ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Elections 2024) ಮೊದಲ ಹಂತದ ಮತದಾನ ಇಂದು (ಶುಕ್ರವಾರ) ನಡೆಯಲಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆಯಲಿದೆ. ವ್ಯವಸ್ಥಿತ ಚುನಾವಣೆಗಾಗಿ 1.87 ಲಕ್ಷ ಮತಗಟ್ಟೆಗಳ ನಿರ್ಮಾಣ ಮಾಡಿದ್ದು, 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಿದೆ. ಇದನ್ನೂ ಓದಿ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!
Advertisement
Advertisement
ತಮಿಳುನಾಡಿನತ್ತ ಜನರು
ಉದ್ಯೋಗಕ್ಕಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ನೆರೆ ರಾಜ್ಯ ತಮಿಳುನಾಡಿನ ಜನರು ತಮ್ಮ ಹಕ್ಕು ಚಲಾಯಿಸಲು ತವರಿನೆಡೆಗೆ ಪ್ರಯಾಣ ಬೆಳೆಸಿದ್ದಾರೆ.
Advertisement
8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿಗಳು ಸೇರಿ ಒಟ್ಟು 16.63 ಕೋಟಿ ಮತದಾರರು ಮೊದಲ ಹಂತದಲ್ಲಿ ಮತದಾನಕ್ಕೆ ಅರ್ಹರಾಗಿದ್ದಾರೆ. ಇದರಲ್ಲಿ 3.51 ಕೋಟಿ ಯುವ ಮತದಾರರಿದ್ದು 35.67 ಲಕ್ಷ ಯುವ ಸಮೂಹ ಮೊದಲ ಸಲ ವೋಟಿಂಗ್ ಮಾಡಿದರೆ 14.14 ಲಕ್ಷ 85+ ವಯಸ್ಸಿನ ಹಿರಿಯ ಮತದಾರರು ತಮ್ಮ ಚಲಾಯಿಸಲಿದ್ದಾರೆ. ಮೊದಲ ಹಂತದಲ್ಲಿ 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಸೇರಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಚುನಾವಣಾ ಕಾರ್ಯಗಳಿಗೆ 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಚುನಾವಣಾ ಅಕ್ರಮ ತಡೆಯಲು 127 ಸಾಮಾನ್ಯ, 67 ಪೊಲೀಸ್, 167 ಖರ್ಚು ವೆಚ್ಚ ಸೇರಿ ಒಟ್ಟು 361 ಮಂದಿ ಚುನಾವಣಾ ಮೇಲ್ವಿಚಾರಕರನ್ನ ಆಯೋಗ ನೇಮಕ ಮಾಡಿದೆ.
Advertisement
ಚುನಾವಣೆ ನಡೆಯುತ್ತಿರುವ ರಾಜ್ಯಗಳು
ತಮಿಳುನಾಡಿನ ಎಲ್ಲ 39, ಉತ್ತರಾಖಂಡದ ಎಲ್ಲ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದ ಎಲ್ಲ 2 ಸ್ಥಾನಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12, ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚೆರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮೊದಲ ಹಂತದ ಚುನಾವಣೆಯಲ್ಲಿನ ಹೈವೋಲ್ಟೇಜ್ ಕ್ಷೇತ್ರಗಳು
