– ಓಟಿ ಕ್ವಾಟರ್ ಗೆ 800 ರೂ, ಬಿಯರ್ 1 ಸಾವಿರ ರೂ.
ಕೋಲಾರ: ಅಬಕಾರಿ ಸಚಿವ ಎಚ್.ನಾಗೇಶ್ ಜಿಲ್ಲೆಯಲ್ಲೇ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಸಾಮಾನ್ಯ ದರಕ್ಕಿಂತ ಹತ್ತು ಪಟ್ಟು ಹೆಚ್ಚಳ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಕೋಲಾರ ಹೊರವಲಯದ ಟಮಕದ ಕಾಲೋನಿಯಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ಬಾರ್‍ಗಳಲ್ಲಿ ಮದ್ಯ ಖಾಲಿಯಾಗಿದ್ದು, ಕೆಲವೇ ಬಾರ್‍ಗಳಲ್ಲಿ ಸ್ಟಾಕ್ ಇದೆ. ಬಾಗಿಲು ಕ್ಲೋಸ್ ಮಾಡಿ ಹಿಂದೆ ಬಾಗಿಲು ತೆರೆದು ಬಾರ್ ಮಾಲೀಕರು ಮಾರಾಟ ಮಾಡಲಾಗುತ್ತಿದೆ. ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಜಿಲ್ಲೆಯಾದ್ಯಂತ ಅಕ್ರಮವಾಗಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
Advertisement
Advertisement
ಐ ವೋಲ್ಟ್ಸ್ ಕ್ವಾಟರ್ ಗೆ 70 ರೂ. ಬೆಲೆಯ ಇದೆ. ಆದರೆ 650 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಓಟಿ ಕ್ವಾಟರ್ ಗೆ 85 ರೂ., ಇದೀಗ 800 ರೂ.ಗೆ ಮಾರಾಟ. ಬಿಯರ್ 130 ರೂಪಾಯಿ ಇದ್ದಿದ್ದನ್ನು 1000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕುಡುಕರು ವಿಧಿ ಇಲ್ಲದೆ ಅಧಿಕ ಬೆಲೆಕೊಟ್ಟು ಕುಡಿಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಲಾಕ್‍ಡೌನ್ ವೇಳೆ ಎಂಎಸ್ ಐಎಲ್ ಬಾರ್ ಗಳನ್ನು ತೆರೆಯುವಂತೆ ಕುಡುಕರ ಪಟ್ಟು ಹಿಡಿದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.