ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ ಅನಿವಾರ್ಯ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

Public TV
1 Min Read
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸಚಿವರ ಸ್ಪರ್ಧೆ ಅನಿವಾರ್ಯ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್‌ ಸುರ್ಜೇವಾಲ (Randeep Surjewala) ಪುನರುಚ್ಚರಿಸಿದ್ದಾರೆ.

ಖಾಸಗಿ ಹೋಟೆಲಿನಲ್ಲಿ ನಡೆದ ಸಭೆಯಲ್ಲಿ ಸಚಿವರು ಮಾತ್ರವಲ್ಲ ಕಾಂಗ್ರೆಸ್ ಸಂಭವ್ಯ ಪಟ್ಟಿಯಲ್ಲಿ ಹೆಸರು ಇಲ್ಲದ ಸಚಿವರು ಹಾಗೂ ಶಾಸಕರ ಸ್ಪರ್ಧೆಯೂ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.  ಇದನ್ನೂ ಓದಿ: ಶ್ರೀರಾಮನೊಂದಿಗೆ ನಿಮ್ಮ ಹೆಸರು ಎಂದೆಂದಿಗೂ ಉಳಿಯಲಿದೆ- ಪಿಎಂ ಹೊಗಳಿದ ಶಿಲ್ಪಾ ಶೆಟ್ಟಿ

congress clp meeting 2

ಎಲ್ಲಾ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಕೆಪಿಸಿಸಿ (KPCC) ಹಾಗೂ ಎಐಸಿಸಿಯಿಂದ (AICC) ಪ್ರತ್ಯೇಕವಾಗಿ ಸರ್ವೆ ನಡೆಯಲಿದೆ. ಸಂಭಾವ್ಯ ಅಭ್ಯರ್ಥಿಗಿಂತ ಆ ಜಿಲ್ಲೆಯ ಸಚಿವರೇ ಹೆಚ್ಚು ಪ್ರಭಾವಿಯಾಗಿದ್ದಾರೆ. ಅವರ ಸ್ಪರ್ಧೆ ಮಾಡಿದರೆ ಗೆಲುವಿಗೆ ಅವಕಾಶ ಇದೆ ಎಂಬ ರಿಪೋರ್ಟ್ ಬಂದರೆ ಸಚಿವರು ಸ್ಪರ್ಧೆ ಮಾಡಲೇಬೇಕು. ಈ ವಿಚಾರದಲ್ಲಿ 28 ಸಚಿವರು ಸಿದ್ದವಿರಬೇಕು. ಹೈಕಮಾಂಡ್ ಸೂಚನೆ ಯಾರ ವಿಚಾರದಲ್ಲಿ ಬೇಕಾದರು ಬರಬಹುದು ಎಂದು ತಿಳಿಸಿದರು.  ಇದನ್ನೂ ಓದಿ: ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂ ದೇಗುಲ ಉದ್ಘಾಟಿಸಿದ PM ಮೋದಿ- ಫೋಟೋಗಳಲ್ಲಿ ನೋಡಿ

ಸರ್ವೆಯಲ್ಲಿ ಸಂಭವನೀಯ ಅಭ್ಯರ್ಥಿ ಹಾಗೂ ಸಚಿವರಿಗಿಂತ ಜಿಲ್ಲೆಯ ಶಾಸಕರ ಹೆಸರೇ ಹೆಚ್ಚು ಪ್ರಭಾವಿ ಎಂಬ ವರದಿ ಬಂದರೆ ಸಂಭವ್ಯರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಅಂತಹ ಶಾಸಕರ ಸ್ಪರ್ಧೆ ಅನಿವಾರ್ಯ ಎಂದು ಹೇಳಿದರು. ಸರ್ವೆ ಆಧರಿಸಿ ಹೈಕಮಾಂಡ್ ಯಾರ ಹೆಸರು ಸೂಚಿಸುತ್ತದೆಯೋ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಸಭೆಯಲ್ಲಿ ಸುರ್ಜೆವಾಲ ಸೂಚನೆ ನೀಡಿದರು.

ಸಚಿವರು ಹಾಗೂ ಶಾಸಕರು ಸೇರಿದಂತೆ ಎಲ್ಲಾ135 ಜನರಿಗೂ ಈ ಸಂದೇಶ ಕಳುಹಿಸುವಂತೆ ಹೈಕಮಾಂಡ್‌ ಸೂಚಿಸಿದೆ ಎಂದು ಸುರ್ಜೇವಾಲ ತಿಳಿಸಿದರು.

Share This Article