ಚೆನ್ನೈ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರು (Rahul Gandhi) ತಮಿಳುನಾಡಿನ (Tamil Nadu) ಸಿಂಗಾನಲ್ಲೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಅನಿರೀಕ್ಷತವಾಗಿ ಬೇಕರಿಯೊಂದಕ್ಕೆ ಭೇಟಿ ನೀಡಿ ಅವರ ಇಷ್ಟದ ಗುಲಾಬ್ ಜಾಮೂನನ್ನು (Tamil Nadu) ಖರೀದಿಸಿದ್ದಾರೆ.
ರಾಹುಲ್ ಗಾಂಧಿಯವರು ಕೊಯಮತ್ತೂರಿನ ಸಭೆಗೆ ತೆರಳುತ್ತಿದ್ದರು. ಈ ವೇಳೆ ಬೇಕರಿಯೊಂದರ ಬಳಿ ಕಾರು ನಿಲ್ಲಿಸಿ ಜಾಮೂನನ್ನು ಖರೀದಿಸಿದ್ದಾರೆ. ಸುಮಾರು ಒಂದು ಕಿಲೋ ಸ್ವೀಟ್‍ನ್ನು ಅವರು ಖರೀದಿಸಿದರು. ಮೊದಲು ಸ್ಯಾಂಪಲ್ ನೋಡಿ ಸಿಹಿತಿಂಡಿಯನ್ನು ಖರೀದಿಸಿದರು. ಅವರು ನನ್ನ ಅಂಗಡಿಗೆ ಬಂದಿದ್ದರಿಂದ ಸಂತೋಷವಾಯಿತು. ನಾವು ರಾಹುಲ್ ಅವರಿಗೆ ಹಣ ಪಾವತಿಸಬಾರದೆಂದು ಕೇಳಿಕೊಂಡೆವು. ಆದರೂ ಅವರು ಹಣ ಪಾವತಿಸಿದ್ದಾರೆ ಎಂದು ಅಂಗಡಿ ಮಾಲೀಕ ಬಾಬು ಅವರು ಹೇಳಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ
Advertisement
ಇದಕ್ಕೂ ಮುನ್ನ ಸಭೆಯೊಂದರಲ್ಲಿ ರಾಹುಲ್ ಗಾಂಧಿಯವರು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರದ ಚುನಾವಣಾ ಬಾಂಡ್ ಯೋಜನೆ ಜಗತ್ತಿನಲ್ಲಿ ಯಾರೂ ಮಾಡಿರದ ದೊಡ್ಡ ಭ್ರಷ್ಟಾಚಾರವಾಗಿದೆ. ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು ಬಿಜೆಪಿ ವಾಷಿಂಗ್ ಮೆಷಿನ್‍ನ್ನು ನಿರ್ವಹಿಸುತ್ತಿದೆ. ಯಾರು ಪಕ್ಷಕ್ಕೆ ದೇಣಿಗೆ ನೀಡಿದರೂ ಅಥವಾ ಹಣ ನೀಡುತ್ತಾರೆ. ಅವರು ಎಷ್ಟು ಹಣ ನೀಡಿದರೂ ಅವರ ಹೆಸರು ಯಾರಿಗೂ ತಿಳಿಯುವುದಿಲ್ಲ ಎಂದು ಅವರು ಅರೋಪಿಸಿದರು.
Advertisement
Advertisement
ಈ ಯೋಜನೆಯನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಹಣ ನೀಡಿದವರ ಹೆಸರನ್ನು ಬಿಡುಗಡೆ ಮಾಡಲು ಒತ್ತಾಯಿಸಿದೆ. ಸಿಬಿಐ, ಇಡಿ ಅಥವಾ ಆದಾಯ ತೆರಿಗೆ ಇಲಾಖೆಯಿಂದ ವಿಚಾರಣೆ ಎದುರಿಸುತ್ತಿರುವ ಕಂಪನಿಗಳು ಬಿಜೆಪಿಗೆ ಗಮನಾರ್ಹ ಮೊತ್ತವನ್ನು ದೇಣಿಗೆ ನೀಡಿವೆ. ದೇಣಿಗೆ ನೀಡಿದ ಉದ್ಯಮಿಗಳಿಗೆ ಬಿಜೆಪಿ ಗುತ್ತಿಗೆ ನೀಡಿದೆ. ಈ ಮೂಲಕ ಬಿಜೆಪಿ ಸುಲಿಗೆಗೆ ಇಳಿದಿದೆ ಎಂದು ಅವರು ಅರೋಪಿಸಿದ್ದಾರೆ.
Advertisement
ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಸಾರ್ವತ್ರಿಕ ಚುನಾವಣೆಯ 1 ನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತಗಳ ಎಣಿಕೆಯನ್ನು ನಿಗದಿಪಡಿಸಲಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ನೇತೃತ್ವದ ಮೈತ್ರಿ ಗೆದ್ದಿದೆ. ರಾಜ್ಯದ 39 ಸ್ಥಾನಗಳಲ್ಲಿ 38 ಕಾಂಗ್ರೆಸ್-ಡಿಎಂಕೆ ಮೈತ್ರಿ, ಎಐಎಡಿಎಂಕೆ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಮೋದಿ ಆಗಮನ – ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್ ಅಭ್ಯರ್ಥಿ