ಲಕ್ನೋ: ಸಚಿವರು, ಪ್ರಮುಖ ಶಾಸಕರನ್ನು ಲೋಕಸಭೆ ಚುನಾವಣೆಗೆ (Lok Sabha Elections) ಕಣಕ್ಕಿಳಿಸುವ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದ್ದು ಇಂತಹದೇ ಪ್ರಯತ್ನವನ್ನು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (Samajwadi Party) ಕಾರ್ಯರೂಪಕ್ಕೆ ತರಲು ತಯಾರಿ ಆರಂಭಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಪ್ರಮುಖ ಶಾಸಕರನ್ನು ಸ್ಪರ್ಧಿಸಲು ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಸೂಚಿಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಅಖಿಲೇಶ್ ಯಾದವ್ ಈ ಸೂಚನೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿರುವಷ್ಟು ಸ್ಥಾನಗಳನ್ನು ಕಾಂಗ್ರೆಸ್‌ಗೆ (Congress) ನೀಡಲಾಗುವುದು, ಬಾಕಿ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಾಗುವುದು ಇಲ್ಲಿ ಶಾಸಕರ ಹೆಸರನ್ನು ಪರಿಗಣಿಸಲಾಗುವುದು, ಸ್ಪರ್ಧೆಗೆ ತಯಾರಿ ಇರುವಂತೆ ಅಖಿಲೇಶ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ವಿಗ್ರಹ ಕೆತ್ತನೆ ಕಾರ್ಯ ಯಶಸ್ವಿ- ಚಿತ್ರದುರ್ಗದ ಶಿಲ್ಪಿ ಮನೆಯಲ್ಲಿ ಸಂಭ್ರಮಾಚರಣೆ
Advertisement
Advertisement
ಚುನಾವಣೆ ಅವಧಿಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಾಮಾನ್ಯ ಜನರ ಸಮಸ್ಯೆಗಳತ್ತ ಗಮನ ಹರಿಸುವಂತೆ ಅಖಿಲೇಶ್ ತಮ್ಮ ನಾಯಕರಿಗೆ ಸಲಹೆ ನೀಡಿದ್ದಾರೆ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಬಿಜೆಪಿ ಅಸ್ತ್ರಕ್ಕೆ ಸಿಲುಕಿಕೊಳ್ಳಬಾರದು ಎಂದರು. ಮುಚ್ಚಿದ ಲಕೋಟೆಯಲ್ಲಿ ಶಾಸಕರಿಂದ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದ ಸಲಹೆಗಳನ್ನು ಸಹ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಅದರ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರ ಕೊಡಲಿ: ನಿಖಿಲ್
Advertisement
Advertisement
ಮಾಯಾವತಿ ನನಗಿಂತ ಹಿರಿಯರು ಎಂದು ಅಖಿಲೇಶ್ ಯಾದವ್ ಅವರು, ಮಹಾನ್ ನಾಯಕಿ ಮತ್ತು ನಾವೆಲ್ಲರೂ ಅವರನ್ನು ಗೌರವಿಸಬೇಕು. ಮೂಲಗಳ ಪ್ರಕಾರ, ಸಭೆಯಲ್ಲಿ ಹಲವು ಶಾಸಕರು ಸ್ವಾಮಿ ಪ್ರಸಾದ್ ಮೌರ್ಯ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ದೂರಿದರು. ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಅಖಿಲೇಶ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮುಂದಿನ 5 ವರ್ಷಗಳಲ್ಲಿ ಗುಜುರಾತ್‌ನಲ್ಲಿ 2 ಲಕ್ಷ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಠಿ – ಗೌತಮ್ ಅದಾನಿ ಘೋಷಣೆ