ಹುಬ್ಬಳ್ಳಿ: ಕೊರೊನಾ ಭೀತಿಯಿಂದ ಇಡೀ ದೇಶವೇ 21 ದಿನಗಳ ಕಾಲ ಲಾಕ್‍ಡೌನ್ ಆಗಿದೆ. ಈ ವೇಳೆ ಕುಡಿಯಲು ಮದ್ಯ ಸಿಗದೇ ಮದ್ಯ ಪ್ರಿಯರು ಪರದಾಡುತ್ತಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಜಾಲವೊಂದು ಫೇಸ್‍ಬುಕ್ ಮೂಲಕ ಪೋಸ್ಟ್ ಹಾಕಿ ಮದ್ಯವನ್ನು ಹೋಮ್ ಡೆಲಿವರಿ ಕೊಡುವುದಾಗಿ ಹೇಳಿ ವಂಚನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ತೇಜ್ ಲಿಕ್ಕರ್ ಹೆಸರಿನಲ್ಲಿ ಫೇಸ್‍ಬುಕ್ ಮೂಲಕ ಪೋಸ್ಟ್ ಹಾಕಿದ್ದಾರೆ. ಮೊದಲು ಅರ್ಧ ಹಣವನ್ನು ಆನ್‍ಲೈನ್ ಮೂಲಕ ನೀಡಿ, ನಂತರ ನಿಮ್ಮ ಮನೆಗೆ ಮದ್ಯವನ್ನು ಕಳಿಸುತ್ತೇವೆ ಎಂದು ನಂಬಿಸಿ ದೂರವಾಣಿ ನಂಬರ್ ಸಹಿತ ಪೋಸ್ಟ್ ಹಾಕಿ ವಂಚನೆ ಮಾಡುತ್ತಿದ್ದಾರೆ.
Advertisement
Advertisement
ವಾಟ್ಸಫ್ ಮೂಲಕ ಸಂದೇಶ ಕಳಿಸಿ ಆನ್‍ಲೈನ್ ಪೇಮೆಂಟ್ ಮಾಡಿಸಿಕೊಂಡು ವಂಚಿಸುತ್ತಿರುವ ಜಾಲ ಹುಬ್ಬಳ್ಳಿಯಲ್ಲಿ ಬೇರು ಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ತೇಜ್ ಲಿಕ್ಕರ್ ಮಾಲೀಕ ಅಕ್ಷಯ್ ಪವಾರ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.
Advertisement
ಫೇಸ್‍ಬುಕ್ ಪೇಜಿನಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶದ ಬಗ್ಗೆ ತೇಜ್ ಲಿಕ್ಕರ್ ಮಾಲೀಕ ಸ್ಪಷ್ಟನೆ ನೀಡಿದ್ದು, ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.