ಬೆಂಗಳೂರು: ಸುಮಲತಾ ಅಂಬರೀಶ್ (Sumalatha Ambareesh) ಅವರ ಮಂಡ್ಯ ಪ್ರಚಾರ ರದ್ದಾಗಿದೆ.
ಇಂದಿನ ಪ್ರಚಾರದ ಬಗ್ಗೆ ಪಕ್ಷದಿಂದ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸದ ಕಾರಣ ರದ್ದಾಗಿದೆ. ಮಂಡ್ಯಕ್ಕೆ (Mandya) ತೆರಳದೇ ಬೆಂಗಳೂರಲ್ಲಿ ಸುಮಲತಾ ಅಂಬರೀಶ್ ಉಳಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಇಂದು ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪರ ಸುಮಲತಾ ಮತಯಾಚನೆ ಮಾಡುವ ಕಾರ್ಯಕ್ರಮ ಮಂಗಳವಾರ ನಿಗದಿಯಾಗಿತ್ತು. ಇದನ್ನೂ ಓದಿ: ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛ – ಈ ಬಾರಿಯೂ ಅಮೇಠಿಯಿಂದ ರಾಹುಲ್ ಸ್ಪರ್ಧೆ?
- Advertisement
- Advertisement
ಮಂಡ್ಯ ಸಂಸದೆಯಾಗಿ ಇಲ್ಲಿಯವರೆಗೆ ಹೆಚ್‌ಡಿಕೆ ಜೊತೆ ಪ್ರಚಾರದಲ್ಲಿ ಕಾಣಿಸಿಲ್ಲ. ಸುಮಲತಾ ನಡೆ ಬಗ್ಗೆ ದೋಸ್ತಿ ಪಾಳಯದಲ್ಲಿ ಈಗ ಭಾರೀ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್‌ನವ್ರಿಗೆ ಚೊಂಬು ಈಗಲೇ ಫಲಿತಾಂಶದ ರೂಪದಲ್ಲಿ ಕಾಣ್ತಿದೆ: ಅಮಿತ್ ಶಾ ತಿರುಗೇಟು
ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಪಕ್ಷೇತರವಾಗಿ ನಿಂತಿದ್ದ ಸುಮಲತಾಗೆ ಬಿಜೆಪಿ ಬೆಂಬಲ ನೀಡಿತ್ತು. ಈ ಬಾರಿ ಸುಮಲತಾ ಮಂಡ್ಯ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.