ಲೋಕಸಭಾ ಚುನಾವಣೆ 6ನೇ ಹಂತ; ಶೇ.59 ಮತದಾನ

Public TV
1 Min Read
lok sabha election 2024

ನವದೆಹಲಿ: ಆರನೇ ಹಂತದ ಚುನಾವಣೆ (Lok Sabha Elections 2024) ಸುಗಮವಾಗಿ ಮುಗಿದಿದೆ. ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮುಗಿದಿದೆ.

ದೆಹಲಿ, ಹರಿಯಾಣ ಸೇರಿ 8 ರಾಜ್ಯಗಳ 58 ಕ್ಷೇತ್ರಗಳ 889 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಸಂಜೆ ಐದು ಗಂಟೆ ಹೊತ್ತಿದೆ 58% ರಷ್ಟು ಮತ ಪ್ರಮಾಣ ನಮೂದಾಗಿದೆ. ದೆಹಲಿಯಲ್ಲಿ 54% ರಷ್ಟು ವೋಟಿಂಗ್ ಆಗಿದೆ. ಅಂತಿಮ ಚಿತ್ರಣ ಗೊತ್ತಾಗಲು ಒಂದೆರಡು ದಿನ ಹಿಡಿಯಲಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲು ತೂರಾಟ

lok sabha election 2024 1

ಇಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ವಿದೇಶಾಂಗ ಮಂತ್ರಿ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಣದೀಪ್ ಸುರ್ಜೆವಾಲಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಗಣ್ಯರು ದೆಹಲಿಯಲ್ಲಿ ಮತ ಚಲಾಯಿಸಿದರು. ಒಡಿಶಾದಲ್ಲಿ ನವೀನ್ ಪಟ್ನಾಯಕ್, ಹರಿಯಾಣದಲ್ಲಿ ಸಿಎಂ ನಯಾಬ್ ಸಿಂಗ್ ಸೈನಿ, ಮಾಜಿ ಸಿಎಂ ಮನೋಹರ್‌ಲಾಲ್ ಖಟ್ಟರ್, ರಾಂಚಿಯಲ್ಲಿ ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸೇರಿ ಹಲವು ಖ್ಯಾತನಾಮರು ವೋಟ್ ಮಾಡಿದರು.

ಬಂಗಾಳದ ಪಶ್ಚಿಮ ಮಿಡ್ನಾಪುರದಲ್ಲಿ ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನಗಳ ಮೇಲೆ ಟಿಎಂಸಿ ದಾಳಿ ನಡೆಸಿದೆ. ಇವಿಎಂ ಹ್ಯಾಕ್‌ಗೆ ಬಿಜೆಪಿ ಯತ್ನಿಸಿದೆ ಎಂದು ಟಿಎಂಸಿ ಆರೋಪಿಸಿದೆ. ಐದು ಇವಿಎಂಗಳಲ್ಲಿ ಬಿಜೆಪಿ ಟ್ಯಾಗ್ ಕಂಡುಬಂದಿದೆ ಎಂದು ದೂರಿದೆ. ಆದರೆ ಈ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ. ಈ ಮಧ್ಯೆ ಮೊದಲ ಐದು ಹಂತದ ಚುನಾವಣೆಯ ಕ್ಷೇತ್ರವಾರು ಮತದಾನದ ಅಂತಿಮ ಪ್ರಮಾಣವನ್ನು ಆಯೋಗ ರಿಲೀಸ್ ಮಾಡಿದೆ. ಇದನ್ನೂ ಓದಿ: ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

ಪೋಲ್ ಆದ ಮತಗಳ ಸಂಖ್ಯೆಯನ್ನು ಬದಲಿಸುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದೆ. ದೇಶದಲ್ಲಿ ಚುನಾವಣಾ ಪ್ರಕ್ರಿಯೆಗೆ ಹಾನಿಯುಂಟು ಮಾಡಲು ವ್ಯವಸ್ಥಿತ ಪ್ರಯತ್ನ ನಡೆದಿದೆ. ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆಯೋಗ ಆರೋಪ ಮಾಡಿದೆ.

Share This Article