ಬೆಂಗಳೂರು: ಸಂಸದ ಡಿವಿ ಸದಾನಂದ ಗೌಡರ (DV Sadananda Gowda) ನಡೆ ಇನ್ನೂ ನಿಗೂಢವಾಗಿದ್ದು ಬೆಂಗಳೂರಿನಿಂದ ಸುಳ್ಯಕ್ಕೆ (Sullia) ಪ್ರಯಾಣಿಸಿದ್ದಾರೆ.
ಬೆಂಗಳೂರು ಉತ್ತರ (Bengaluru North) ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದ ಗೌಡ ಇಂದು ಬೆಳಗ್ಗೆಯೇ ಸುಳ್ಯದತ್ತ ಪ್ರಯಾಣಿಸಿದ್ದು ಕುಟುಂಬಸ್ಥರು, ಸಂಬಂಧಿಕರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 2ನೇ ಪಟ್ಟಿ ಇಂದು ಬಿಡುಗಡೆ – ಸಂಭಾವ್ಯ ಅಭ್ಯರ್ಥಿಗಳು ಯಾರು?
Advertisement
Advertisement
ಮಾರ್ಚ್ 18 ರಂದು ಹುಟ್ಟುಹಬ್ಬ ಆಚರಿಸಿದ್ದ ವೇಳೆ ನಾನು ನಾಳೆ ಸುದ್ದಿಗೋಷ್ಠಿ ನಡೆಸಿ ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದರು. ಆದರೆ ಅವರು ಸುದ್ದಿಗೋಷ್ಠಿ ನಡೆಸಿರಲಿಲ್ಲ. ಹೀಗಾಗಿ ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗಿತ್ತು.
Advertisement
ಸದಾನಂದ ಗೌಡ ಗುರುವಾರ ಬೆಂಗಳೂರಿಗೆ (Bengaluru) ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿಗೆ ಬಂದ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ. ಇದನ್ನೂ ಓದಿ: ಸಂಜೆ ನೆರೆ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಹತ್ಯೆ – ರಾತ್ರಿ ಯುಪಿ ಪೊಲೀಸರ ಎನ್‌ಕೌಂಟರ್‌ಗೆ ಪಾತಕಿ ಬಲಿ
Advertisement
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದರಿಂದ ಅಸಮಾಧಾನಗೊಂಡಿರುವ ಡಿವಿಎಸ್ ಮೈಸೂರಿನಿಂದ (Mysuru) ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾರೂ ಈ ವಿಚಾರವನ್ನು ಅಧಿಕೃತಗೊಳಿಸಿಲ್ಲ.
ಮಾಧ್ಯಮಗಳ ಜೊತೆ ಮಾತನಾಡಿದ್ದ ಸದಾನಂದ ಗೌಡ ಕಾಂಗ್ರೆಸ್ ನಾಯಕರು (Congress) ನನ್ನನ್ನು ಸಂಪರ್ಕಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದರು.