ಅಗ್ನಿಪಥ್ ಯೋಜನೆ ಟೀಕಿಸಿದ್ರೆ ರಾಜಕೀಯ ಆಗುತ್ತಾ? – ಆಯೋಗದ ಮೇಲೆ ಕಾಂಗ್ರೆಸ್ ಗರಂ

Public TV
1 Min Read
chidambaram

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಅಗ್ನಿಪಥ್ ಯೋಜನೆಯನ್ನು (Agnipath Scheme) ಕಾಂಗ್ರೆಸ್ (Congress) ರಾಜಕೀಯ ಅಸ್ತ್ರ ಮಾಡಿಕೊಂಡಿದೆ.

ಸರ್ಕಾರ ಬಂದರೆ ಅಗ್ನಿಪಥ್ ಯೋಜನೆ ರದ್ದು ಮಾಡುತ್ತೇವೆ ಎಂದು ರಾಹುಲ್ ಗಾಂಧಿ (Rahul Gandhi) ಬಂದಲ್ಲಿ ಹೋದಲ್ಲಿ ಘೋಷಣೆ ಮಾಡುತ್ತಿದ್ದಾರೆ. ಆದರೆ ಅಗ್ನಿಪಥ್ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗ (Election Commission) ಕಾಂಗ್ರೆಸ್ ಪಕ್ಷಕ್ಕೆ ತಾಕೀತು ಮಾಡಿತ್ತು. ಇದಕ್ಕೆ ಕಾಂಗ್ರೆಸ್ ತಗಾದೆ ತೆಗೆದಿದೆ. ಇದನ್ನೂ ಓದಿ: ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಸ್ವಾತಿ ಮಲಿವಾಲ್‌

Agnipath

ಅಗ್ನಿಪಥ್ ಯೋಜನೆಯ, ಅಗ್ನಿವೀರರ (Agniveer) ನೇಮಕಾತಿಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನವೇ ತಪ್ಪು ಎಂದು ಪಿ ಚಿದಂಬರಂ (P Chidambaram) ವ್ಯಾಖ್ಯಾನಿಸಿದ್ದಾರೆ. ಸರ್ಕಾರದ ನೀತಿಗಳನ್ನು ಟೀಕಿಸುವುದು ಸರ್ಕಾರದ ಹಕ್ಕು. ಅಗ್ನಿಪಥ್ ಯೋಜನೆಯನ್ನು ಸೇನೆಯೇ ವಿರೋಧಿಸಿದೆ. ಹೀಗಿರುವಾಗ ಅಗ್ನಿಪಥ ಯೋಜನೆಯನ್ನು ಟೀಕಿಸುವುದು ಪಾಲಿಟಿಕ್ಸ್ ಆಗುತ್ತಾ? ಚುನಾವಣಾ ಆಯೋಗದ ಪ್ರಕಾರ ರಾಜಕೀಯಕರಣ ಎಂದರೇ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಕೊಡುಗೆ

ಇವಿಕೆಎಸ್ ಇಳಂಗೋವನ್ ಅವರಂತೂ ಮೋದಿಯ (PM Modi) ಆಫೀಸ್ ಬಾಯ್‌ಗಳ ರೀತಿ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ. ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಗ್ನಿಪಥ್ ಯೋಜನೆಯ ಪರಿಣಾಮಗಳು ಮತ್ತು ಸಾಧಕಬಾಧಕಗಳ ಬಗ್ಗೆ ಸೇನೆ (Indian Army) ಆಂತರಿಕ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಸರ್ವೇ ಬಳಿಕ ಕೆಲವೊಂದು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ.

 

Share This Article