ಚಾಮರಾಜನಗರ: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಈ ಮಧ್ಯೆ ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು. ಹಳ್ಳಿಗಳಿಗೆ ಒಂದು ಬಾರಿ ಭೇಟಿ ಕೊಟ್ಟು ನೋಡಿ, ಎಷ್ಟೋ ಜನ ಆರೋಗ್ಯ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಣ್ಣೆ ಹಾಕುವುದಿಲ್ಲ ಎಂದರೆ ಸತ್ತು ಹೋಗುತ್ತಾರೆ, ನರ ದೌರ್ಬಲ್ಯ ಬರುತ್ತೆ ಅಂತಾ ಹೇಳ್ತಿದೋರು ಕೂಡ ಆರಾಮವಾಗಿದ್ದಾರೆ. ಮದ್ಯ ಪ್ರಿಯರ ಆರೋಗ್ಯ ದೃಷ್ಟಿಯಿಂದ ಮದ್ಯ ಮಾರಾಟವನ್ನು ಎರಡು ತಿಂಗಳು ಮುಂದೆ ಹಾಕಿ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.
Advertisement
Advertisement
ಕಳ್ಳಭಟ್ಟಿ ದಂಧೆ ಹೆಚ್ಚಾಗಿದ್ದರೆ ಪೊಲೀಸರ ಮೂಲಕ ಬ್ರೇಕ್ ಹಾಕೋಣ. ಅದನ್ನು ಬಿಟ್ಟು ನೆಗಡಿ ಬಂತು ಎಂದು ಮೂಗು ಕತ್ತರಿಸಿಕೊಳ್ಳಲಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
Advertisement
ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಮದ್ಯ ಮಾರಾಟಕ್ಕೆ ನಿಷೇಧವಿತ್ತು. ಎಣ್ಣೆ ಪ್ರಿಯರು, ರಾಜಕಾರಣಿಗಳು ಸಹ ಮದ್ಯದಂಗಡಿ ತೆರೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸೋಮವಾರದಿಂದ ಮದ್ಯ ಮಾರಾಟ ಕೂಡ ನಡೆಯಲಿದೆ. ಹೀಗಿರುವಾಗ ಶಾಸಕ ಎನ್ ಮಹೇಶ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.