ಬೆಂಗಳೂರು: ಪ್ರಧಾನಿ ಮೋದಿಯವರ (PM Narendra Modi) ಅವರ ಕರ್ನಾಟಕ ಭೇಟಿ ಕಾರ್ಯಕ್ರಮದಲ್ಲಿ ಮತ್ತೆ ಮಹತ್ವದ ಬದಲಾವಣೆಯಾಗಿದೆ.
ಏಪ್ರಿಲ್14 ರಂದು ಪ್ರಧಾನಿ ಮೋದಿಯವರ ಬೃಹತ್ ಸಮಾವೇಶವನ್ನು ಮಂಗಳೂರು (Mangaluru) ಬದಲು ಮೈಸೂರಿನಲ್ಲಿ (Mysuru) ಆಯೋಜಿಸಲಾಗಿದೆ. ಹಳೇಮೈಸೂರು (Old Mysuru) ಭಾಗದಲ್ಲಿ ಸಿದ್ದರಾಮಯ್ಯ (Siddaramaiah) ಟಾರ್ಗೆಟ್ ಮಾಡಿರುವ ದೋಸ್ತಿಗಳು ಮೈಸೂರಿಗೆ ಮೋದಿ ಅವರನ್ನು ಕರೆಸಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ, ಕಾಂಗ್ರೆಸ್ ಹೊಸತೊಡಕು ವಿರೋಧಿ: ಜೆಡಿಎಸ್ ಕಿಡಿ
Advertisement
Advertisement
ಮೋದಿಯವರು ಏಪ್ರಿಲ್ 14 ರಂದು ಮೈಸೂರಿಗೆ ಸಂಜೆ 4 ಗಂಟೆಗೆ ಬರಲಿದ್ದಾರೆ. ಅಂದು ಮಹಾರಾಜ ಮೈದಾನದಲ್ಲಿ ಆಯೋಜನೆಗೊಂಡಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮೋದಿ ಮಾತಾಡಲಿದ್ದಾರೆ. ಹಳೇ ಮೈಸೂರಿನ ನಾಲ್ಕು ಲೋಕಕ್ಷೇತ್ರಗಳನ್ನು ಟಾರ್ಗೆಟ್ ಇಟ್ಟುಕೊಂಡು ಮೋದಿಯವರು ಭಾಷಣ ಮಾಡಲಿದ್ದಾರೆ. ಈ ಸಮಾವೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಯಶಸ್ವಿ ಮಾಡಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಬಂಧನ ಬಳಿಕ ಎಎಪಿಗೆ ಮತ್ತೊಂದು ಶಾಕ್ – ಸಚಿವ ರಾಜ್ಕುಮಾರ್ ಆನಂದ್ ರಾಜೀನಾಮೆ
Advertisement
ಅಂದು ಸಂಜೆ 6 ಗಂಟೆಗೆ ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್ ಶೋ (Road Show) ನಡೆಸಲಿದ್ದಾರೆ. ಮಂಗಳೂರಿನ ನಾರಾಯಣ ಗುರು ಸರ್ಕಲ್ ನಿಂದ ನವಭಾರತ ವೃತ್ತದವರೆಗೆ 1.5 ಕಿ.ಮೀ ವರೆಗೆ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಮೋದಿಯವರ ಜತೆ ರೋಡ್ ಶೋ ವೇಳೆ ಪಕ್ಷದ ಅಭ್ಯರ್ಥಿ ಮಾತ್ರ ಇರುವಂತೆ ಸೂಚಿಸಲಾಗಿದೆ.
Advertisement