ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಆತ್ಮೀಯ ಸ್ವಾಗತ
ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ
ರಾಜ್ಯದಲ್ಲಿ ಒಂದು ದಿನದ ಪ್ರವಾಸ ಕೈಗೊಂಡಿರುವ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಲ್ಲಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನ ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಪಾಲರು ಸೇರಿದಂತೆ ಗಣ್ಯರು ಸ್ವಾಗತಿಸಿದ್ದಾರೆ. ಪ್ರಧಾನಿಗಳಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರು ಹೆಲಿಕಾಪ್ಟರ್ನಲ್ಲಿ ಪ್ರಶಾಂತಿ ಕುಟೀರಕ್ಕೆ ಬಂದು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
– ಇಲ್ಲಿದೆ ಪ್ರಧಾನಿ ಮೋದಿ ಅವರ ಮಿನಿಟ್ to ಮಿನಿಟ್ ಡೀಟೆಲ್ಸ್
ಬೆಂಗಳೂರು/ಮೈಸೂರು: ಗುಲಾಭಿ ಮಾರ್ಗದ ನಮ್ಮ ಮೆಟ್ರೋ ರೈಲು ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಪಿಂಕ್ ಲೈನ್ ಮೆಟ್ರೋವನ್ನ ಲೋಕಾರ್ಪಣೆ ಮಾಡಲಿದ್ದಾರೆ. ತಾವರೆಕರೆ ಮೆಟ್ರೋ ನಿಲ್ದಾಣ ಅಂದರೆ ಎಸ್.ಜಿ ಪಾಳ್ಯ ನಿಲ್ದಾಣದಿಂದ ಕಾಳೇನ ಅಗ್ರಹಾರವರೆಗಿನ ಪಿಂಕ್ ಲೈನ್ ಮಾರ್ಗವನ್ನು (Pink Line Metro) ಮೋದಿ ಉದ್ಘಾಟಿಸಲಿದ್ದಾರೆ.
6 ನಿಲ್ದಾಣಗಳಿರುವ 7.5 ಕಿಮೀ ಒಳಗೊಂಡ ಮಾರ್ಗ ಉದ್ಘಾಟನೆ
ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿರುವ ಪಿಂಕ್ ಲೈನ್ ಮೆಟ್ರೋ ಮಾರ್ಗವು ಬರೋಬ್ಬರಿ 7.5 ಕಿಮೀ ಉದ್ದವಿದ್ದು, 6 ನಿಲ್ದಾಣಗಳನ್ನ ಒಳಗೊಂಡಿರಲಿದೆ. ಕಾಳೇನ ಅಗ್ರಹಾರ, ಹುಳಿಮಾವು, ಬಿಳೇಕಲ್ಲಹಳ್ಳಿ ಐಐಎಂಬಿ, ಎನ್.ಎಸ್ ಪಾಳ್ಯ ಜೆಪಿ ನಗರ 4ನೇ ಹಂತ, ಜಯದೇವ, ಎಸ್ಜಿ ಪಾಳ್ಯ ಮೆಟ್ರೋ ನಿಲ್ದಾಣ… ಹೀಗೆ 6 ನಿಲ್ದಾಣಗಳನ್ನು ಈ ಪಿಂಕ್ ಲೈನ್ ಒಳಗೊಂಡಿದೆ. ಇನ್ನು ಮೆಟ್ರೋ ಉದ್ಘಾಟನೆಗಾಗಿ ಇಂದು ಬೆಳಗ್ಗೆ 10ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮದ ಮಿನಿಟ್ To ಮಿನಿಟ್ ಡೀಟೆಲ್ಸ್
* ಬೆಳಗ್ಗೆ 7:20 – ದೆಹಲಿಯಿಂದ ಮೋದಿ ನಿರ್ಗಮನ
* ಬೆಳಗ್ಗೆ 10:05 – ದೆಹಲಿಯಿಂದ ಎಚ್ಎಎಲ್ಗೆ ಮೋದಿ
* ಬೆಳಗ್ಗೆ 10:45 – ಜಿಗಣಿ ಬಳಿಯ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಭಾಗಿ
* ಮಧ್ಯಾಹ್ನ 12.40 – ಎಸ್ಜಿ ಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಆಗಮನ
* ಮಧ್ಯಾಹ್ನ 12.45 – ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ
