ಪ್ರತಾಪ್ ಸಿಂಹ, ಯದುವೀರ್ ಜೊತೆಗೆ ಮೂರನೇ ಎಂಟ್ರಿಗೆ ಬಿಜೆಪಿ ಹೈಕಮಾಂಡ್ ಸರ್ವೇ!

Public TV
1 Min Read
BJP Takes Vokkaliga RSS Leader Name Into Consideration For Mysuru Lok Sabha Ticket

ಬೆಂಗಳೂರು: ಸ್ಟಾರ್ ವಾರ್ ಕ್ಷೇತ್ರ ಮೈಸೂರು (Mysuru) ಲೋಕಸಭೆ ಬಿಜೆಪಿ ಅಭ್ಯರ್ಥಿ (BJP Candidate) ಆಯ್ಕೆ ವಿಚಾರದಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಪ್ರತಾಪ್ ಸಿಂಹಗೆ (Pratap Simha) ಟಿಕೆಟ್ ಅನುಮಾನ ಎನ್ನುತ್ತಿದ್ದಂತೆ ತಂತ್ರಗಳ ಮೇಲೆ ತಂತ್ರ ನಡೆಯುತ್ತಿದ್ದು, ಯದುವೀರ್ ಒಡೆಯರ್‌ (Yaduveer Wodeyar) ಒಪ್ಪದಿದ್ರೆ ಮತ್ಯಾರು? ಪ್ರತಾಪ್ ಸಿಂಹ ಬದಲಾವಣೆಯೋ? ಮತ್ತೊಬ್ಬರ ಅಚ್ಚರಿ ಎಂಟ್ರಿಯೋ ಎಂಬ ಚರ್ಚೆ ಶುರುವಾಗಿದೆ.

ಹೌದು. ಮೈಸೂರು ಬಿಜೆಪಿ ಅಭ್ಯರ್ಥಿ ರೇಸ್‌ನಲ್ಲಿ ಬಿಜೆಪಿ ಹೈಕಮಾಂಡ್ (BJP High Command) ಮತ್ತೊಬ್ಬ ಅಭ್ಯರ್ಥಿ ಪಲ್ಸ್ ಟೆಸ್ಟ್ ಮಾಡಿದೆ. ಮೂರು ದಿನದ ಹಿಂದೆ ಮತ್ತೊಬ್ಬ ಅಭ್ಯರ್ಥಿ ಬಗ್ಗೆ ಒಂದೇ ದಿನದಲ್ಲಿ ಸರ್ವೇ ಮಾಡಿಸಿ ಅಮಿತ್ ಶಾ (amit shah) ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.

 

ಮೈಸೂರು ಅಭ್ಯರ್ಥಿ ರೇಸ್ ನಲ್ಲಿ ವಿಚಾರದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಈಗ ಮೂವರು ಇದ್ದಾರೆ. ಪ್ರತಾಪ್ ಸಿಂಹ ಬದಲಾದರೆ ಒಡೆಯರ್ ಒಪ್ಪದಿದ್ದರೆ ಬಿಜೆಪಿ ಅಭ್ಯರ್ಥಿ ಒಕ್ಕಲಿಗರೇ ಇರಲಿ ಎಂಬುದು ಬಿಜೆಪಿ ಹೈಕಮಾಂಡ್ ಸಂದೇಶ. ಹಾಗಾಗಿಯೇ ಸಂಘ ನಿಷ್ಠ, ಒಕ್ಕಲಿಗ ಸಮುದಾಯ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದಂತೆ ಕಾಣುತ್ತಿದೆ.  ಇದನ್ನೂ ಓದಿ: ಇನ್ಮೇಲೆ ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್- ಗೋಬಿಗೂ ಕೃತಕ ಬಣ್ಣ ಬಳಸುವಂತಿಲ್ಲ

ಒಕ್ಕಲಿಗ ಸಮುದಾಯದ ಆರ್‌ಎಸ್‌ಎಸ್‌ (RSS) ನಿಷ್ಠ ಅಭ್ಯರ್ಥಿ ಬಗ್ಗೆ ಸರ್ವೇ ರಿಪೋರ್ಟ್ ಪಡೆದ ಅಮಿತ್ ಶಾ ಎರಡು ಹೆಸರುಗಳ ಜೊತೆ ಮೂರನೇ ಹೆಸರನ್ನು ಸೇರಿಸಿ ಮೋದಿ (PM Narendra Modi) ಅಂಗಳಕ್ಕೆ ಬಿಟ್ಟಿದ್ದಾರೆ ಎಂಬುದು ಮೂಲಗಳ ಮಾಹಿತಿ. ಹಾಗಾದ್ರೆ ಮೈಸೂರು ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲಗಳಿಗೆ ಇನ್ನೆರಡು ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.

 

Share This Article