ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮಗಳು (MUDA Scam_ ಬಗೆದಷ್ಟು ಬಯಲಾಗ್ತಿವೆ. ಈ ಹೊತ್ತಲ್ಲೇ ಲೋಕಾಯುಕ್ತ (Karnataka Lokayukta) ಎಂಟ್ರಿ ಕೊಟ್ಟಿದೆ.
ಮೈಸೂರು (Mysuru) ಹಿನಕಲ್‌ನ ಸರ್ವೆ ನಂಬರ್ 89ರ 7.18 ಎಕರೆ ಭೂಮಿಯನ್ನು 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ನಿವೇಶನ ರೂಪದಲ್ಲಿ ನೀಡಿರುವ ಆರೋಪ ಸಂಬಂಧ ಲೋಕಾಯುಕ್ತ ತನಿಖೆಗೆ ಇಳಿದಿದೆ. 2017ರ ಅವಧಿಯಲ್ಲಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದ್ದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಇದನ್ನೂ ಓದಿ: ಹಿರಿಯ ಅಧಿಕಾರಿ ವಿರುದ್ಧ IAF ಫ್ಲೈಯಿಂಗ್ ಸ್ಕ್ವಾಡ್ ಮಹಿಳಾಧಿಕಾರಿಯಿಂದ ಅತ್ಯಾಚಾರ ಆರೋಪ – ಕೇಸ್ ದಾಖಲು
2017ರಲ್ಲಿ ದೂರು:
2017ರಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದರು. ಸರ್ಕಾರದ ಅನುಮತಿ ಪಡೆದು 2022ರಲ್ಲಿ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದರು. ಹಿನಕಲ್ ಸರ್ವೇ ನಂಬರ್ 89ರ ನಿವೇಶನ ಹಂಚಿಕೆ ಸಂಬಂಧ ಮುಡಾದ 7.18 ಗುಂಟೆ ಜಮೀನಿನಲ್ಲಿ ನಿವೇಶನ ಮಾಡಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ಹಂಚಿರುವ ಆರೋಪ ಇದಾಗಿದೆ. ಮುಡಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.
ಇದೇ ಹೊತ್ತಲ್ಲಿ ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿಟಿವಿ, ಡಿವಿಆರ್ ನಾಪತ್ತೆಯಾಗಿವೆ. ಮುಡಾದ ಕೆಲ ಅಧಿಕಾರಿಗಳು ಸಿಸಿಟಿವಿ ಮತ್ತು ಡಿವಿಆರ್ ಅನ್ನು ಕೊಂಡೊಯ್ದ ಅನುಮಾನ ವ್ಯಕ್ತವಾಗಿದೆ. ಇದು ಡಿಜಿಟಲ್ ಸಾಕ್ಷ್ಯ ಆಗಬಹುದೆಂಬ ಕಾರಣಕ್ಕೆ ಅವರು ಸಾಕ್ಷ್ಯ ನಾಶಕ್ಕಾಗಿ ಇವನ್ನು ತೆರವು ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಮುಡಾದ ಹಾಲಿ ಆಯುಕ್ತರು, ಮುಡಾ ಕಟ್ಟಡ ನಿರ್ವಹಣೆ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ
ಮುಡಾ ಕೇಸಲ್ಲಿ ಒಂದೊಮ್ಮೆ ಸಿದ್ದರಾಮಯ್ಯ ಕುರ್ಚಿ ತೊರೆಯುವ ಸನ್ನಿವೇಶ ಸೃಷ್ಟಿಯಾದ್ರೆ ಸಿಎಂ ಆಗೋಣ ಎನ್ನುತ್ತಾ ಕಾಂಗ್ರೆಸ್‌ನ ಹಲವು ಪ್ರಮುಖರು ಕಸರತ್ತು ಶುರುಮಾಡಿದ್ದಾರೆ. ಸಚಿವರಾದ ಎಂಬಿ ಪಾಟೀಲ್ ಸೇರಿ ಹಲವರು ದೆಹಲಿಗೆ ತೆರಳಿರೋದು ಕುತೂಹಲ ಮೂಡಿಸಿದೆ. ಇಲಾಖೆಗೆ ಸಂಬಂಧಿಸಿ ಕೇಂದ್ರ ಸಚಿವರಾದ ಕುಮಾರಸ್ವಾಮಿ, ರಾಜನಾಥ್‌ಸಿಂಗ್‌ರನ್ನು ಭೇಟಿಯಾಗಿರೋ ಎಂಬಿ ಪಾಟೀಲ್, ಬುಧವಾರ ರಾಹುಲ್ ಗಾಂಧಿಯನ್ನು ಭೇಟಿ ಮಾಡೋ ಸಾಧ್ಯತೆಯಿದೆ. ಸದ್ಯ ಅಮೆರಿಕ ಪ್ರವಾಸದಲ್ಲಿರೋ ರಾಹುಲ್ ಗಾಂಧಿ, ಬುಧವಾರ (ಸೆ.11) ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 11ರ ಪ್ರೋಮೋ ಔಟ್- ಹೊಸ ಅಧ್ಯಾಯ ಬರೆಯಲು ಸಜ್ಜಾದ ದೊಡ್ಮನೆ!