ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Elections 2024) ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 102 ಸ್ಥಾನಗಳಿಗೆ ವೋಟಿಂಗ್ ನಡೆಯುತ್ತಿದೆ. ಸ್ಪರ್ಧಿಗಳಲ್ಲಿ ಸಚಿವರು, ಹಿರಿಯ ನಾಯಕರು ಮತ್ತು ಪ್ರಮುಖರು ಕಣದಲ್ಲಿದ್ದಾರೆ.
ನಿತಿನ್ ಗಡ್ಕರಿ (ಬಿಜೆಪಿ): ನಾಗ್ಪುರ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳಿಗಾಗಿ ದೇಶದ ಸುದೀರ್ಘ ಸೇವೆ ಸಲ್ಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರದಿಂದ ಹ್ಯಾಟ್ರಿಕ್ ಜಯ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧಿಸಿ 2014 ಮತ್ತು 2019 ರಲ್ಲಿ ಲೋಕಸಭೆಗೆ ಎಂಟ್ರಿ ಕೊಟ್ಟಿದ್ದರು. ಭಾರತದ ರಸ್ತೆ ಸಂಪರ್ಕವನ್ನು ವಿಸ್ತರಿಸುವಲ್ಲಿ ಗಡ್ಕರಿ ಅವರ ಕೆಲಸವು ಅವರ ರಾಜಕೀಯ ಪ್ರತಿಸ್ಪರ್ಧಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಗಡ್ಕರಿ ಅವರು ಕಾಂಗ್ರೆಸ್‌ನ ವಿಕಾಸ್ ಠಾಕ್ರೆ ವಿರುದ್ಧ ಕಣಕ್ಕಿಳಿದಿದ್ದಾರೆ. ಠಾಕ್ರೆ ನಾಗ್ಪುರದ ಮಾಜಿ ಮೇಯರ್ ಮತ್ತು ನಾಗಪುರ ಪಶ್ಚಿಮದಿಂದ ಹಾಲಿ ಶಾಸಕರಾಗಿದ್ದಾರೆ. ಇದನ್ನೂ ಓದಿ: Lok Sabha Polls: ಇಂದು ಮೊದಲ ಹಂತದ ಮತದಾನ- ಬೆಂಗಳೂರಿನಿಂದ ತಮಿಳುನಾಡಿನತ್ತ ಮತದಾರರು
Advertisement
Advertisement
ಕಿರಣ್ ರಿಜಿಜು (ಬಿಜೆಪಿ): ಅರುಣಾಚಲ ಪಶ್ಚಿಮ
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಅರುಣಾಚಲ ಪಶ್ಚಿಮದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರು 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ಪ್ರಸ್ತುತ ಭೂ ವಿಜ್ಞಾನ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ಖಾತೆಗಳನ್ನು ಹೊಂದಿದ್ದಾರೆ. ಅರುಣಾಚಲ ಪಶ್ಚಿಮದಲ್ಲಿ ಈ ಬಾರಿ ಅವರಿಗೆ ಸವಾಲು ಒಡ್ಡಿರುವುದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಬಮ್ ತುಕಿ.
Advertisement
ಕೆ ಅಣ್ಣಾಮಲೈ (ಬಿಜೆಪಿ): ಕೊಯಮತ್ತೂರು
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಬಿಜೆಪಿಯ ರಾಜ್ಯಾಧ್ಯಕ್ಷರೂ ಆದ ಕೆ.ಅಣ್ಣಾಮಲೈ ಜನಪ್ರಿಯತೆ ಗಳಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ, ಇಂಜಿನಿಯರಿಂಗ್ ಪದವೀಧರರಾಗಿರುವ ಅವರು ಐಐಎಂ-ಲಕ್ನೋದಲ್ಲಿ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. ಕೊಯಮತ್ತೂರಿನಲ್ಲಿ ಅಣ್ಣಾಮಲೈ ವಿರುದ್ಧ ಡಿಎಂಕೆ ಗಣಪತಿ ಪಿ.ರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸಿದೆ. ನಗರದ ಮಾಜಿ ಮೇಯರ್ ಆಗಿರುವ ರಾಜ್‌ಕುಮಾರ್ ಅವರು ಈ ಹಿಂದೆ ಎಐಎಡಿಎಂಕೆ ಜೊತೆಗಿದ್ದರು. ಅವರು ಕಲೆ ಮತ್ತು ಕಾನೂನಿನಲ್ಲಿ ಪದವಿಗಳನ್ನು ಹೊಂದಿದ್ದಾರೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಾಕ್ಟರೇಟ್ ಹೊಂದಿದ್ದಾರೆ.
