ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ಸ್ಟಾರ್ಸ್

Public TV
1 Min Read
tollywood stars

ಲೋಕಸಭೆ (Loksabha Elections) ಇಂದು (ಮೇ 13)  4ನೇ ಹಂತದ ಮತದಾನ ನಡೆಯುತ್ತಿದ್ದು, ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ ಸಾಲಿನಲ್ಲಿ ನಿಂತು ತೆಲುಗಿನ ಸ್ಟಾರ್ ನಟರು ವೋಟ್ ಮಾಡಿದ್ದಾರೆ. ಅಭಿಮಾನಿಗಳಿಗೂ ಮತ ಹಾಕುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

ತೆಲಂಗಾಣದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನಟ ಅಲ್ಲು ಅರ್ಜುನ್ (Allu Arjun) ಮತ್ತು ನಟ ಜ್ಯೂ.ಎನ್‌ಟಿಆರ್ (Jr.Ntr) ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜೊತೆಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಪತ್ನಿ ಸುರೇಖಾ ಮತ್ತು ಪುತ್ರಿ ಸುಶ್ಮಿತಾ ಅವರೊಂದಿಗೆ ಮತ ಚಲಾಯಿಸಿದ್ದರು. ಇದನ್ನೂ ಓದಿ:ಸಮರ್ಜಿತ್ ಲಂಕೇಶ್ ಅಭಿನಯದ ಚೊಚ್ಚಲ ಚಿತ್ರದ ಸಾಂಗ್ ರಿಲೀಸ್

fotojet 13

ಅದಷ್ಟೇ ಅಲ್ಲ, ‘ಆರ್‌ಆರ್‌ಆರ್’ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರು ಪತ್ನಿ ರಮಾ ಮತ್ತು ಮಗನ ಜೊತೆ ಬಂದು ವೋಟ್ ಮಾಡಿದ್ದಾರೆ. ದೇಶಕ್ಕೆ ನಾನು ಜವಾಬ್ದಾರಿಯುಳ್ಳವರು. ನಾವು ಕೇರ್ ಮಾಡುತ್ತೇವೆ ಎನ್ನುವುದನ್ನು ತೋರಿಸಿ. ಮತದಾರರಿಗೆ ಬಂದು ವೋಟ್ ಮಾಡಿ ಎಂದು ರಾಜಮೌಳಿ ಮನವಿ ಮಾಡಿದ್ದರು.

ಇನ್ನೂ ಪವನ್ ಕಲ್ಯಾಣ್ (Pawan Kalyan) , ಶ್ರೀಕಾಂತ್, ಸಂಗೀತ ನಿರ್ದೇಶಕ ಕೀರವಾಣಿ, ಮಂಚು ಮನೋಜ್ ಸೇರಿದಂತೆ ಅನೇಕು ಮತದಾನ ಮಾಡಿದ್ದಾರೆ. ಮತ ಚಲಾಯಿಸುವಂತೆ ಜನತೆಗೆ ಕರೆ ನೀಡಿದ್ದಾರೆ.

Share This Article