ಮೈಸೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಲೋಕಾಯುಕ್ತ ಪೊಲೀಸರು (Lokayukta Police) ನೋಟಿಸ್ ಜಾರಿ ಮಾಡಿದ್ದಾರೆ.
ನವೆಂಬರ್ 6 ಬುಧವಾರ 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಪತ್ನಿ ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದರು. ಇದನ್ನೂ ಓದಿ: Gadaga| ಮಠದ 11 ಎಕ್ರೆಗೆ ಕನ್ನ – ಪ್ರಸಾದ ನಿಲಯ ಈಗ ‘ವಕ್ಫ್’ ಆಸ್ತಿ
Advertisement
Advertisement
ಸಿದ್ದರಾಮಯ್ಯನವರ 40 ವರ್ಷದ ಇತಿಹಾಸದಲ್ಲಿ ಇಲ್ಲಿಯವರೆಗೆ ತನ್ನ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಗಲಿ ಇತರ ವಿಚಾರಣಾ ಸಂಸ್ಥೆಯಿಂದ ನೋಟಿಸ್ ಸ್ವೀಕರಿಸಿರಲಿಲ್ಲ. ಆದರೆ ಈಗ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸಿದ್ದಾರೆ.