ಹುಬ್ಬಳ್ಳಿ: ಲೋನ್ ಆ್ಯಪ್‌ನಲ್ಲಿ ಕೇವಲ 8 ಸಾವಿರ ರೂ. ಸಾಲ ಮಾಡಿದ ವ್ಯಕ್ತಿ ಲಕ್ಷ ಲಕ್ಷ ಹಣ ಮರುಪಾವತಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ರೋಹನ್ ಲೋನ್ ಆ್ಯಪ್‌ನಲ್ಲಿ ಹಣ ಪಡೆದು ಮೋಸಹೋದ ವ್ಯಕ್ತಿ. ರೋಹನ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಲೋನ್ ಕ್ಯೂಬ್ ಮೊಬೈಲ್ ಆ್ಯಪ್‌ನಲ್ಲಿ 8 ಸಾವಿರ ರೂ. ಸಾಲ ಪಡೆಯಲು ಮುಂದಾಗಿದ್ದರು.
Advertisement
8 ಸಾವಿರ ರೂ. ಸಾಲದ ಮುಂಗಡ ಬಡ್ಡಿ ಕಡಿತಗೊಳಿಸಿ ಕೇವಲ 4,960 ರೂ. ಹಣವನ್ನು ಲೋನ್ ಆ್ಯಪ್ ನೀಡಿತ್ತು ಅಲ್ಲದೇ 8 ಸಾವಿರ ರೂ. ಹಣವನ್ನು 7 ದಿನಗಳಲ್ಲಿ ತೀರಿಸಬೇಕೆಂದು ಷರತ್ತು ಸಹ ವಿಧಿಸಿತ್ತು. ಈ ಬಗ್ಗೆ ರೋಹನ್‌ಗೆ ನಿತ್ಯ ಕರೆಗಳು ಬರುತ್ತಿದ್ದು, ಹಣ ಬೇಗ ಹಿಂತಿರುಗಿಸುವಂತೆ ಒತ್ತಡ ಹಾಕಲಾಗುತ್ತಿತ್ತು. ಇದನ್ನೂ ಓದಿ: ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ
Advertisement
Advertisement
ಈ ಕಿರಿಕಿರಿಗೆ ಬೇಸತ್ತ ರೋಹನ್ ಅದೇ ಆ್ಯಪ್‌ನಲ್ಲಿ ಪದೇ ಪದೇ ಲೋನ್ ಪಡೆದಿದ್ದಾರೆ. ಒಟ್ಟು 4,26,654 ರೂ. ಹಣ ಪಡೆದುಕೊಂಡಿದ್ದ ರೋಹನ್ ವಿಪರ್ಯಾಸವೆಂದರೆ ಅದೇ ಆ್ಯಪ್‌ಗೆ ಮತ್ತೆ ಹಿಂದಿರುಗಿಸಿದ್ದಾರೆ. ಹೀಗಿದ್ದರೂ ಆ್ಯಪ್‌ನಿಂದ ಮತ್ತೆ ಕರೆಗಳು ಬರುತ್ತಿದ್ದು, ಎಲ್ಲಾ ಸಾಲವನ್ನು ಮರಳಿ ತುಂಬುವಂತೆ ನಿರಂತರ ಒತ್ತಡ ಹಾಕಲಾಗಿದೆ.
Advertisement
ಈ ಹಿನ್ನೆಲೆ ಆ್ಯಪ್‌ನಲ್ಲಿ ಮಾಡಿದ ಸಾಲವಲ್ಲದೇ, ವೈಯಕ್ತಿಕವಾಗಿ ಲಕ್ಷಾಂತರ ರೂ. ಹಣವನ್ನು ಮರುಪಾವತಿ ಮಾಡಿದ್ದಾರೆ. ಇಷ್ಟಾದರೂ ಆ್ಯಪ್ ರೋಹನ್‌ಗೆ, ವಿವಿಧ ನಂಬರ್‌ಗಳ ಮೂಲಕ ಕರೆ ಮಾಡಿ ಮತ್ತೆ ಹಣ ತುಂಬುವಂತೆ ಹೇಳಲಾಗುತ್ತಿದೆ. ಕೇಳಿದಷ್ಟು ಹಣ ನೀಡದಿದ್ದರೆ, ಎಲ್ಲಾ ಪರಿಚಯದವರಿಗೆ, ವೈಯಕ್ತಿಕ ಡೇಟಾ ಹಾಗೂ ಮೆಸೇಜ್‌ಗಳನ್ನು ಹಂಚುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು
ಇದರಿಂದ ಮಾನಸಿಕವಾಗಿ ಕುಗ್ಗಿರುವ ರೋಹನ್, ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.