– ಟಿಕೆಟ್ ತಪ್ಪಿದ್ಯಾಕೆ ಅಂತ ಮೋದಿ, ಅಮಿತ್ ಶಾ ಮೊದಲು ಸ್ಪಷ್ಟಪಡಿಸಲಿ!
– ಪ್ರಚಾರಕ್ಕೆ ಕರೆದವರಿಗೆ ತೇಜಸ್ವನಿ ಫುಲ್ ಕ್ಲಾಸ್
ಬೆಂಗಳೂರು: ನನಗೆ ಇನ್ನು ರಾಜಕೀಯ ಬೇಡ. ಅದಮ್ಯ ಚೇತನದ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ತೇಜಸ್ವಿನಿ ಅನಂತ್‍ಕುಮಾರ್ ಅವರು ಬಿಜೆಪಿ ಕಾರ್ಯಕರ್ತರ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬಿಜೆಪಿ ಮುಖಂಡ ಮುರಳೀಧರರಾವ್ ಮನವಿ ಮಾಡಿದರು. ಈ ವೇಳೆ ತೇಜಸ್ವಿನಿ ಅವರು, ತಮಗೆ ಬೆಂಗಳೂರು ದಕ್ಷಿಣ ಲೋಕಸಭಾ ಟಿಕೆಟ್ ತಪ್ಪಿದ್ಯಾಕೆ..? ಅಂತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೊದಲು ಸ್ಪಷ್ಟಪಡಿಸಲಿ. ಅವರ ಉತ್ತರ ಒಪ್ಪಿಗೆಯಾದರೆ ಮಾತ್ರ ನಾವು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಇಲ್ಲಿ ಯಾರೂ ದೊಡ್ಡವರಲ್ಲ. ಯಾರ ಕಾಲಿಗೂ ಬೀಳುವ ಅಗತ್ಯವಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್, ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಇದಕ್ಕೂ ಮುನ್ನ ವಿಧಾನ ಪರಿಷತ್ ಮಾಜಿ ಸದಸ್ಯ ಕೃಷ್ಣ ಭಟ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತೇಜಸ್ವಿನಿ ಅನಂತ್‍ಕುಮಾರ್ ಮನೆಗೆ ಭೇಟಿ ನೀಡಿ, ಮನವೊಲಿಕೆಗೆ ಯತ್ನಿಸಿದರು.
Advertisement
ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿ ತೇಜಸ್ವಿನಿ ಅವರ ನಿವಾಸದಲ್ಲಿ ಮುರಳೀಧರರಾವ್ ಕಾರನ್ನು ತಡೆದು ಅನಂತ್‍ಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವರು ಕಾರಿಗೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಸ್ಥಳಕ್ಕೆ ಬಂದ ಅನಂತಕುಮಾರ್ ಸಹೋದರ ನಂದಕುಮಾರ್ ಅವರು, ಕಾರ್ಯಕರ್ತರನ್ನ ಸಮಾಧಾನಪಡಿಸಿ ಮುರಳೀಧರರಾವ್ ಅವರನ್ನು ನಿವಾಸಕ್ಕೆ ಕರೆಕೊಂಡು ಹೋದರು.