ಹಿರಿಯ ಭೂವಿಜ್ಞಾನಿಗೆ ‘ಲೋಕಾ’ ಶಾಕ್ – ಅಧಿಕಾರಿ ಕೃಷ್ಣವೇಣಿ ಕೋಟಿ ಕೋಟಿ ಒಡತಿ

Public TV
2 Min Read
lokayukta raid 1

– ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ; ಆಸ್ತಿ ಎಷ್ಟಿದೆ ಗೊತ್ತಾ?

ಬೆಂಗಳೂರು: ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಅವರಿಗೆ ಸಂಬಂಧಿಸಿದ ಇತರೆ ಕಡೆಗಳಲ್ಲಿ ಗುರುವಾರ ಲೋಕಾಯುಕ್ತ ದಾಳಿ ನಡೆಸಿದ್ದು, ಕೋಟಿ ಕೋಟಿ ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಿದೆ. ನಾಲ್ವರು ಅಧಿಕಾರಿಗಳಿಗೆ ಸೇರಿರುವ 22 ಕಡೆ ದಾಳಿ ನಡೆದಿದೆ.

ಕೃಷ್ಣವೇಣಿ 11 ಕೋಟಿ ಒಡತಿ
ಮಂಗಳೂರಿನ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಅವರ ಬಳಿ 11.93 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ. ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ ನಡೆಸಲಾಯಿತು. 3 ನಿವೇಶನಗಳು, ಬೆಂಗಳೂರಿನ ಯಲಹಂಕದಲ್ಲಿ 1 ಫ್ಲಾಟ್ಸ್, ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು (ಕಾಫಿ ಪ್ಲಾಂಟೇಷನ್) ಆಸ್ತಿಯನ್ನು ಕೃಷ್ಣವೇಣಿ ಹೊಂದಿದ್ದಾರೆ. ಎಲ್ಲಾ ಸೇರಿ ಒಟ್ಟು ಮೌಲ್ಯ 10,41,38,286 ರೂ. ಇದೆ. 56,450 ನಗದು, 66,71,445 ರೂ. ಬೆಲೆ ಬಾಳುವ ಚಿನ್ನಾಭರಣಗಳು, 60,00,000 ರೂ. ಮೌಲ್ಯದ ವಾಹನಗಳು, 24,40,000 ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.. ಎಲ್ಲಾ ಸೇರಿ ಒಟ್ಟು ಮೌಲ್ಯ 1,51,67,895 ರೂ. ಇದೆ. ಸ್ಥಿರಾಸ್ತಿ ಹಾಗೂ ಚರಾಸ್ಥಿ ಸೇರಿ ಒಟ್ಟು 11,93,06,181 ರೂ. ಇದೆ. ಇದನ್ನೂ ಓದಿ: ಭ್ರಷ್ಟಾಚಾರ ಆರೋಪ – 4 ಅಧಿಕಾರಿಗಳಿಗೆ ಸೇರಿದ 25 ಸ್ಥಳಗಳಿಗೆ ‘ಲೋಕಾ’ ದಾಳಿ

lokayukta raid 1 1

ತಿಪ್ಪೇಸ್ವಾಮಿ
ಬೆಂಗಳೂರು ನಗರ ಯೋಜನೆ ನಿರ್ದೇಶಕ ತಿಪ್ಪೇಸ್ವಾಮಿ ಅವರಿಗೆ ಸೇರಿದ 5 ಕಡೆಗಳಲ್ಲಿ ಇಂದು ಲೋಕಾಯುಕ್ತ ದಾಳಿ ನಡೆಸಿತು. ಸ್ಥಿರಾಸ್ತಿ ಒಂದು ನಿವೇಶನ, ಎರಡು ವಾಸದ ಮನೆ, 7.5 ಎಕರೆ ಕೃಷಿ ಜಮೀನು ಎಲ್ಲಾ ಸೇರಿ ಅಂದಾಜು ಮೌಲ್ಯ ಎರಡುವರೆ ಕೋಟಿ ಇದೆ. ಎಂಟು ಲಕ್ಷ ನಗದು, 59 ಲಕ್ಷ ಬೆಲೆಬಾಳುವ ಚಿನ್ನಾಭರಣ, 29 ಲಕ್ಷ ಬೆಲೆಬಾಳುವ ವಾಹನಗಳು, 15 ಸಾವಿರ ಬೆಲೆಬಾಳುವ ಇತರೆ ವಸ್ತುಗಳು ಸೇರಿ 87,98,632 ರೂ. ಚರಾಸ್ತಿ ಇದೆ. ಇವರ ಒಟ್ಟು ಆಸ್ತಿ 3,38,86,632 ರೂ. ಇದೆ.

lokayukta raid 2

ಮೋಹನ್.ಕೆ
ಬೆಂಗಳೂರು ದಕ್ಷಿಣದ ಅಬಕಾರಿ ಅಧೀಕ್ಷಕರು ಮೋಹನ್ ಅವರಿಗೆ ಸೇರಿ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿತು. 3 ನಿವೇಶನಗಳು, 2 ವಾಸದ ಮನೆಗಳು, 2.25 ಎಕರೆ ಕೃಷಿ ಜಮೀನು ಎಲ್ಲಾ ಸೇರಿ 3,22,08,000 ಸ್ಥಿರಾಸ್ತಿ ಹೊಂದಿದ್ದಾರೆ. 1,17,898 ರೂ. ನಗದು, 44,58,200 ರೂ. ಚಿನ್ನಾಭರಣ, 35,00,000 ರೂ. ಮೌಲ್ಯದ ವಾಹನಗಳು, 35,00,001 ರೂ. ಬ್ಯಾಂಕ್ ಎಫ್‌ಡಿ ಎಲ್ಲಾ ಸೇರಿ 1,15,76,098 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇವರ ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ ಒಟ್ಟು ಮೌಲ್ಯ 4,37,84,098 ರೂ. ಇದೆ.

ಮಹೇಶ್
ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರಿಗೆ ಸೇರಿದ 7 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದರು. ದಾಳಿ ವೇಳೆ, ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು 6.89 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 25 ನಿವೇಶನ, 1 ವಾಸದ ಮನೆ, 25 ಎಕರೆ ಕೃಷಿ ಜಮೀನು ಸೇರಿ ಒಟ್ಟು 4.76 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 1,82,284 ರೂ. ನಗದು, 15,00,000 ಬೆಲೆ ಬಾಳುವ ಚಿನ್ನಾಭರಣ, 25,00,000 ಬೆಲೆಬಾಳುವ ವಾಹನ, 1,71,05,000 ಬೆಲೆಬಾಳುವ ಇತರೆ ವಸ್ತುಗಳು ಎಲ್ಲಾ ಸೇರಿ ಒಟ್ಟು ಮೌಲ್ಯ 2,12,87,284 ರೂ. ಚರಾಸ್ತಿ ಹೊಂದಿದ್ದಾರೆ.

Share This Article