ನವದೆಹಲಿ: ಅಭಿಮಾನಿಗಳಿಗಾಗಿ ಅನುಷ್ಕಾ ಶೆಟ್ಟಿ ಸುಧೀರ್ಘ ಪತ್ರ ಬರೆದಿದ್ದು, ಈ ಮೂಲಕ ತಮ್ಮ ಕಾಳಜಿಯನ್ನು ತೋರಿದ್ದಾರೆ. ಕೊರೊನಾ ಹಾಗೂ ಲಾಕ್‍ಡೌನ್ ಕುರಿತು ಬಹುತೇಕ ನಟರು ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಹೊರಗೆ ಬರಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಅನುಷ್ಕಾ ಶೆಟ್ಟಿ ಪತ್ರವನ್ನೇ ಬರೆದು ಮಾನವೀಯತೆಯ ಬಗ್ಗೆ ವಿವರಿಸಿದ್ದಾರೆ.
Advertisement
ಕೊರೊನಾ ವೈರಸ್ ಹರಡುವಿಕೆಯಿಂದಾಗಿ ಇಡೀ ದೇಶವೇ ತಲ್ಲಣಗೊಂಡಿದ್ದು, ಪರಿಸ್ಥಿತಿ ನಿಭಾಯಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದಂಹ ಸಂದರ್ಭದಲ್ಲಿ ಸರ್ಕಾರದ ಜೊತೆ ಸಹಕರಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಅಲ್ಲದೆ ಈ ಕುರಿತು ಜಾಗೃತಿಯನ್ನು ಸಹ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಹಲವು ನಟ ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೊರಗೆ ಬಾರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement
Advertisement
ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅನುಷ್ಕಾ ಈ ಕುರಿತು ಬೆಳಕು ಚೆಲ್ಲಿದ್ದು, ಎ ಮೆಸೇಜ್ ಟು ಆಲ್ ಅರೌಂಡ್ ದಿ ವಲ್ರ್ಡ್, ಥ್ಯಾಂಕ್ ಯೂ ಎಂಬ ಸಾಲುಗಳನ್ನು ಬರೆದು, ಇಂಗ್ಲಿಷ್‍ನಲ್ಲಿ ಬರೆದಿರುವ ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ನಾವೆಲ್ಲರೂ ಬೇರೆ ಆಗಿದ್ದೇವೆ. ಆದರೆ ನಾವು ಒಗ್ಗಟ್ಟಾಗಿ ನಿಂತಿದ್ದೇವೆ. ಇಡೀ ಜೀವನಕ್ಕೆ ಹೊಸ ಸ್ವರೂಪ ಸಿಕ್ಕಿದೆ. ಈ ಹಿಂದೆ ಕಲಿತಿದ್ದನ್ನೆಲ್ಲ ಮರೆತು ಹೊಸದಾಗಿ ಕಲಿಯಬೇಕಿದೆ. ಹೊಸ ದೃಷ್ಟಿಕೋನ ಬಂದಿದೆ. ಅಸಾಧ್ಯ ಎಂಬುದೆಲ್ಲ ಸಾಧ್ಯವಾಗಿದೆ ಹಾಗೂ ಸಾಧ್ಯ ಎಂಬುದೆಲ್ಲ ಕಣ್ಮರೆ ಆಗಿದೆ. ಈ ಸಮಯ ಹಾಗೂ ಭೌಗೋಳಿಕವಾಗಿ ನಾವೆಲ್ಲರೂ ದೂರಾಗಿದ್ದೇವೆ ಎನಿಸಿದರೂ ಹೃದಯದಲ್ಲಿನ ಪ್ರೀತಿ ಮತ್ತು ಪ್ರಾರ್ಥನೆಯಿಂದ ಜೊತೆಯಾಗಿದ್ದೇವೆ.
Advertisement
ಇಂತಹ ಕಠಿಣ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸುತ್ತಿದ್ದಾರೆ, ಕಾಳಜಿ ವಹಿಸುತ್ತಿದ್ದಾರೆ. ಅಲ್ಲದೆ ನಾವು ಗುಣಮುಖರಾಗಲು ಪ್ರಾರ್ಥಿಸುತ್ತಿದ್ದಾರೆ. ಅಂತಹವರಿಗೆ ನಾವು ಧನ್ಯವಾದ ಅರ್ಪಿಸಬೇಕಿದೆ. ಕೃತಜ್ಞತೆ ಸಲ್ಲಿಸಬೇಕಿದೆ. ಈ ಸಮಸ್ಯೆ ನಿವಾರಣೆಯಾದ ಬಳಿಕ ನಮಗೆಲ್ಲರಿಗೂ ನಮ್ಮದೇ ಆದ ಕರ್ತವ್ಯಗಳಿವೆ ಎಂಬುದನ್ನು ಅರಿತುಕೊಳ್ಳಬೇಕು. ಇಲ್ಲಿ ಯಾರೂ ಮೇಲು-ಕೀಳು ಇಲ್ಲ. ಮಾನವೀಯತೆಯ ಕಡೆಗೆ ನಮಗಿರುವ ಜವಾಬ್ದಾರಿಯನ್ನು ನಿಭಾಯಿಸೋಣ ಎಂದು ಅಭಿಮಾನಿಗಳಿಗೆ ಈ ಭಾವುಕ ಪತ್ರವನ್ನು ಅನುಷ್ಕಾ ಬರೆದಿದ್ದಾರೆ. ಈ ಮೂಲಕ ಕೊರೊನಾ ಸಂಕಷ್ಟದ ಬಳಿಕ ನಾವೆಲ್ಲರೂ ಹೇಗೆ ಬದುಕಬೇಕು ಎಂಬ ಬಗ್ಗೆಯೂ ಅನುಷ್ಕಾ ಮಾತನಾಡಿದ್ದಾರೆ.
ಅನುಷ್ಕಾ ಶೆಟ್ಟಿ ನಟನೆಯ ‘ನಿಶಬ್ದಂ’ ಸಿನಿಮಾ ಏ.3ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮವಾಗಿ, ಚಿತ್ರದ ಬಿಡುಗಡೆ ದಿನಾಂಕ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಒಂದು ವಿಶೇಷ ಪಾತ್ರವನ್ನು ಅನುಷ್ಕಾ ಈ ಸಿನಿಮಾದಲ್ಲಿ ನಿಭಾಯಿಸಿದ್ದು, ಹೇಮಂತ್ ಮದುಕರ್ ನಿರ್ದೇಶನ ಮಾಡಿದ್ದಾರೆ.