– ರಸ್ತೆಗಿಳಿದವರಿಗೆ ನಿಲ್ಲುವ ಶಿಕ್ಷೆ
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಪೊಲೀಸರು ಶಿಸ್ತಾಗಿ ಜಾರಿ ಮಾಡುತ್ತಿದ್ದಾರೆ. ಹೀಗಾಗಿ ನಿರ್ಬಂಧಿತ ರಸ್ತೆಯಲ್ಲಿ ಬಂದಿದ್ದ ಮಾಜಿ ಮೇಯರ್ ಅಯೂಬ್ ಖಾನ್‍ರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಮೈಸೂರಿನ ಉದಯಗಿರಿ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಆದರೂ ಮಾಜಿ ಮೇಯರ್ ಅಯೂಬ್ ಖಾನ್ ಮಾಸ್ಕ್ ಕೂಡ ಧರಿಸದೆ ನಿರ್ಬಂಧಿತ ರಸ್ತೆಯಲ್ಲಿ ಬರಲು ಯತ್ನಿಸಿದರು. ಈ ವೇಳೆ ಅಯೂಬ್‍ಖಾನ್‍ಗೆ ತಿಳಿ ಹೇಳಿದ ಪೊಲೀಸರು, ಮಾಸ್ಕ್ ಹಾಕಿಸಿ ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಈ ಎಲ್ಲ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.
Advertisement
Advertisement
ಮೈಸೂರಿನಲ್ಲಿ ಲಾಕ್‍ಡೌನ್ ನಿಯಮ ಬಿಗಿಯಾಗಿ ಜಾರಿಯಾಗಿದ್ದು, ಮೈಸೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನ ಹಾಗೂ ಕಾರ್ ಸಂಚಾರಕ್ಕೆ ಅವಕಾಶವಿದೆ. ಅದು ಜನರು ತಾವು ವಾಸಿಸುವ ಪ್ರದೇಶಗಳ 2 ಕಿ.ಮೀ. ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳ ಬಳಸಬಹುದು.
Advertisement
ಈ ಮೊದಲು ನಿಯಮ ಉಲ್ಲಂಘಿಸಿದವರಿಗೆ ವಾರ್ನಿಂಗ್ ನೀಡಲಾಗಿದೆ. ಆದರೆ ಇಂದಿನಿಂದ ವಾಹನ ಜಪ್ತಿ ಮಾಡಲಾಗುತ್ತದೆ. ಒಂದು ವೇಳೆ ಈ ನಿಯಮ ಮೀರಿ ಬೇರೆ ಬಡಾವಣೆಗಳಿಗೆ ರಸ್ತೆಗಳಿಗೆ ಬರುವ ಜನರ ವಾಹನಗಳನ್ನು ಮೈಸೂರು ಪೊಲೀಸರು ತಾತ್ಕಾಲಿಕವಾಗಿ ಜಪ್ತಿ ಮಾಡುತ್ತಾರೆ. ಅಲ್ಲದೇ ರಸ್ತೆಯಲ್ಲಿ ನಿಲ್ಲುವ ಶಿಕ್ಷೆ ನೀಡುತ್ತಿದ್ದಾರೆ.