ಬಾಗಲಕೋಟೆ: ಬಾಲಾಕೋಟ್ ಮೇಲಿನ ಏರ್‌ಸ್ಟ್ರೈಕ್‌ಗೆ (Balakote Airstrike) ಸಂಬಂಧಿಸಿದಂತೆ ಪ್ರಧಾನಿ ಮೋದಿ (PM Narendra Modi) ಪಾಕಿಸ್ತಾನಕ್ಕೆ ಕರೆ ಮಾಡಿದ ವಿಚಾರವನ್ನು ಮೊದಲ ಬಾರಿಗೆ ಬಹಿರಂಗ ಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿ ಸಮಾವೇಶದಲ್ಲಿ (BJP Rally) ಮಾತನಾಡಿದ ಅವರು, ಈ ಮೋದಿ ಎದೆ ಉಬ್ಬಸಿ, ಕಣ್ಣಲ್ಲಿ ಕಣ್ಣಿಟ್ಟು ನಿಲ್ಲುತ್ತಾನೆ ಹೊರತು ಹಿಂದಿನಿಂದ ಮಾಡುವುದಿಲ್ಲ ಎಂದು ವಿರೋಧಿಗಳಿಗೆ ತಿವಿದರು. ಮುಖ್ಯವಾಗಿ ಬಾಲಾಕೋಟ್ ಏರ್ ಸ್ಟ್ರೈಕ್ ರಹಸ್ಯ ಬಿಚ್ವಿಟ್ಟ ಮೋದಿ, ಬಾಲಾಕೋಟ್ ಅಂದರೆ ಕೆಲವರು ಬಾಗಲಕೋಟೆ ಎಂದು ತಿಳಿದಿದ್ದರು ಎನ್ನುವ ಮೂಲಕ ವಿಪಕ್ಷಗಳನ್ನು ವ್ಯಂಗ್ಯವಾಡಿದರು.
Advertisement
ತಂತ್ರಜ್ಞಾನವನ್ನು ಬಳಸಿ ನಕಲಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನನ್ನದೇ ಧ್ವನಿ ಇರುವ ನಕಲಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುತ್ತಿದ್ದಾರೆ. ಅಂತಹ ಯಾವುದೇ ನಕಲಿ ವಿಡಿಯೋಗಳು ನಿಮಗೆ ಕಂಡು ಬಂದರೆ ಪೊಲೀಸ್ ಅಥವಾ ಪಕ್ಷದ ಗಮನಕ್ಕೆ ತನ್ನಿ.
— BJP Karnataka (@BJP4Karnataka) April 29, 2024
Advertisement
ನಂತರ ಭಾಷಣ ಮುಂದುವರೆಸಿದ ಮೋದಿ, ನಾವು ಬಾಲಾಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದೆವು. ಈ ಬಗ್ಗೆ ನಾನು ಪಾಕಿಸ್ತಾನಕ್ಕೆ (Pakistan) ನಾನು ಮೊದಲೇ ಸೂಚನೆ ನೀಡುತ್ತೇನೆ ಅಂತ ಹೇಳಿದ್ದೆ. ಆದರೆ ಆ ಸಮಯದಲ್ಲಿ ಪಾಕಿಸ್ತಾನದವರು ನನ್ನ ಪೋನ್ ಸ್ವೀಕರಿಸಲಿಲ್ಲ. ಕೊನೆಗೆ ರಾತ್ರಿ 12 ಗಂಟೆಗೆ ಅವರು ನನ್ನ ಫೋನ್ ರಿಸೀವ್ ಮಾಡಿದರು. ಅವರಿಗೆ ಏರ್ ಸ್ಟ್ರೈಕ್ ಬಗ್ಗೆ ತಿಳಿಸಿದೆ. ನಂತರ ಆ ವಿಷಯ ಇಡಿ ಜಗತ್ತಿಗೆ ಬಹಿರಂಗವಾಯ್ತು ಎಂದು ಮೋದಿ ಬಾಲಾಕೋಟ್ ಏರ್ ಸ್ಟ್ರೈಕ್ ರಹಸ್ಯವನ್ನ ಬಹಿರಂಗ ಪಡಿಸಿದರು.
Advertisement
ಇನ್ನು ಮುಂದೆ ನಮ್ಮ ಮೇಲೆ ದಾಳಿ ಮಾಡಿದರೆ ಈ ಹೊಸ ಭಾರತ ನಿಮ್ಮ ಮನೆಗೆ ನುಗ್ಗಿ ಹೊಡೆಯುತ್ತದೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಸಂದೇಶವನ್ನು ರವಾನಿಸಿದರು. ಇದನ್ನೂ ಓದಿ: ಚುನಾವಣೆಯಿಂದ 6 ವರ್ಷ ಮೋದಿ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
Advertisement
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರು ಛತ್ರಪತಿ ಶಿವಾಜಿ ಮಹಾರಾಜ್, ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ಮಹಾನ್ ವ್ಯಕ್ತಿಗಳಿಗೆ ಅಪಮಾನ ಮಾಡುತ್ತಲೇ ಬರುತ್ತಿದ್ದಾರೆ.
– ಪ್ರಧಾನಿ ಶ್ರೀ @narendramodi#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ pic.twitter.com/zO3j3kZ5vz
— BJP Karnataka (@BJP4Karnataka) April 29, 2024
ಪಕ್ಷದ ಅಭ್ಯರ್ಥಿಗಳಾದ ಬಾಗಲಕೋಟೆಯ ಪಿ.ಸಿ ಗದ್ದಿಗೌಡರ್ ಹಾಗೂ ವಿಜಯಪುರದ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಮತಯಾಚನೆ ಮಾಡಿದ ಮೋದಿ, ಯಾರೆಲ್ಲಾ ಚುನಾವಣೆ ಸೋತಿದ್ದಾರೆ ಅವರೆಲ್ಲ ನನ್ನ ಧ್ವನಿಯಲ್ಲಿ ಸಂಭಾಷಣೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಈ ರೀತಿ ನಿಮಗೆ ಯಾವುದಾದರೂ ವಿಷಯ ಗಮನಕ್ಕೆ ಬಂದರೆ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಸ್ಥಳೀಯ ಬಿಜೆಪಿ ನಾಯಕರಿಗೆ ತಿಳಿಸಿ. ಅದಕ್ಕಾಗಿ ನೀವು ಜಾಗೃತರಾಗಿರಿ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.