ದುಬೈ: ಐಪಿಎಲ್‍ನ ಮುಂದಿನ ಪಂದ್ಯಗಳಿಗೆ ಯುಎಇ ವೇದಿಕೆಯಾಗಲು ಸಜ್ಜಾಗಿದೆ. ಈ ನಡುವೆ ಕೆಲ ವಿದೇಶಿ ಸ್ಟಾರ್ ಆಟಗಾರರು ಮುಂದಿನ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
Advertisement
ಐಪಿಎಲ್‍ನ ಸೆಕೆಂಡ್ ಇನ್ನಿಂಗ್ಸ್ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದೆ. ಈಗಾಗಲೇ ದುಬೈನಲ್ಲಿ ಐಪಿಎಲ್‍ಗಾಗಿ ಭರದ ಸಿದ್ಧತೆ ನಡೆಯುತ್ತಿದೆ. ಇತ್ತ ಅಭಿಮಾನಿಗಳು ಕೂಡ ಕಾತರತೆಯಿಂದ ಐಪಿಎಲ್‍ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಕೆಲ ತಂಡ ಯುಎಇ ತಲುಪಿ ಅಭ್ಯಾಸ ಆರಂಭಿಸಿದೆ. ಈ ಎಲ್ಲದರ ನಡುವೆ ಕೆಲ ಸ್ಟಾರ್ ಆಟಗಾರರು ಮುಂದಿನ ಪಂದ್ಯಗಳಲ್ಲಿ ನಾವು ಆಡುವುದಿಲ್ಲ ಎಂದು ತಂಡಗಳಿಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ‘ಯಶಸ್ವಿ’ಯ ಯಶಸ್ಸಿಗೆ ವಿಶೇಷ ಉಡುಗೊರೆ ನೀಡಿದ ಬಟ್ಲರ್
Advertisement
Advertisement
14ನೇ ಆವೃತ್ತಿಯ ಐಪಿಎಲ್‍ನ ಮೊದಲ ಭಾಗದಲ್ಲಿ ಭಾಗವಹಿಸಿದ ಕೆಲ ಆಟಗಾರರು ಇದೀಗ ಎರಡನೇ ಭಾಗದಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರದಿಂದಾಗಿ ಕೆಲ ತಂಡಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಮೊದಲನೇಯದಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಐಪಿಎಲ್‍ನ ಮುಂದಿನ ಪಂದ್ಯದಲ್ಲಿ ಆಡುವುದಿಲ್ಲ ಎಂದಿದ್ದಾರೆ. ತಮ್ಮ ವೈಯಕ್ತಿಕ ಕಾರಣದಿಂದಾಗಿ ಹಿಂದೆ ಸರಿದಿರುವ ಬಗ್ಗೆ ಫ್ರಾಂಚೈಸಿಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಟ್ರೋಫಿಯ ಆನ್‍ಲೈನ್ ವಿಶ್ವದರ್ಶನ ಪ್ರಾರಂಭ
Advertisement
ಮೊದಲ ಭಾಗದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮಿಂಚಿದ್ದ ಪ್ಯಾಟ್ ಕಮ್ಮಿನ್ಸ್ ಎರಡನೇ ಭಾಗದಿಂದ ದೂರ ಉಳಿಯಲು ನಿರ್ಧರಿಸಿರುವ ಇನ್ನೋರ್ವ ಸ್ಟಾರ್ ಆಟಗಾರ. ಅವರೂ ಕೂಡ ವೈಯಕ್ತಿಕ ಕಾರಣದಿಂದಾಗಿ ಹಿಂದೆ ಸರಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ತಂಡಕ್ಕೆ ಮೈಕ್ ಹೆಸನ್ ನೂತನ ಕೋಚ್
ಆರ್‌ಸಿಬಿ ತಂಡದ ಸ್ಪಿನ್ನರ್ ಆ್ಯಡಂ ಜಂಪಾ, ಪಂಜಾಬ್ ತಂಡದ ಬೌಲರ್ ಗಲಾದ ರಿಲೇ ಮೆರಿಡಿತ್ ಹಾಗೂ ಜೇ ರಿಚಡ್ರ್ಸ್‍ನ್ ಕೂಡ ತಾವು ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದೇವೆ ಎಂದು ಈಗಾಗಲೇ ತಿಳಿಸಿದ್ದಾರೆ. ಐಪಿಎಲ್ ಆರಂಭಕ್ಕೆ ಒಂದು ತಿಂಗಳು ಬಾಕಿ ಇರುವಂತೆ ಆಟಗಾರರು ಹಿಂದೆ ಸರಿಯುತ್ತಿರುವುದು ಕೆಲ ಫ್ರಾಂಚೈಸ್‍ಗಳಿಗೆ ಮುಳುವಾಗಿದೆ.