ಡೆಹ್ರಾಡೂನ್: ಕೇಂದ್ರದ ಬಿಜೆಪಿ ನೇತೃತ್ವದ ಬಲಿಷ್ಠ ಸರ್ಕಾರದ ಅಡಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
ಋಷಿಕೇಶದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದುರ್ಬಲ ಮತ್ತು ಅಸ್ಥಿರ ಸರ್ಕಾರಗಳಿದ್ದಾಗ ಶತ್ರುಗಳು ಲಾಭ ಪಡೆದರು ಮತ್ತು ಭಯೋತ್ಪಾದನೆ (Terrorism) ಹರಡಿತು. ಆದರೆ ಬಲಿಷ್ಠ ಮೋದಿ ಸರ್ಕಾರದ (Modi Government) ಅಡಿಯಲ್ಲಿ ನಮ್ಮ ಪಡೆಗಳು ಅವರ ನೆಲದಲ್ಲೇ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನ- ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ದೋಸ್ತಿ ನಾಯಕರು!
Advertisement
आज देश में मोदी की मजबूत सरकार है, इसलिए…
– आतंकवादियों को घर में घुसकर मारा जाता है
– भारत का तिरंगा युद्ध क्षेत्र में भी सुरक्षा की गारंटी बन जाता है
– 7 दशक बाद जम्मू-कश्मीर से अनुच्छेद-370 निरस्त किया गया
– महिलाओं को लोकसभा, विधानसभा में आरक्षण मिला
– प्रधानमंत्री… pic.twitter.com/VOaSVwMeW9
— BJP (@BJP4India) April 11, 2024
Advertisement
ಪಾಕಿಸ್ತಾನದಲ್ಲಿ (Pakistan) ಅಡಗಿರುವ ಭಾರತಕ್ಕೆ ಬೇಕಾಗಿರುವ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿದ್ದು, ಈ ಹತ್ಯೆಗಳ ಹಿಂದೆ ಭಾರತದ ಪಾತ್ರವಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಇದನ್ನೂ ಓದಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು
Advertisement
ಭಾರತದಲ್ಲಿ ಸ್ಥಿರ ಸರ್ಕಾರದಿಂದ ಆಗುವ ಪ್ರಯೋಜನಗಳನ್ನು ಜನರು ನೋಡಿರುವುದರಿಂದ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಪ್ರತಿಧ್ವನಿ ದೇಶಾದ್ಯಂತ ಕೇಳಿಬರುತ್ತಿದೆ ಎಂದು ಹೇಳಿದರು.
Advertisement
कांग्रेस विकास और विरासत, दोनों की विरोधी है।
कांग्रेस ने प्रभु राम के अस्तित्व पर सवाल उठाए, राम मंदिर का विरोध किया, जितने अड़ंगे डालने थे डाले।
इसके बाद भी उन्हें प्राण-प्रतिष्ठा का निमंत्रण मिला, लेकिन कांग्रेस ने उसका भी बहिष्कार कर दिया।
– प्रधानमंत्री श्री… pic.twitter.com/QEqzXe14pK
— BJP (@BJP4India) April 11, 2024
ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಡಿಯಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ಗಡಿಯಲ್ಲಿ ರಸ್ತೆಗಳು ಮತ್ತು ಸುರಂಗಗಳನ್ನು ನಿರ್ಮಿಸಲಾಗುತ್ತಿದೆ ಎಂದು ದೂರಿದರು.
ಉತ್ತರಾಖಂಡದ ಪೂಜ್ಯ ದೇವತೆಗಳಾದ ಮಾ ಧಾರಿ ದೇವಿ ಮತ್ತು ಜ್ವಾಲಾ ದೇವಿಯಿಂದ ಸಂಕೇತಿಸಲ್ಪಟ್ಟ ʼಶಕ್ತಿʼ ಅನ್ನು ತೊಡೆದುಹಾಕುವ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಉತ್ತರಾಖಂಡದ ಜನರು ತಕ್ಕ ಉತ್ತರವನ್ನು ನೀಡಬೇಕೆಂದು ಅವರು ಮನವಿ ಮಾಡಿದರು.