Advertisement
ಗೌರವ್ ಗೊಗೊಯ್ (ಕಾಂಗ್ರೆಸ್) ಜೋರ್ಹತ್
ಕಾಂಗ್ರೆಸ್‌ನ ಪ್ರಮುಖ ಯುವ ಮುಖಗಳ ಪೈಕಿ ಗೌರವ್ ಗೊಗೊಯ್ ಅಸ್ಸಾಂನ ಕಲಿಯಾಬೋರ್‌ನಿಂದ ಎರಡು ಬಾರಿ ಸಂಸದರಾಗಿದ್ದಾರೆ. 2014 ಮತ್ತು 2019 ರ ಚುನಾವಣೆಯಲ್ಲಿ ಬಿಜೆಪಿ ಅಲೆಯ ಹೊರತಾಗಿಯೂ ಗೆಲ್ಲುವಲ್ಲಿ ಯಶಸ್ವಿಯಾದರು. ಡಿಲಿಮಿಟೇಶನ್ ನಂತರ ಕಲಿಯಾಬೋರ್ ಸ್ಥಾನವು ಅಸ್ತಿತ್ವದಲ್ಲಿಲ್ಲದ ನಂತರ ಅವರು ಈ ಬಾರಿ ಜೋರ್ಹತ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜೋರ್ಹತ್ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಪಾಲಾಗಿದೆ. ಗೊಗೊಯ್ ಅವರ ತಂದೆ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿ, ದಿವಂಗತ ತರುಣ್ ಗೊಗೊಯ್ ಕೂಡ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಜೋರ್ಹತ್‌ನಲ್ಲಿ ಬಿಜೆಪಿ ತನ್ನ ಹಾಲಿ ಸಂಸದ ಟೋಪೋನ್ ಕುಮಾರ್ ಗೊಗೋಯ್ ಅವರನ್ನು ಉಳಿಸಿಕೊಂಡಿದೆ.
ತಮಿಳಿಸೈ ಸೌಂದರರಾಜನ್ (ಬಿಜೆಪಿ) ಚೆನ್ನೈ ದಕ್ಷಿಣ
ತಮಿಳುನಾಡು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಬಿಜೆಪಿ ಅನುಭವಿ ಸೌಂದರರಾಜನ್ ಅವರನ್ನು 2019 ರಲ್ಲಿ ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದರು. ತಮಿಳುನಾಡಿನಲ್ಲಿ ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮಲು ಬಿಜೆಪಿ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಚುನಾವಣಾ ಅಖಾಡಕ್ಕೆ ತರಲಾಗಿದೆ. ವಿದ್ಯಾರ್ಹತೆಯಲ್ಲಿ ವೈದ್ಯೆಯಾಗಿದ್ದಾರೆ ಸೌಂದರರಾಜನ್. ಹಾಲಿ ಸಂಸದ ಹಾಗೂ ಡಿಎಂಕೆ ಅಭ್ಯರ್ಥಿ ತಮಿಳಚಿ ತಂಗಪಾಂಡಿಯನ್ ವಿರುದ್ಧ ಅವರು ಕಣಕ್ಕಿಳಿದಿದ್ದಾರೆ.
