Lok Sabha Election: ಶಿವಮೊಗ್ಗದಲ್ಲಿ ಅತಿ ಹೆಚ್ಚು, ರಾಯಚೂರಿನಲ್ಲಿ ಕಡಿಮೆ ಮತದಾನ

Public TV
1 Min Read
lok sabha elction vote

ಬೆಂಗಳೂರು: ಕರ್ನಾಟಕದ (Karnataka Election) 14 ಜಿಲ್ಲೆಗಳಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದ್ದು ಬೆಳಗ್ಗೆ 9 ಗಂಟೆಯ ವೇಳೆಯ ವೇಳೆ 9.45% ಮತದಾನ ದಾಖಲಾಗಿದೆ.

ಶಿವಮೊಗ್ಗದಲ್ಲಿ(Shivamogga) ಅತಿ ಹೆಚ್ಚು 11.39% ಮತದಾನ ನಡೆದರೆ ರಾಯಚೂರಿನಲ್ಲಿ (Raichuru) 8.27% ಮತದಾನ ದಾಖಲಾಗಿದೆ. ಹಲವೆಡೆ ಮತಯಂತ್ರಗಳು ಕೈಕೊಟ್ಟಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.

9 AM

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಬೇಕಿತ್ತು. ಆದರೆ ಬೀದರ್‌ ನಗರದ ನ್ಯಾಷನಲ್ ಕಾಲೇಜಿನರುವ ಮತಗಟ್ಟೆ ಸಂಖೆ 151 ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದಕ್ಕೆ ಮತದಾರರು ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ‌‌‌.

ರಾಯಚೂರಿನ ಸಿಂಧನೂರು ತಾಲೂಕಿನ ಕಲ್ಮಂಗಿ ಮತಗಟ್ಟೆಯಲ್ಲೂ ಮತಯಂತ್ರ ಕೈಕೊಟ್ಟಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಅರ್ಧ ಗಂಟೆ ವಿಳಂಬವಾಗಿದೆ. ಮತದಾನ ಮಾಡಲು ಮತಗಟ್ಟೆ ಕೇಂದ್ರ ಮುಂದೆ ಜನ ಕಾದು ಕುಳಿದ ಪ್ರಸಂಗ ನಡೆಯಿತು.

Share This Article