ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ (Lok Sabha Election) ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು (Vishweshwar Hegde Kageri) ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಬಿಜೆಪಿಯಿಂದ (BJP) ಆರು ಬಾರಿ ಶಾಸಕರಾದ ಕಾಗೇರಿ ಶಿಕ್ಷಣ ಸಚಿವರಾಗಿ ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮುಂದೆ ಸೋಲು ಕಂಡ ಇವರು ಇದೇ ಮೊದಲಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.
Advertisement
Advertisement
ಆಸ್ತಿ ಎಷ್ಟಿದೆ?
ವಿಶ್ವೇಶ್ವರ ಹೆಗಡೆ ಬಳಿ ಒಟ್ಟು 16.74 ಕೋಟಿ ರೂ. ಆಸ್ತಿಯಿದ್ದು ಪತ್ನಿ ಬಳಿ 79.32 ಲಕ್ಷ ರೂ. ಆಸ್ತಿಯಿದೆ. 6.69 ಕೋಟಿ ರೂ. ಸ್ಥಿರಾಸ್ತಿ 10.24 ಕೋಟಿ ರೂ. ಚರಾಸ್ತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಗಳ ಮೇಲಿನ ದಾಳಿ, ಅಪರಾಧಗಳ ವಿರುದ್ಧ ಅಮೆರಿಕದಲ್ಲಿ ನಿರ್ಣಯ ಮಂಡನೆ
Advertisement
ಪತ್ನಿ ಭಾರತಿ ಹೆಗಡೆ ಅವರಿಗಿಂತ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಹೆಚ್ಚಿನ ಚಿನ್ನ, ಬೆಳ್ಳಿ ಹೊಂದಿದ್ದಾರೆ. ಪತ್ನಿ ಬಳಿ 1.100 ಕೆ.ಜಿ. ಚಿನ್ನ ಇದ್ದರೆ ಕಾಗೇರಿ ಬಳಿ 1.250 ಕೆ.ಜಿ. ಚಿನ್ನ, 3.500 ಕೆ.ಜಿ. ಬೆಳ್ಳಿ ಹೊಂದಿದ್ದಾರೆ.
Advertisement
ಇವರ ಅವಿಭಕ್ತ ಕುಟುಂಬವು ಒಟ್ಟು 3.48 ಕೋಟಿ ರೂ. ಚರಾಸ್ತಿ ಮತ್ತು 2.05 ಕೋಟಿ ರೂ. ಸ್ಥಿರಾಸ್ತಿ ಹೊಂದಿದೆ. ಹೆಗಡೆಯವರು ಪತ್ನಿ, ಮಕ್ಕಳ ಹೆಸರಿನಲ್ಲಿ ಯಾವುದೇ ಜಮೀನು ಹೊಂದಿಲ್ಲ.
ಸಂಘ ಪರಿವಾರದ ದೀನದಯಾಳ ಟ್ರಸ್ಟ್‌ಗೆ 24.50 ಲಕ್ಷ ರೂ. ಕೈ ಸಾಲ ಕೊಟ್ಟಿದ್ದಾರೆ. ತನಗೆ ಯಾವುದೇ ಸಾಲಗಳಿಲ್ಲ ಎಂದು ತಮ್ಮ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.