ನವದೆಹಲಿ: ಇಲ್ಲಿಯವರೆಗೆ ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ (Election Commission) ವಶಪಡಿಸಿಕೊಂಡಿದೆ.
ಮಾರ್ಚ್ 1 ರಿಂದ ಏಪ್ರಿಲ್ 13ರ ವರೆಗೆ ವಶಪಡಿಸಿಕೊಂಡ ವಸ್ತುಗಳ ವಿವರವನ್ನು ಚುನಾವಣಾ ಆಯೋಗ ಮಾಧ್ಯಮ ಹೇಳಿಕೆಯ ಮೂಲಕ ತಿಳಿಸಿದೆ. 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಆಯೋಗ ತಿಳಿಸಿದೆ.
Advertisement
Advertisement
2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಚುನಾವಣೆ ನಡೆಯುವ ಮೊದಲೇ ಕಳೆದ ವರ್ಷದ ದಾಖಲೆಯನ್ನು ಮುರಿಯಲಾಗಿದೆ.
Advertisement
ಇಲ್ಲಿಯವರೆಗೆ ಕರ್ನಾಟಕದಿಂದ 35.53 ಕೋಟಿ ರೂ ನಗದು, 1.30 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಗಡಿ ದಾಟುವ ಮೊದಲೇ ಇರಾನ್ ಕ್ಷಿಪಣಿಗಳನ್ನಹೊಡೆದುರುಳಿಸಿದ ಇಸ್ರೇಲ್ – ಅರಬ್ ರಾಷ್ಟ್ರಗಳಿಂದಲೂ ತಡೆ
Advertisement
ಯಾವುದು ಎಷ್ಟು?
ನಗದು – 395.39 ಕೋಟಿ ರೂ.
ಮದ್ಯ – 489.31 ಕೋಟಿ ರೂ.(35,829,924.75 ಲೀ.)
ಡ್ರಗ್ಸ್ – 2,068 ಕೋಟಿ ರೂ.
ಅಮೂಲ್ಯ ಲೋಹ– 562.10 ಕೋಟಿ
ಉಡುಗೊರೆ ಇತ್ಯಾದಿಗಳು – 1,142.49 ಕೋಟಿ ಇದನ್ನೂ ಓದಿ: ಸಮಾವೇಶ ನಡೆದ ಜಾಗದಲ್ಲಿ ಕಸ ತೆಗೆದ ಯದುವೀರ್ ಒಡೆಯರ್