ನಕುಲ್ ನಾಥ್ (ಕಾಂಗ್ರೆಸ್) ಛಿಂದ್ವಾರಾ
ಮಧ್ಯಪ್ರದೇಶದ ಚಿಂದ್ವಾರದ ಹಾಲಿ ಸಂಸದ ನಕುಲ್ ನಾಥ್ ಈ ಬಾರಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಅವರ ಪುತ್ರ. ಛಿಂದ್ವಾರಾ ಕ್ಷೇತ್ರವನ್ನು ಅವರ ತಂದೆ ಒಂಬತ್ತು ಬಾರಿ ಪ್ರತಿನಿಧಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ನಕುಲ್ ನಾಥ್ ವಿರುದ್ಧ ಬಿಜೆಪಿ ವಿವೇಕ್ ಸಾಹು ಅವರನ್ನು ಕಣಕ್ಕಿಳಿಸಿದೆ. ಪ್ರತಿಷ್ಠೆಯ ಕದನವಾಗಿರುವ ಬಿಜೆಪಿ ಈ ಬಾರಿ ಛಿಂದ್‌ವಾರವನ್ನು ಗೆಲ್ಲಲು ತೀವ್ರ ಕಸರತ್ತು ನಡೆಸುತ್ತಿದೆ.
ಕೆ ಕನಿಮೊಳಿ (ಡಿಎಂಕೆ) ತೂತುಕ್ಕುಡಿ
ಎರಡು ಬಾರಿ ರಾಜ್ಯಸಭಾ ಸಂಸದರಾಗಿದ್ದ ಕನಿಮೊಳಿ ಅವರು 2019 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಸಂಸತ್ತಿನಲ್ಲಿ ವಿರೋಧ ಪಕ್ಷದ ಪ್ರಮುಖ ಧ್ವನಿಗಳಲ್ಲಿ ಅವರು ರಾಷ್ಟ್ರ ರಾಜಧಾನಿಯಲ್ಲಿ ಡಿಎಂಕೆಯ ಪ್ರಮುಖ ಮುಖವೂ ಹೌದು. ಅವರ ಚೊಚ್ಚಲ ಲೋಕಸಭೆ ಸ್ಪರ್ಧೆಯಲ್ಲಿ (2019) 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿಯ ತಮಿಳಿಸೈ ಸೌಂದರರಾಜನ್ ಎರಡನೇ ಸ್ಥಾನ ಪಡೆದಿದ್ದರು. ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಮಲಸಹೋದರಿ ಕನಿಮೊಳಿ ಅವರು ಎಐಎಡಿಎಂಕೆಯ ಶಿವಸಾಮಿ ವೇಲುಮಣಿ ಮತ್ತು ಬಿಜೆಪಿ ಬೆಂಬಲಿತ ತಮಿಳು ಮನಿಲಾ ಕಾಂಗ್ರೆಸ್ ಅಭ್ಯರ್ಥಿ ಎಸ್‌ಡಿಆರ್ ವಿಜಯಶೀಲನ್ ವಿರುದ್ಧ ಸ್ಪರ್ಧಿಸಿದ್ದಾರೆ.
