ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಮತ್ತು ಆರ್‌ಜೆಡಿ (RJD) ನಾಯಕ ತೇಜಸ್ವಿ ಯಾದವ್ (Tejashwi Yadav) ದೆಹಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿ ಅಚ್ಚರಿ ಮೂಡಿಸಿದ್ದಾರೆ.
ಇಂಡಿಯಾ ಒಕ್ಕೂಟ ನಿತೀಶ್ ಕುಮಾರ್ ಅವರನ್ನು ಮೈತ್ರಿ ಸೇರುವಂತೆ ಈಗಾಗಲೇ ಆಹ್ವಾನ ನೀಡಿದೆ. ಹೀಗಿದ್ದರೂ ನಿತೀಶ್ ಕುಮಾರ್ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
- Advertisement -
ಇಂದು ಇಂಡಿಯಾ (INDIA) ಮತ್ತು ಎನ್‌ಡಿಎ (NDA) ಒಕ್ಕೂಟದ ಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಭಾಗವಹಿಸಲು ಇಬ್ಬರೂ ನಾಯಕರು ಒಂದೇ ವಿಮಾನ ಹತ್ತಿದ್ದಾರೆ.
- Advertisement -
- Advertisement -
ವಿಮಾನದಲ್ಲಿ ನಿತೀಶ್ ಕುಮಾರ್ ಮುಂದುಗಡೆ ಸೀಟ್ ಕುಳಿತುಕೊಂಡಿದ್ದರೆ ಹಿಂದುಗಡೆ ತೇಜಸ್ವಿ ಯಾದವ್ ಆಸೀನರಾಗಿದ್ದಾರೆ. ಇಬ್ಬರು ನಾಯಕರು ವಿಮಾನದಲ್ಲಿ ಮಾತನಾಡಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.
- Advertisement -
ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಎನ್‌ಡಿಎ 293, ಇಂಡಿಯಾ 232 ಮತ್ತು ಇತರರು 18 ಸ್ಥಾನಗಳನ್ನು ಗೆದ್ದಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಯನ್ನು ಹತ್ಯೆಗೈದ ಅಂಗರಕ್ಷಕನ ಪುತ್ರನಿಗೆ ಜಯ
ಬಹುಮತಕ್ಕೆ 272 ಸದಸ್ಯರ ಅಗತ್ಯವಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಪರಸ್ಪರ ವಿರೋಧಿಗಳು. ಹೀಗಿದ್ದರೂ ಎನ್‌ಡಿಎ ತೊರೆದು ನಿತೀಶ್ ಕುಮಾರ್ ಇಂಡಿಯಾ ಮೈತ್ರಿಗೆ ಹೋಗುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣ – ಸಿಬಿಐನಿಂದ ಎಫ್‌ಐಆರ್ ದಾಖಲು
ಬಿಹಾರ ಚುನಾವಣೆಯಲ್ಲಿ (Bihar Election) ಜೆಡಿಯು ಮತ್ತು ಬಿಜೆಪಿ ತಲಾ 12 ಸ್ಥಾನಗಳನ್ನು ಗೆದ್ದುಕೊಂಡಿವೆ. ಎಲ್‌ಜಿಪಿಆರ್‌ವಿ 5 ಆರ್‌ಜೆಡಿ 4, ಕಾಂಗ್ರೆಸ್ 3, ಸಿಪಿಐ(ಎಂ) 2, ಇತರರು 1 ಸ್ಥಾನವನ್ನು ಗೆದ್ದುಕೊಂಡಿದ್ದಾರೆ.