ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಿಗೆ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದ್ದು, ಶೇ.69.23 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಆದರೆ ಬೆಂಗಳೂರು ಭಾಗದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಕೇಂದ್ರದಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಇದನ್ನೂ ಓದಿ: KSRTC ಬಸ್ ಬದಲಿಗೆ ಕಾರಿನಲ್ಲಿ ಮತಪೆಟ್ಟಿಗೆ ರವಾನೆ – ವಾಹನ ತಡೆದು ಗ್ರಾಮಸ್ಥರ ಆಕ್ರೋಶ
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಉಡುಪಿ-ಚಿಕ್ಕಮಗಳೂರು 76.06%, ಹಾಸನ 77.51%, ದಕ್ಷಿಣ ಕನ್ನಡ 77.43%, ಚಿತ್ರದುರ್ಗ 73.11%, ತುಮಕೂರು 77.70%, ಮಂಡ್ಯ 81.48%, ಮೈಸೂರು70.45%, ಚಾಮರಾಜನಗರ 76.59%, ಬೆಂಗಳೂರು ಗ್ರಾಮಾಂತರ 67.29%, ಬೆಂಗಳೂರು ಉತ್ತರ 54.42%, ಬೆಂಗಳೂರು ಕೇಂದ್ರ 52.81%, ಬೆಂಗಳೂರು ದಕ್ಷಿಣ 53.15%, ಚಿಕ್ಕಬಳ್ಳಾಪುರ 76.82%, ಕೋಲಾರ 78.07% ರಷ್ಟು ಮತದಾನ ನಡೆದಿದೆ.