ಮತ ಚಲಾಯಿಸಿದ ರಿತೇಶ್ ದೇಶ್‌ಮುಖ್, ಜೆನಿಲಿಯಾ ದಂಪತಿ

Public TV
1 Min Read
Riteish Deshmukh 1

ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ (Riteish Deshmukh) ಮತ್ತು ಜೆನಿಲಿಯಾ (Genelia) ದಂಪತಿ ಇಂದು (ಮೇ.7) ಒಟ್ಟಾಗಿ ವೋಟ್ ಮಾಡಿದ್ದಾರೆ. ವೋಟ್ ಮಾಡಿರುವ ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ ಎಂದ ಸೋನು ಗೌಡ

Riteish Deshmukhಮಹಾರಾಷ್ಟ್ರದ ಲಾತೂರ್ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ನಗು ನಗುತ್ತಾ ರಿತೇಶ್ ಮತ್ತು ಜೆನಿಲಿಯಾ ವೋಟ್ ಮಾಡಿದ್ದಾರೆ. ಇವರ ರಿತೇಶ್ ತಾಯಿ ಕೂಡ ಮತದಾನ ಮಾಡಿದ್ದಾರೆ. ನಿಮಗಾಗಿ ವೋಟ್ ಮಾಡಿ, ಭವಿಷ್ಯಕ್ಕಾಗಿ ಮತ್ತು ದೇಶಕ್ಕಾಗಿ ಮತದಾನ ಮಾಡಿ ಎಂದು ರಿತೇಶ್ ದಂಪತಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಅಂದಹಾಗೆ, ಕನ್ನಡದ ‘ಸತ್ಯ ಇಸ್ ಇನ್ ಲವ್’ ಚಿತ್ರದ ನಟಿ ಜೆನಿಲಿಯಾ ಸದ್ಯ ಜ್ಯೂನಿಯರ್, ‘ಸಿತಾರೇ ಜಮೀನ್‌ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಹೌಸ್‌ಫುಲ್ 5’ ಸಿನಿಮಾದಲ್ಲಿ ರಿತೇಶ್ ಬ್ಯುಸಿಯಾಗಿದ್ದಾರೆ.

Share This Article