ಬಿಕಾನೆರ್: (ರಾಜಸ್ಥಾನ )
ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
ಗೋವಿಂದ್ ರಾಮ್ ಮೇಘವಾಲ್ (ಕಾಂಗ್ರೆಸ್)
ಅಲ್ವಾರ್: (ರಾಜಸ್ಥಾನ)
ಭೂಪೇಂದರ್ ಯಾದವ್ (ಬಿಜೆಪಿ)
ಲಲಿತ್ ಯಾದವ್ (ಕಾಂಗ್ರೆಸ್)
ಛಿಂದ್ವಾರಾ: (ಮಧ್ಯ ಪ್ರದೇಶ)
ವಿವೇಕ್ ಬಂಟಿ ಸಾಹು (ಬಿಜೆಪಿ)
ನಕುಲ್ ಕಮಲ್ ನಾಥ್ (ಕಾಂಗ್ರೆಸ್)
ನಾಗ್ಪುರ:
ನಿತಿನ್ ಗಡ್ಕರಿ (ಬಿಜೆಪಿ)
ವಿಕಾಸ್ ಪಾಂಡುರಂಗ ಠಾಕ್ರೆ (ಕಾಂಗ್ರೆಸ್)
ಅರುಣಾಚಲ ಪಶ್ಚಿಮ
ಕಿರಣ್ ರಿಜಿಜು (ಬಿಜೆಪಿ)
ನಬಮ್ ತುಕಿ (ಕಾಂಗ್ರೆಸ್)
ಕೊಯಮತ್ತೂರು:
ಗಣಪತಿ ರಾಜ್ ಕುಮಾರ್ (ಡಿಎಂಕೆ)
ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ)
ಕೆ ಅಣ್ಣಾಮಲೈ (ಬಿಜೆಪಿ)
ಪಿ.ಆರ್ ನಟರಾಜನ್ (ಸಿಪಿಎಂ)
ಚೆನ್ನೈ ದಕ್ಷಿಣ :
ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ)
ಜೆ ಜಯವರ್ಧನ್ (ಎಐಎಡಿಎಂಕೆ)
ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ)
ನೀಲಗಿರಿ:
ಎ ರಾಜಾ (ಡಿಎಂಕೆ)
ಡಿ ಲೋಕೇಶ್ ತಮಿಳ್ಸೆಲ್ವನ್ (ಎಐಎಡಿಎಂಕೆ)
ಎಲ್ ಮುರುಗನ್ (ಬಿಜೆಪಿ)
ಶಿವಗಂಗಾ:
ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್)
ಕ್ಸೇವಿಯರ್‌ದಾಸ್ (ಎಐಎಡಿಎಂಕೆ)
ಡಿ ದೇವನಾಥನ್ ಯಾದವ್ (ಬಿಜೆಪಿ)
ಚೆನ್ನೈ ಸೆಂಟ್ರಲ್:
ದಯಾನಿಧಿ ಮಾರನ್ (ಡಿಎಂಕೆ)
ಬಿ ಪಾರ್ಥಸಾರಥಿ (ಡಿಎಂಡಿಕೆ)
ವಿನೋಜ್ ಪಿ ಸೆಲ್ವಂ (ಬಿಜೆಪಿ)
ತಿರುವಳ್ಳೂರ್:
ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್)
ಕೆ ನಲ್ಲ ತಂಬಿ (ಆಒಆಏ)
ಪೊನ್ ವಿ ಬಾಲಗಣಪತಿ (ಬಿಜೆಪಿ)
ಪಿಲಿಭಿತ್: (ಉತ್ತರ ಪ್ರದೇಶ )
ಜಿತಿನ್ ಪ್ರಸಾದ (ಬಿಜೆಪಿ)
ಭಗವತ್ ಶರಣ್ ಗಂಗ್ವಾರ್ (ಎಸ್‌ಪಿ)
ಅನಿಸ್ ಅಹ್ಮದ್ ಖಾನ್ (ಬಿಎಸ್ಪಿ)
ಗಯಾ: (ಬಿಹಾರ್)
ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ )
ಕುಮಾರ್ ಸರ್ವಜೀತ್ (ಆರ್‌ಜೆಡಿ)
ವಿಜಯ್ ಮಾಂಝಿ (ಜೆಡಿಯು)
ಜೋರ್ಹತ್: (ಅಸ್ಸಾಂ)
ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ)
ಗೌರವ್ ಗೊಗೊಯ್ (ಕಾಂಗ್ರೆಸ್)
ಹರಿದ್ವಾರ ( ಉತ್ತರಾಖಂಡ )
ವೀರೇಂದ್ರ ರಾವತ್ (ಕಾಂಗ್ರೆಸ್)
ತ್ರಿವೇಂದ್ರ ಸಿಂಗ್ ರಾವತ್ (ಬಿಜೆಪಿ)