ಬೆಂಗಳೂರು: ಕರ್ನಾಟಕದಲ್ಲಿ (Karnataka) ಸಂಜೆ 5 ಗಂಟೆ ಹೊತ್ತಿಗೆ 63.90% ರಷ್ಟು ಮತದಾನವಾಗಿದೆ. ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ 50% ದಾಟಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 61.78%, ಬೆಂಗಳೂರು ಉತ್ತರ 50.04%, ಬೆಂಗಳೂರು ಕೇಂದ್ರ 48.61%, ಬೆಂಗಳೂರು ದಕ್ಷಿಣ 49.37% ಮತ ಚಲಾವಣೆಯಾಗಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮತ ಚಲಾಯಿಸಿದ ಟೀಂ ಇಂಡಿಯಾ ಮುಖ್ಯಕೋಚ್ – ಮತದಾನಕ್ಕೆ ಕರೆ ಕೊಟ್ಟ ಮಾಜಿ ಕ್ರಿಕೆಟರ್ಸ್!
Advertisement
Advertisement
ಉಡುಪಿ-ಚಿಕ್ಕಮಗಳೂರು 72.13%, ದಕ್ಷಿಣ ಕನ್ನಡ 71.83%, ಹಾಸನ 71.13%, ಚಿತ್ರದುರ್ಗ 67% ಬಿರುಸಿನ ಮತದಾನವಾಗಿದೆ.
Advertisement
ತುಮಕೂರು 72.10%, ಮಂಡ್ಯ 74.87%, ಮೈಸೂರು 65.85%, ಚಾಮರಾಜನಗರ 69.60%, ಚಿತ್ರದುರ್ಗ 70.97%, ಕೋಲಾರ 71.26% ಮತ ಚಲಾವಣೆಯಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಿರುಸಿನ ಮತದಾನ!
Advertisement
ಮತದಾನ ಸಮಯ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಸಮಯ ಮುಗಿಯುವಷ್ಟರಲ್ಲಿ ಮತ ಚಲಾಯಿಸಲು ಜನರು ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ.