ಕಾಂಗ್ರೆಸ್‌ Vs ಬಿಜೆಪಿ – ಗ್ರಾಮೀಣ, ನಗರದ ಜನತೆ ಈ ಬಾರಿ ಯಾರ ಪರ? 2019 ರಲ್ಲಿ ಏನಾಗಿತ್ತು?

Public TV
2 Min Read
modi victory win bjp

– 2014, 2019ರಲ್ಲಿ ಬಿಜೆಪಿ ಪರ ಒಲವು

2014 ಮತ್ತು 2019ರ ಎರಡೂ ಲೋಕಸಭಾ ಚುನಾವಣೆಯಲ್ಲಿ (Lok Sabha Election) ನಗರ ಪ್ರದೇಶ (Urban) ಮತ್ತು ಗ್ರಾಮೀಣ (Rural) ಭಾಗದ ಜನರು ಬಿಜೆಪಿಯನ್ನು ಹೆಚ್ಚಿನ ಸಂಖ್ಯೆ ಮೆಚ್ಚಿಕೊಂಡಿದ್ದರಿಂದ ಎರಡೂ ಬಾರಿ ಎನ್‌ಡಿಎ (NDA) ಸರ್ಕಾರ ಅಧಿಕಾರಕ್ಕೆ ಏರಿದೆ.

ಹೌದು.ಕಾಂಗ್ರೆಸ್‌ (Congress) ತನ್ನ ಚುನಾವಣಾ ಪ್ರಚಾರದಲ್ಲಿ ಬಿಜೆಪಿ (BJP) ನಗರ ಪ್ರದೇಶದ ಪಕ್ಷ. ಗ್ರಾಮೀಣ ಭಾಗದ ಜನರ ಸಮಸ್ಯೆ ಬಿಜೆಪಿ ಗೊತ್ತಿಲ್ಲ ಎಂದು ಹೇಳುತ್ತಿತ್ತು. ಆದರೆ ಈಗ ನಗರ ಪ್ರದೇಶದ ಜನರಂತೆ ಗ್ರಾಮೀಣ ಭಾಗದ ಜನರು ಬಿಜೆಪಿಯನ್ನು ಮೆಚ್ಚಿಕೊಂಡಿದ್ದರಿಂದ ಎರಡು ಬಾರಿ ಮೋದಿ ಪ್ರಧಾನಿಯಾಗಿದ್ದಾರೆ.

udupi election vote

 

 

2019ರಲ್ಲಿ ಏನಾಯ್ತು?
ದೇಶದಲ್ಲಿ 202 ಗ್ರಾಮೀಣ ಕ್ಷೇತ್ರಗಳಿದ್ದರೆ 341 ನಗರ/ ಕ್ಷೇತ್ರಗಳಿವೆ. 202 ಗ್ರಾಮೀಣ ಕ್ಷೇತ್ರಗಳ ಪೈಕಿ ಬಿಜೆಪಿ 123 ರಲ್ಲಿ ಗೆದ್ದುಕೊಂಡರೆ ಕಾಂಗ್ರೆಸ್‌ ಕೇವಲ 15 ಸ್ಥಾನಗಳಲ್ಲಿ ಮಾತ್ರ ಗೆದ್ದುಕೊಂಡಿತ್ತು. ನಗರದ ಪ್ರದೇಶದ 341 ಕ್ಷೇತ್ರಗಳಲ್ಲಿ ಬಿಜೆಪಿ 180 ರಲ್ಲಿ ಗೆದ್ದುಕೊಂಡರೆ ಕಾಂಗ್ರೆಸ್‌ 37 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಇದನ್ನೂ ಓದಿ: 7 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ – ಮದುವೆಗೆ ಹೊರಟಿದ್ದವರು ಗ್ರೇಟ್‌ ಎಸ್ಕೇಪ್‌!

ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶದ ಗ್ರಾಮೀಣ ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು. ಬಿಹಾರದಲ್ಲಿ ಜೆಡಿಯು ಹೆಚ್ಚಿನ ಸ್ಥಾನ ಗೆದ್ದರೂ ನಂತರ ಎನ್‌ಡಿಎ ಒಕ್ಕೂಟದಿಂದ ಹೊರ ಬಂದಿತ್ತು.

ಗುಜರಾತ್‌, ರಾಜಸ್ಥಾನ, ಹರ್ಯಾಣ, ದೆಹಲಿಯ ಎಲ್ಲ ನಗರ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಆದರೆ ಆಂಧ್ರಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ನಗರ ಕ್ಷೇತ್ರಗಳನ್ನು ಗೆದ್ದುಕೊಂಡಿಲ್ಲ. ಆದರೆ ಕರ್ನಾಟಕದಲ್ಲಿ 25 ಮತ್ತು ತೆಲಂಗಾಣದಲ್ಲಿ ಉತ್ತಮ ಸಾಧನೆ ಮಾಡಿದ ಕಾರಣ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: ಕೇಜ್ರಿವಾಲ್‌, ಕೆ.ಕವಿತಾಗೆ ಜೈಲೇ ಗತಿ – ನ್ಯಾಯಾಂಗ ಬಂಧನ ಮತ್ತೆ 14 ದಿನ ವಿಸ್ತರಣೆ

Rahul Gandhi Bharat Jodo Yatra 2

ಗ್ರಾಮೀಣ ಕ್ಷೇತ್ರದಲ್ಲಿ ಯಾರ ಸಾಧನೆ ಎಷ್ಟು?
ಒಟ್ಟು ಸ್ಥಾನಗಳು -202
ಬಿಜೆಪಿ -123
ಕಾಂಗ್ರೆಸ್‌ – 15
ಜೆಡಿಯು -15
ಬಿಜೆಡಿ -10
ಎಲ್‌ಜೆಪಿ – 6
ಬಿಎಸ್‌ಪಿ -6
ಟಿಎಂಸಿ – 5
ಇತರರು – 22narendra modi road show 2

ನಗರ ಪ್ರದೇಶದಲ್ಲಿ ಯಾರ ಸಾಧನೆ ಎಷ್ಟು?
ಒಟ್ಟು ಸ್ಥಾನಗಳು 341
ಬಿಜೆಪಿ – 180
ಕಾಂಗ್ರೆಸ್‌ – 37
ಡಿಎಂಕೆ – 23
ವೈಎಸ್‌ಆರ್‌ಸಿಪಿ – 20
ಟಿಎಂಸಿ – 17
ಶಿವಸೇನಾ -17
ಇತರರು – 47

ಗ್ರಾಮಿಣ ಭಾಗದಲ್ಲಿ ಬಿಜೆಪಿ ಯಶಸ್ವಿಯಾಗಿದ್ದು ಹೇಗೆ?
ಶೌಚಾಲಯ, ಎಲ್‌ಪಿಜಿ ಸಬ್ಸಿಡಿ, ಬಡವರಿಗೆ ಮನೆ, ರೈತರಿಗೆ ಕೃಷಿ ಸಮ್ಮಾನ್‌ ಯೋಜನೆ, ಮನೆ ಮನೆಗೆ ನಲ್ಲಿ ನೀರು, ಉಚಿತ ಅಕ್ಕಿ ಇತ್ಯಾದಿ ಯೋಜನೆಗಳಿಂದಾಗಿ ಬಿಜೆಪಿ 2019ರಲ್ಲಿ ಗ್ರಾಮೀಣ ಭಾಗದಲ್ಲೂ ಬಿಜೆಪಿ ಕಮಾಲ್‌ ಮಾಡಿತ್ತು.

ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು ಈ ಬಾರಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಾಗಿದೆ.

Share This Article