ಸರ್ಬಾನಂದ ಸೋನೋವಾಲ್ (ಬಿಜೆಪಿ) ದಿಬ್ರುಗಢ
ಸರ್ಬಾನಂದ ಸೋನೋವಾಲ್ ಅವರು ಈ ಬಾರಿ ಬಿಜೆಪಿಯ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಕೇಂದ್ರ ಸಚಿವ ಮತ್ತು ಮಾಜಿ ಅಸ್ಸಾಂ ಮುಖ್ಯಮಂತ್ರಿ ಸೋನೋವಾಲ್ ಹಾಲಿ ರಾಜ್ಯಸಭಾ ಸಂಸದ. ಇವರ ವಿರುದ್ಧ ಇಂಡಿಯಾ ಬ್ಲಾಕ್ ಪಕ್ಷಗಳ ಬೆಂಬಲಿತ ಅಸ್ಸಾಂ ರಾಷ್ಟ್ರೀಯ ಪರಿಷತ್‌ನ ಲುರಿಂಜ್ಯೋತಿ ಗೊಗೊಯ್ ಸ್ಪರ್ಧಿಸಿದ್ದಾರೆ. ಅಸ್ಸಾಂನಲ್ಲಿ ಸಿಎಎ ವಿರೋಧಿ ಆಂದೋಲನದ ಪ್ರಮುಖ ಮುಖವಾದ ಗೊಗೊಯ್ ಅವರು ತಮ್ಮ ಎದುರಾಳಿ ಸೋನೊವಾಲ್ ಅವರಂತೆ ಆಲ್ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟದ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಜಿತಿನ್ ಪ್ರಸಾದ (ಬಿಜೆಪಿ) ಪಿಲಿಭಿತ್
2022 ರ ಉತ್ತರ ಪ್ರದೇಶ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೇರಿದ ನಂತರ ಜಿತಿನ್ ಪ್ರಸಾದ ಅವರು ಪಿಲಿಭಿತ್‌ನಲ್ಲಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ವರುಣ್ ಗಾಂಧಿ ಅವರನ್ನು ಬದಲಾಯಿಸಿತು. ಒಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿಶ್ವಾಸಾರ್ಹ ಸಹಾಯಕರಾಗಿದ್ದ ಪ್ರಸಾದ ಅವರು 2004 ಮತ್ತು 2009 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ 2014 ಮತ್ತು 2019 ರ ಚುನಾವಣೆಗಳಲ್ಲಿ ಸೋಲನುಭವಿಸಿದ್ದರು. ಬಿಜೆಪಿಗೆ ಬಂದ ನಂತರ ಅವರನ್ನು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರನ್ನಾಗಿ ನೇಮಿಸಲಾಯಿತು. ಕಾಂಗ್ರೆಸ್‌ನಿಂದ ಬೆಂಬಲಿತವಾಗಿರುವ ಸಮಾಜವಾದಿ ಪಕ್ಷದ ಐದು ಬಾರಿ ಶಾಸಕರಾಗಿರುವ ಭಗವತ್ ಸರನ್ ಗಂಗ್ವಾರ್ ಮತ್ತು ಬಹುಜನ ಸಮಾಜ ಪಕ್ಷದ ಅನಿಸ್ ಅಹ್ಮದ್ ಖಾನ್ ವಿರುದ್ಧ ಸ್ಪರ್ಧಿಸಿದ್ದಾರೆ.
ಕಾರ್ತಿ ಚಿದಂಬರಂ (ಕಾಂಗ್ರೆಸ್) ಶಿವಗಂಗಾ
ತಮಿಳುನಾಡಿನಲ್ಲಿ ಶಿವಗಂಗಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ನ ಕಾರ್ತಿ ಚಿದಂಬರಂ ಪ್ರಯತ್ನಿಸುತ್ತಿದ್ದಾರೆ. 2019 ರ ಚುನಾವಣೆಯಲ್ಲಿ ಅವರು ಗೆದ್ದ ಸ್ಥಾನವು ಅವರ ತಂದೆ ಮತ್ತು ಮಾಜಿ ಗೃಹ ಸಚಿವ ಪಿ ಚಿದಂಬರಂ ಅವರನ್ನು ಏಳು ಬಾರಿ ಆಯ್ಕೆ ಮಾಡಿದೆ. ಕಾರ್ತಿ ಚಿದಂಬರಂ ಅವರು 2014 ರಲ್ಲಿ ಶಿವಗಂಗಾದಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದರು. ಆದರೆ 2019 ರಲ್ಲಿ ಸ್ಥಾನವನ್ನು ಗೆಲ್ಲಲು ಪ್ರಬಲವಾದ ಪುನರಾಗಮನವನ್ನು ಮಾಡಿದರು. ಎಐಎಡಿಎಂಕೆಯ ಎ ಕ್ಸೇವಿಯರ್‌ದಾಸ್ ಮತ್ತು ಬಿಜೆಪಿಯ ದೇವನಾಥನ್ ಯಾದವ್ ಟಿ ವಿರುದ್ಧ ಸ್ಪರ್ಧಿಸಿದ್ದಾರೆ.