಂಗೆ ಸಿಗುತ್ತಾ ‌ಬಿಗ್‌ ರಿಲೀಫ್?

Public TV
2 Min Read
mysuru muda

ಮೈಸೂರು: ಮುಡಾ ಸೈಟು ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ನಿರಾಳರಾಗ್ತಾರಾ..? ಹಗರಣಕ್ಕೆ ಸಂಬಂಧಿಸಿದಂತೆ ಕೆಲವೇ ದಿನದಲ್ಲಿ ಅಧಿಕೃತವಾಗಿ ಕ್ಲೀನ್ ಚಿಟ್ ಸಿಗಲಿದೆ. ಈಗಾಗಲೇ ಲೋಕಾಯುಕ್ತ ಎಸ್ಪಿ ಉದೇಶ್ ಲೋಕಾಯುಕ್ತ ಐಜಿಪಿ ಸುಬ್ರಹ್ಮಣೇಶ್ವರ ರಾವ್‌ಗೆ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ.

ಹಿರಿಯ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಸೋಮವಾರ (ಫೆ.16) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಕ್ಕೆ ಸಲ್ಲಿಕೆ ಮಾಡಲಿದ್ದಾರೆ. ಮೂಲಗಳ ಪ್ರಕಾರ ಸಿಎಂ ಮತ್ತು ಕುಟುಂಬಸ್ಥರನ್ನು ಸಂತ್ರಸ್ತರನ್ನಾಗಿ ಮಾಡಿರೋ ಲೋಕಾಯುಕ್ತ, ಆರೋಪಿಗಳ ವಿರುದ್ಧ ಕ್ಲೀನ್ ಚಿಟ್ ನೀಡ್ತಾ ಇದೆ. ಆದ್ರೆ, ಮುಡಾದ ಮಾಜಿ ಆಯುಕ್ತ ನಟೇಶ್ ಸೇರಿ ಸಾಕಷ್ಟು ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಲಾಗಿದೆ. ಅಧಿಕಾರಿಗಳು ಅಕ್ರಮ ಎಸಗಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಅಂತ ಅಂತಿಮ ವರದಿ ಸಲ್ಲಿಕೆ ಆಗಲಿದೆ.

MUDA Site

ಲೋಕಾಯುಕ್ತ ವರದಿಯಲ್ಲಿನ ಸ್ಫೋಟಕ ಅಂಶಗಳೇನು?
ಸಿಎಂ ಮತ್ತು ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದಾರೆ. ಭೂಮಿ ಖರೀದಿ ಮಾಡುವಾಗ ಆಗಲಿ, ದಾನ ಮಾಡುವಾಗ ಆಗಲಿ ಯಾವುದೇ ಪ್ರಭಾವ ಬೀರಿಲ್ಲ. ಸಿಎಂ ಸಿದ್ದರಾಮಯ್ಯ ಸಹ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಾಗಲಿ ಪ್ರಭಾವ ಬೀರಿರುವುದಾಗಲಿ ಸಾಕ್ಷ್ಯ ಸಿಕ್ಕಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯೂ ಪ್ರಭಾವ ಬೀರಿರೋದಕ್ಕೆ ಸಾಕ್ಷ್ಯಗಳು ಇಲ್ಲ ಎಂದು ಹೇಳಿದೆ.

2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ತೊಡಕು ಇರಲಿಲ್ಲ. 5 ಲಕ್ಷದ 95,000 ರೂಪಾಯಿ ಹಣಕ್ಕೆ 3 ಎಕರೆ 26 ಗುಂಟೆ ಜಮೀನು ಖರೀದಿ ಮಾಡಿದ್ದಾರೆ. 3 ಎಕರೆ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ಬಾಹಿರ, ನೊಂದಣಿ ಶುಲ್ಕದಲ್ಲಿ ಮೋಸ ಮಾಡಿಲ್ಲ. 2010 ರಲ್ಲಿ ಕೂಡ ದಾನ ಪತ್ರ ನೀಡುವಾಗ ಕೂಡ ಕಾನೂನಾತ್ಮವಾಗಿದೆ. ಕೆಸರೆಯ ಜಮೀನನ್ನು ಮುಡಾ ವಶಕ್ಕೆ ಪಡೆಯುವಾಗ ನಿಯಮ ಪ್ರಕಾರವೇ ಇದೆ. ಆದ್ರೆ 14 ಸೈಟುಗಳನ್ನ ಮರು ಹಂಚಿಕೆ ಮಾಡುವಾಗ ಕಾನೂನು ಬಾಹಿರ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

natesh MUDA

ಸಿಎಂ ಅವರ ಪತ್ನಿ ಇದೇ ಜಾಗದಲ್ಲಿ ಸೈಟ್ ಬೇಕು ಅಂತ ಮನವಿ ಮಾಡಿಲ್ಲ. ಮುಡಾ ಅಧಿಕಾರಿಗಳ ಜೊತೆ ನಡೆದಿರೋ ಪತ್ರ ವ್ಯವಹಾರದಲ್ಲಿ ಕೆಲವೊಂದು ಲೋಪಗಳು ಇದ್ದಾವೆ. ಆದ್ರೆ ಪಾರ್ವತಿ ಅವರ ಗಮನಕ್ಕೆ ಬಾರದಂತೆ ಕೆಲವೊಂದು ಪತ್ರ ವ್ಯವಹಾರ ನಡೆದಿದೆ. ಮುಡಾದ ಆಯುಕ್ತರು ಮತ್ತು ಅಧಿಕಾರಿಗಳಿಂದ ನಡಾವಳಿಯ ದುರ್ಬಳಕೆ ಆಗಿದೆ. ಮುಡಾದ ಮಾಜಿ ಆಯುಕ್ತ ನಟೇಶ್ ಕೇವಲ 14 ಸೈಟ್‌ಗಳಲ್ಲಿ ಮಾತ್ರವಲ್ಲ ಸಾಕಷ್ಟು ಪ್ರಕರಣಗಳಲ್ಲಿ ಅಕ್ರಮ ಮಾಡಿದಂತೆ ಇದೆ. ಅದರ ಮುಂದುವರಿದ ತನಿಖೆ ಆಗಬೇಕಿದೆ ಎಂದು ಲೋಕಾಯುಕ್ತ ತನ್ನ ಅಂತಿಮ ವರದಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ.

Share This Article