– ತನಿಖೆ ಸರಿಯಾದ ಟ್ರ‍್ಯಾಕ್‌ನಲ್ಲಿ ಇಲ್ಲ
ಮೈಸೂರು: ಒಳ ಒಪ್ಪಂದದ ರೀತಿ ಲೋಕಾಯುಕ್ತ ಎಸ್ಪಿ ಸಿಎಂ ವಿಚಾರಣೆ ಮಾಡಿದ್ದಾರೆ. ತನಿಖೆ ಸರಿಯಾದ ಟ್ರ‍್ಯಾಕ್‌ನಲ್ಲಿ ಇಲ್ಲ ಎಂದು ಲೋಕಾಯುಕ್ತ ಎಸ್ಪಿ ವಿರುದ್ಧ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದೂರುದಾರ ಸ್ನೇಹಮಹಿ ಕೃಷ್ಣ (Snehamayi Krishna) ದೂರು ನೀಡಿದ್ದಾರೆ.
Advertisement
ಎಸ್ಪಿ ಉದೇಶ್ ಕರ್ತವ್ಯಲೋಪ ಎಸಗಿದ್ದಾರೆ. ನಿನ್ನೆ ನಡೆದ ಸಿಎಂ ವಿಚಾರಣೆ ಒಳ ಒಪ್ಪಂದದ ರೀತಿ ಇದೆ. ಇದುವರೆಗೆ ಪ್ರಕರಣದಲ್ಲಿ ಒಬ್ಬನೇ ಒಬ್ಬ ಆರೋಪಿಯನ್ನು ಲೋಕಾಯುಕ್ತರು ವಶಕ್ಕೆ ಪಡೆದಿಲ್ಲ. ದಾಖಲೆಗಳ ಮಹಜರ್ ಸರಿಯಾಗಿ ಆಗಿಲ್ಲ. ಹೀಗಾಗಿ ವಿಚಾರಣೆ ಸರಿಯಾದ ಟ್ರ‍್ಯಾಕ್‌ಗೆ ತನ್ನಿ ಎಂದು ದೂರಿನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ದೆಹಲಿ, ಮುಂಬೈ ಮೂಲದ ಕಂಪನಿಗಳ ಮೇಲೆ ಐಟಿ ದಾಳಿ
Advertisement
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಅವರನ್ನು ವಿಚಾರಣೆ ಪಡಿಸುವ ನಿಟ್ಟಿನಲ್ಲಿ ಹಲವಾರು ದಾಖಲೆಗಳನ್ನು ಇಟ್ಟುಕೊಂಡು ನಾನು ಮನವಿ ಪತ್ರವನ್ನು ಕೊಟ್ಟಿದ್ದೇನೆ. ಜೊತೆಗೆ ಕೆಲವೊಂದು ಸಾಕ್ಷ್ಯ ಪತ್ರಗಳನ್ನು ಅವರು ಸಂಗ್ರಹ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಿಎಂ ಅವರನ್ನು ವಿವರವಾಗಿ ವಿಚಾರಣೆಗೆ ಒಳಪಡಿಸಬೇಕಾಗಿತ್ತು. ಆ ರೀತಿ ವಿಚಾರಣೆ ಮಾಡಬೇಕಾದರೆ ಹಲವಾರು ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ಇಲ್ಲಿ ಮೊದಲೇ ಆರೋಪಿ ಹಾಗೂ ತನಿಖಾಧಿಕಾರಿ ಸಂಚು ರೂಪಿಸಿದ್ದಾರೆ ಅನ್ನೋ ರೀತಿಯಲ್ಲಿ ವಿಚಾರಣೆಗೆ ಹಾಜರಾಗುವ ಸಮಯವನ್ನು ತನಿಖಾಧಿಕಾರಿ ನಿಗದಿ ಮಾಡುತ್ತಾರೆ. ವಿಚಾರಣೆಯಿಂದ ಹೋಗುವ ಸಮಯವನ್ನು ಸಿಎಂ ನಿಗದಿ ಮಾಡಿದ್ದಾರೆ ಅನ್ನುವ ರೀತಿಯಲ್ಲಿ ಅವರು 12 ಗಂಟೆಗೆ ಹೊರಡುವ ಹಾಗೆ 1 ದಿನ ಮುಂಚೆಯೆ ಸಿಎಂ ಪ್ರವಾಸ ಕಾರ್ಯಕ್ರಮ ನಿಗದಿಯಾಗಿರುತ್ತದೆ. ಅದೇ ರೀತಿಯಲ್ಲಿ ವಿಚಾರಣೆ ಮುಗಿಸಿ ಅವರನ್ನು ಕಳುಹಿಸಿ ಕೊಡುತ್ತಾರೆ. ಇದನ್ನೆಲ್ಲಾ ನೋಡುವಾಗ ಸಾಕಷ್ಟು ಅನುಮಾನಗಳು ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕಮರ್ಷಿಯಲ್ ಸ್ಟ್ರೀಟ್ ಒಳಗಡೆ ಆಟೋ, ಸರಕು ವಾಹನಗಳ ಪ್ರವೇಶ ನಿಷೇಧ
Advertisement
ಇನ್ನೊಂದು ವಿಚಾರವೇನೆಂದರೆ ಎ2, ಎ3, ಎ4 ಆರೋಪಿಗಳನ್ನು ವಿಚಾರಣೆ ಮಾಡಿ ಹಲವಾರು ದಿನ ಆಗಿದೆ. ಆದರೆ ಎ1 ಆರೋಪಿಯನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಈ ಕೇಸನ್ನು ಹೈಕೋರ್ಟ್‌ನಲ್ಲಿ ಸಿಬಿಐಗೆ (CBI) ವಹಿಸಬೇಕು ಎಂದು ಮನವಿ ಮಾಡಿದ್ದೆವು. ಆ ಕಾರಣದಿಂದಾಗಿ ಈ ವಿಚಾರಣೆ ಆಗಿದೆ. ಇಲ್ಲದಿದ್ದರೆ ಇವರು ಮಾಡುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
ಈವರೆಗೆ ನಡೆದ ತನಿಖೆಯ ಬಗ್ಗೆ ನನಗೆ ತೃಪ್ತಿ ಇಲ್ಲ. ಇಷ್ಟು ದೊಡ್ಡ ಹಗರಣ ಮಾಡಿರುವಾಗ ಒಬ್ಬರನ್ನಾದರೂ ಬಂಧಿಸಬೇಕಿತ್ತು. ಆದರೆ ಇಲ್ಲಿ ಯಾರನ್ನು ಬಂಧಿಸಿಲ್ಲ. ಅದೇ ಲೋಕಾಯುಕ್ತದವರು ಬರೀ 1000 ರೂ., 2000 ರೂ., ಲಂಚ ತೆಗೆದುಕೊಂಡರು ಅನ್ನುವ ಕಾರಣಕ್ಕೆ ಕೂಡಲೇ ಬಂಧಿಸುತ್ತಾರೆ. ಅದೇ ರೀತಿ ಇಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರ ನಡೆದಿದೆ. ಸರ್ಕಾರಿ ಆಸ್ತಿ ಕಬಳಿಸಿದ್ದಾರೆ. ಆದರೂ ಕೂಡ ಯಾರನ್ನು ಬಂಧಿಸುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಸೇನೆಯ ಗುಂಡಿಗೆ ಉಗ್ರ ಬಲಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