– ಲೋಕಾಯುಕ್ತ ಕಚೇರಿಯ ಇನ್‌ಸೈಡ್ ಸ್ಟೋರಿ
ಮೈಸೂರು: ಮುಡಾ ಸೈಟ್ ಹಗರಣ ಕೇಸ್‌ನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಸಾಮಾನ್ಯ ವ್ಯಕ್ತಿಯಂತೆ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಲೋಕಾಯುಕ್ತ ತನಿಖಾ ಟೀಂ ಮತ್ತು ಸಿಎಂ ನಡುವೆ ಆರಂಭದಲ್ಲಿ ನಡೆದ ಅನೌಪಚಾರಿಕ ಮಾತುಕತೆ ಮಾಹಿತಿ ‘ಪಬ್ಲಿಕ್ ಟಿವಿಗೆ’ ಲಭ್ಯವಾಗಿದೆ.
Advertisement
ಸಿಎಂ: ನೋಡ್ರಿ ನಾನು ಸಿಎಂ ಅಂತಾ ಅಂಜಿಕೆ ಇಟ್ಕೋಬೇಡಿ. ಅರಾಮಾಗಿ ನಿಮ್ಮ ಕೆಲಸ ನೀವು ಮಾಡಿ. (ಆಯ್ತು ಸರ್. ಖಂಡಿತ)
ಸಿಎಂ: ನಾನು ಈ ಕ್ಷಣಕ್ಕೆ ನಿಮಗೆ ಸಿಎಂ ಅಲ್ಲ. ನೀವು ಒಂದ್ ಕೇಸ್‌ನಲ್ಲಿ ನನಗೆ ನೋಟಿಸ್ ಕೊಟ್ಟು ಕರೆಸಿದ್ದೀರಾ, ನಾನು ಬಂದಿದ್ದೇನೆ. ನಿಮ್ಮ ಪ್ರೊಸಿಜರ್ ಹೇಗಿದೆಯೋ ಹಾಗೆ ಮಾಡಿ. (ಎಲ್ಲರಿಗೂ ಯಾವ ರೀತಿ ವಿಚಾರಣೆ ಇರುತ್ತೋ ಅದೇ ರೀತಿಯೆ ನಿಮ್ಮ ವಿಚಾರಣೆಯೂ ಮಾಡ್ತಿವಿ ಸರ್)
ಸಿಎಂ: ನೀವು ಏನೂ ಪ್ರಶ್ನೆ ಬೇಕಾದರೂ ಕೇಳಿ. ನನಗೆ ಗೊತ್ತಿರುವುದನ್ನು ಹೇಳ್ತೀನಿ. (ಖಂಡಿತ ಸರ್)
ಸಿಎಂ: ಕಾನೂನಿನಲ್ಲಿ ಅವಕಾಶ ಇದ್ದರೆ ಕಾಫಿ ತರಿಸಿ. ಇಲ್ಲದ್ದಿದ್ದರೆ ಬೇಡ. (ತರಿಸಬಹುದು ತರಿಸ್ತೀವಿ ಸರ್ ಈಗ).
ಸಿಎಂ: ಎಷ್ಟು ಸಮಯವಾದರೂ ತೆಗೆದುಕೊಳ್ಳಿ. ಯಾವ ಗಡಿಬಿಡಿಯೂ ಬೇಡ. ವಿಚಾರಣೆ ಸುದೀರ್ಘವಾಗುವುದಾದರೆ ಸ್ವಲ್ಪ ಬ್ರೇಕ್ ಕೊಡಿ ಸಾಕು. (ವಿಚಾರಣೆ ಶುರು ಮಾಡ್ತೀವಿ. ಇಷ್ಟೇ ಸಮಯ ಅಂತಾ ಹೇಳೋಕೆ ಆಗಲ್ಲ ಸರ್. ದೀರ್ಘಾವಾದರೆ ಬ್ರೇಕ್ ಪಡೆಯೋಣ ಸರ್)