ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಅಖಾಡದಲ್ಲೀಗ ಒಕ್ಕಲಿಗ ಜಟಾಪಟಿ ಜೋರಾಗಿದೆ. ಒಕ್ಕಲಿಗ ಸಮುದಾಯದ (Okkaliga Community) ಓಲೈಕೆಗಾಗಿ ಕಾಂಗ್ರೆಸ್-ಜೆಡಿಎಸ್ (Congress-JDS) ನಡುವೆ ದೊಡ್ಡ ಸಂಘರ್ಷವೇ ನಡೆದಿದೆ.
ಆದಿಚುಂಚನಗಿರಿ ಶ್ರೀಗಳನ್ನು (Adichunchanagiri) ದೋಸ್ತಿ ನಾಯಕರು ಭೇಟಿ ಮಾಡಿದ ಬೆನ್ನಲ್ಲೇ, ಜೆಡಿಎಸ್-ಬಿಜೆಪಿ ಒಕ್ಕಲಿಗರ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಹೊಸ ಹೊಸ ದಾಳ ಉರುಳಿಸ್ತಿದೆ. ಇದರ ಭಾಗವಾಗಿ ಹಳೆಯ ಘಟನೆಗಳನ್ನು ಕೆದಕಿ ದೇವೇಗೌಡರು ಮತ್ತು ಕುಮಾರಸ್ವಾಮಿ (Kumaraswamy) ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಸಚಿವ ಚಲುವರಾಯಸ್ವಾಮಿ (Chaluvaraya Swamy) ಮುಂದಾಗಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಟಿಪ್ಪು ಸದ್ದು – ಸುಲ್ತಾನ್ ಬತ್ತೇರಿ ಹೆಸರನ್ನು ಬದಲಾಯಿಸುತ್ತೇನೆ ಎಂದ ಬಿಜೆಪಿ ಅಧ್ಯಕ್ಷ ಸುರೇಂದ್ರನ್
Advertisement
Advertisement
ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಟ್ಯಾಪ್ ಮಾಡಿಸಿದರು. ಬಾಲಗಂಗಾಧರನಾಥ ಸ್ವಾಮೀಜಿಗೆ ಇನ್ನಿಲ್ಲದ ಕಿರುಕುಳ ಕೊಟ್ಟರು. ಆದಿಚುಂಚನಗಿರಿಗೆ ಪರ್ಯಾಯವಾಗಿ ಎರಡನೇ ಮಠ ಮಾಡಿದರು ಅಂತೆಲ್ಲಾ ದೂರಿದ್ದಾರೆ. 2004ರಲ್ಲಿ ಎಸ್‌ಎಂ ಕೃಷ್ಣ ಎರಡನೇ ಬಾರಿ ಸಿಎಂ ಆಗುವುದನ್ನು ದೇವೇಗೌಡರು ತಪ್ಪಿಸಿದ್ರು ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಆರ್ಟಿಕಲ್ 370 ಸಹವಾಸ ಬೇಡ: ಕಾಂಗ್ರೆಸ್‍ಗೆ ಅಮಿತ್ ಶಾ ಎಚ್ಚರಿಕೆ
Advertisement
ಈ ಆರೋಪಕ್ಕೆ ಅಹುದಹುದು. ಅದೆಲ್ಲಾ ಡಾಕ್ಯೂಮೆಂಟ್. ನೆನಪಿಸಿಕೊಂಡ್ರೆ ನೋವಾಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಂಚಲನಕ್ಕೆ ಕಾರಣವಾಗಿದೆ. ಅಂದ ಹಾಗೇ, 2019ರ ಲೋಕಸಭೆ ಚುನಾವಣೆಯಲ್ಲೂ ಫೋನ್ ಟ್ಯಾಪಿಂಗ್ ವಿಚಾರ ಸದ್ದು ಮಾಡಿತ್ತು.
Advertisement
ಏನಿದು ಫೋನ್ ಟ್ಯಾಪಿಂಗ್ ಕೇಸ್?
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಈ ಪ್ರಕರಣ ನಡೆದಿತ್ತು. ಸರ್ಕಾರ ಪತನ ವೇಳೆ ಶ್ರೀಗಂಧ ಚೋರರ ಕೇಸಲ್ಲಿ ಸ್ವಾಮೀಜಿ ಫೋನ್ ಕದ್ದಾಲಿಕೆ ಮಾಡಲಾಗಿದೆ ಆರೋಪ ಕೇಳಿ ಬಂದಿತ್ತು.
ಕುಮಾರಸ್ವಾಮಿ ವಿರುದ್ಧ ಯಾವುದೇ ಕೇಸ್, ತನಿಖೆ ಆಗಿರಲಿಲ್ಲ. ಆದರೆ ಅಲೋಕ್ ಕುಮಾರ್ ವಿರುದ್ಧ ಭಾಸ್ಕರ್‌ರಾವ್ ಕೇಸ್ ದಾಖಲಿಸಿದ್ದರು. ಕೊನೆಗೆ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ, ಬಿ-ರಿಪೋರ್ಟ್ ಸಲ್ಲಿಕೆಯಾಗಿತ್ತು. ಆದರೆ ಭಾಸ್ಕರ್ ರಾವ್ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿದ್ದರು. ಹೀಗಾಗಿ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು. ಸಿಬಿಐನಿಂದ ಮರುತನಿಖೆ ನಡೆದಿದ್ದು ಇನ್ನೂ ಅಂತಿಮ ವರದಿ ಸಲ್ಲಿಸಿಲ್ಲ.