ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರ ಪತ್ನಿ ಸುನಿತಾ ಕೇಜ್ರಿವಾಲ್ (Sunitha Kejriwal) ಅವರನ್ನು ಲೋಕಸಭೆ ಚುನಾವಣಾ (Lok Sabha Election) ಪ್ರಚಾರ ಅಖಾಡಕ್ಕೆ ಇಳಿಸಲು ಆಪ್ (AAP) ನಿರ್ಧರಿಸಿದೆ.
ದೆಹಲಿ ಮದ್ಯ ಹಗರಣ (Delhi Liquor Scam) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ನ್ಯಾಯಾಂಗ ಬಂಧನಲ್ಲಿದ್ದಾರೆ. ಈ ಹಿನ್ನಲೆ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಆಪ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ನಾಳೆಯಿಂದ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಸುನೀತಾ ಕೇಜ್ರಿವಾಲ್ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ. ಸುನೀತಾ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ ಅವರು ರಾಜಕೀಯವಾಗಿ ಗುರುತಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಕಾರು ಅಪಫಾತ – ಶಾಸಕ ಎ.ಆರ್ ಕೃಷ್ಣಮೂರ್ತಿ ಅಪಾಯದಿಂದ ಪಾರು
Advertisement
Advertisement
ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಸುನೀತಾ ಕೇಜ್ರಿವಾಲ್ ಅವರು ವೀಡಿಯೊ ಸಂದೇಶಗಳು ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಮುನ್ನಲೆಗೆ ಬಂದಿದ್ದಾರೆ. ಕೇಜ್ರಿವಾಲ್ ಬಂಧನ ಖಂಡಿಸಿ ದೆಹಲಿಯಲ್ಲಿ ವಿಪಕ್ಷಗಳು ನಡೆಸಿದ ಸಮಾವೇಶದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದರು. ಇತ್ತಿಚೇಗೆ ಛತ್ತಿಸ್‌ಘಡದಲ್ಲಿ ನಡೆದ INDIA ಒಕ್ಕೂಟದ ಸಭೆಯಲ್ಲಿ ಅವರು ಪಕ್ಷವನ್ನು ಪ್ರತಿನಿಧಿಸಿದ್ದರು. ಇದನ್ನೂ ಓದಿ: ಡೇಟಾ ಟ್ರಾಫಿಕ್- ಚೀನಾ ಕಂಪನಿ ಹಿಂದಿಕ್ಕಿದ ರಿಲಯನ್ಸ್
Advertisement
ಈ ನಡುವೆ ನ್ಯಾಯಾಂಗ ಬಂಧನದಲ್ಲಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಬಂಧನವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದು ಇಡಿ (ED) ಈಗ ಅಫಿಡವಿಟ್ ಸಲ್ಲಿಸಿದೆ. 9 ಬಾರಿ ಸಮನ್ಸ್ ನೀಡಿದ್ದರೂ ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಸಹಕರಿಸಲಿಲ್ಲ, ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು ಈ ಕಾರಣಕ್ಕೆ ಅವರನ್ನು ಬಂಧಿಸುವ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ಹೇಳಿದೆ.
ಅಕ್ರಮ ಹಣ ವರ್ಗಾವಣೆಯ ಅಪರಾಧದಲ್ಲಿ ತಪ್ಪಿತಸ್ಥನೆಂದು ಸಾಬೀತು ಪಡಿಸಲು ಇಡಿ ಬಳಿ ಸಾಕ್ಷ್ಯಗಳಿದೆ. ಕೇಜ್ರಿವಾಲ್ ಅವರನ್ನು ಪ್ರಾಮಾಣಿಕವಾಗಿ ಬಂಧಿಸಲಾಗಿದೆಯೇ ಹೊರತು ಯಾವುದೇ ದುರುದ್ದೇಶ ಅಥವಾ ಬಾಹ್ಯ ಕಾರಣಗಳಿಗಾಗಿ ಅಲ್ಲ ಎಂದ ಇಡಿ ದುರುದ್ದೇಶಪೂರ್ವಕವಾಗಿ ಬಂಧಿಸಿದೆ ಎನ್ನುವ ಆರೋಪ ನಿರಾಕರಿಸಿದೆ. ಈ ಅಂಶಗಳ ಮೇಲೆ ಕೋರ್ಟ್ ಶೀಘ್ರದಲ್ಲಿ ವಿಚಾರಣೆ ನಡೆಸಲಿದೆ.