* ಮೆಟ್ರೋ ಉದ್ಘಾಟನೆ ಬಳಿ ಮೆಟ್ರೋದಲ್ಲಿ ಮೋದಿ ಸಂಚಾರ
* ಮಧ್ಯಾಹ್ನ 12.45ರಿಂದ 1.05ರವರೆಗೆ ಮೆಟ್ರೋದಲ್ಲಿ ಸಂಚಾರ
* ಮಧ್ಯಾಹ್ನ 1.15 – ಐಐಎಂಬಿ ಆಡಿಟೋರಿಯಂನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ
* ಮಧ್ಯಾಹ್ನ 2 – ವಂದೇ ಭಾರತ್ ರೈಲಿಗೆ ಚಾಲನೆ
* ಮಧ್ಯಾಹ್ನ 2.30 – ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ
* ಮಧ್ಯಾಹ್ನ 3.30 – ಮೈಸೂರಿನ ಕೆಸಿ ಲೇಔಟ್ ಪಾರ್ಕ್ನಲ್ಲಿ `ಭಾರತ್ ವ್ಯಾನ್’ ಕಾರ್ಯಕ್ರಮ
* ಸಂಜೆ 4 – ಮೈಸೂರು ಕಾಸ್ಮಾಸ್ ತಾರಾಲಯ ಉದ್ಘಾಟನೆ
* ಸಂಜೆ 6.05 – ಮೈಸೂರಿನಿಂದ ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಮೋದಿ ಸ್ವಾಗತಕ್ಕೆ ಎಸ್.ಜಿ ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮೋದಿ ಭೇಟಿ ಹಿನ್ನೆಲೆ ಹೆಜ್ಜೆ ಹೆಜ್ಜೆಗೂ ಭದ್ರತೆ..!
ಇನ್ನು ಮೋದಿ ರಾಜ್ಯಕ್ಕೆ ಭೇಟಿ ನೀಡ್ತಿರುವ ಹಿನ್ನೆಲೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. 10 ದಿನಕ್ಕೂ ಮುನ್ನವೇ ಎಸ್ಪಿಜಿ ಟೀಂ ಬೆಂಗಳೂರಿಗೆ ಆಗಮಿಸಿದ್ದು. ಹೆಜ್ಜೆಹೆಜ್ಜೆಗೂ ಹದ್ದಿನ ಕಣ್ಣಿಟ್ಟಿದೆ. ಮೋದಿ ಸಂಚರಿಸುವ ರಸ್ತೆ, ಬೃಹತ್ ಕಟ್ಟಡಗಳ ಮೇಲೆ ನಿಗಾ ವಹಿಸಿದ್ದು, ಸಿಸಿಟಿವಿ ಕಡ್ಡಾಯಗೊಳಿಸಲಾಗಿದೆ. ಹೈರಿಸ್ಕ್ ಅಪಾರ್ಟ್ಮೆಂಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಹೊಸದಾಗಿ ಬಂದವರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದ 1 ಕಿಮೀ ವ್ಯಾಪ್ತಿಯಲ್ಲಿ ನೋ ಫ್ಲೈ ಝೋನ್ ಘೋಷಣೆ ಮಾಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ.
ಈ ಹಿಂದೆ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಹಿನ್ನೆಲೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. 3 ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿಗಳು, 20 ಎಸಿಪಿಗಳು, 30 ಇನ್ಸ್ಪೆಕ್ಟರ್, 100ಕ್ಕೂ ಹೆಚ್ಚು ಎಸ್ಐಗಳು, 1 ಸಾವಿರಕ್ಕೂ ಹೆಚ್ಚು ಸಿವಿಲ್ ಪೊಲೀಸರನ್ನೊಳಗೊಂಡು ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ಮೋದಿ ಭೇಟಿ ಹಿನ್ನೆಲೆ ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆಮಾಡಲಾಗಿದೆ.
ಒಟ್ಟಾರೆ..ಮೋದಿ ಮತ್ತೊಮ್ಮೆ ರಾಜ್ಯ ಪ್ರವಾಸ ಕೈಗೊಂಡಿದ್ದು.. ಪ್ರಧಾನಿ ಮೋದಿಗಾಗಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.


