– ದಿನಾಂಕಗಳನ್ನು ಬದಲಿಸಲು ಸಾಧ್ಯವಿಲ್ಲ
ನವದೆಹಲಿ: ರಂಜಾನ್ ತಿಂಗಳಲ್ಲಿ ಮತದಾನದ ದಿನಾಂಕ ನಿಗದಿಯಾಗಿದ್ದನ್ನು ಕೆಲ ಮುಸ್ಲಿಂ ನಾಯಕರು ವಿರೋಧಿದ್ದರು. ಇದೀಗ ಚುನಾವಣೆ ಆಯೋಗ ಹಬ್ಬಗಳನ್ನು ಗಮನದಲ್ಲಿ ಇರಿಸಿಯೇ ಶುಕ್ರವಾರದಂದು ಮತದಾನ ದಿನಾಂಕ ನಿಗದಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಜೂನ್ 2ರ ಮೊದಲು ದೇಶದಲ್ಲಿ ಹೊಸ ಸರ್ಕಾರ ರಚನೆ ಆಗಬೇಕಿದೆ. ಹಾಗಾಗಿ ಒಂದು ತಿಂಗಳು ನಡೆಯುವ ಚುನಾವಣೆ ದಿನಾಂಕಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡ ಚುನಾವಣಾ ಆಯೋಗ ಯಾವುದೇ ಶುಕ್ರವಾರ ಮತ್ತು ಹಬ್ಬದ ದಿನದಂದು ಮತದಾನದ ದಿನವನ್ನು ನಿಗದಿ ಮಾಡಿಲ್ಲ. ಸದ್ಯ ಲಭ್ಯವಿರುವ ದಿನಗಳಲ್ಲಿ ದಿನಾಂಕಗಳನ್ನು ಬದಲಾಯಿಸಲು ಅವಕಾಶವಿಲ್ಲ ಎಂದು ತಿಳಿಸಿದೆ.
Advertisement
Advertisement
ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಮತದಾನದ ದಿನಾಂಕ ರಂಜಾನ್ ತಿಂಗಳಲ್ಲಿ ಬರಲಿದೆ. ಈ ಹಿನ್ನೆಲೆಯಲ್ಲಿ ಮೂರು ರಾಜ್ಯಗಳ ಕೆಲ ಮುಸ್ಲಿಂ ನಾಯಕರು ಚುನಾವಣಾ ಆಯೋಗದ ಮೇಲೆ ಬೇಸರ ವ್ಯಕ್ತಪಡಿಸಿ, ದಿನಾಂಕವನ್ನು ಬದಲಿಸುವಂತೆ ಮನವಿ ಮಾಡಿಕೊಂಡಿದ್ದರು.
Advertisement
ಕೋಲ್ಕತ್ತಾ ಮೇಯರ್, ಟಿಎಂಸಿ ನಾಯಕ ಫಿರ್ಹಾದ್ ಹಕಿಮ್, ಚುನಾವಣಾ ಆಯೋಗ ಸಾಂವಿಧಾನಿಕ ಅಂಗವಾಗಿದ್ದು, ನಾವು ಸಹ ಗೌರವಿಸುತ್ತೇವೆ. ಹಾಗಾಗಿ ಚುನಾವಣಾ ಆಯೋಗದ ವಿರುದ್ಧ ಏನು ಮಾತನಾಡಲ್ಲ. ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗದ ನಿರ್ಧಾರದಂತೆ ಕೆಲ ಮತದಾನ ದಿನಗಳ ರಂಜಾನ್ ಮಾಸದಲ್ಲಿ ಬರಲಿದ್ದು, ಮುಸ್ಲಿಂ ಸಮುದಾಯದವರಿಗೆ ಕಷ್ಟವಾಗಲಿದೆ ಎಂದು ಹೇಳಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ರಂಜಾನ್ ಮಾಸದಲ್ಲಿ ಮತದಾನದ ದಿನ ಬಂದಿದ್ದರಿಂದ ಯಾವುದೇ ತೊಂದರೆ ಇಲ್ಲ. ಉಪವಾಸ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಬಹುತೇಕ ಮುಸ್ಲಿಮರು ರಂಜಾನ್ ಮಾಸದಲ್ಲಿ ವಿಶ್ರಾಂತಿಯಲ್ಲಿರುತ್ತಾರೆ. ರಂಜಾನ್ ನಲ್ಲಿ ಉಪವಾಸ (ರೋಜಾ)ದ ಜೊತೆಗೆ ಅದೇ ಹುಮ್ಮಸ್ಸಿನೊಂದಿಗೆ ಮತದಾನ ಮಾಡೋಣ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv