ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಸಾಮೂಹಿಕ ಗಣೇಶ ವಿಸರ್ಜನೆ ಮಾಡುವ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಲಿಕ್ಕರ್ (liquor) ನಿಷೇಧಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (Karnataka State Police) ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನ (Bengaluru) ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ CL-4, CL-6 ಪರವಾನಿಗೆ ಹೊರತುಪಡಿಸಿ ಉಳಿದೆಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು ಹಾಗೂ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಆಹಾರ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಮೈಸೂರಿನ ವಿಜ್ಞಾನ ಶಿಕ್ಷಕ ಮಧುಸೂದನ್‌ಗೆ ರಾಷ್ಟ್ರ ಪ್ರಶಸ್ತಿ
ಎಲ್ಲೆಲ್ಲಿ ಬಂದ್?
ಆ.29ರ ಬೆಳಿಗ್ಗೆ 6ಗಂಟೆಯಿಂದ ಆ.30ರ ಬೆಳಿಗ್ಗೆ 6 ಗಂಟೆವರೆಗೆ:
ಉತ್ತರ ವಿಭಾಗದ ಆರ್.ಟಿ ನಗರ, ಜೆಸಿ ನಗರ, ಹೆಬ್ಬಾಳ ಮತ್ತು ಸಂಜಯನಗರ ಹಾಗೂ ಪೂರ್ವ ವಿಭಾಗದ ಡಿಜೆಹಳ್ಳಿ
ಆ.31ರ ಬೆಳಿಗ್ಗೆ 6ಗಂಟೆಯಿಂದ ಸೆ.01ರ ಬೆಳಿಗ್ಗೆ 6 ಗಂಟೆವರೆಗೆ:
ಪೂರ್ವ ವಿಭಾಗದ ಡಿಜೆಹಳ್ಳಿ, ಕೆಜಿಹಳ್ಳಿ, ಗೋವಿಂದಪುರ, ಭಾರತಿನಗರ, ಪುಲಿಕೇಶಿನಗರ, ಹಲಸೂರು, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಈಶಾನ್ಯ ವಿಭಾಗದ ಯಲಹಂಕ, ಯಲಹಂಕ ಉಪನಗರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಹೆಬ್ಬಗೋಡಿ
ಸೆ.14ರ ಬೆಳಿಗ್ಗೆ 6ಗಂಟೆಯಿಂದ ಸೆ.15ರ ಬೆಳಿಗ್ಗೆ 6 ಗಂಟೆವರೆಗೆ:
ಕಾಮಾಕ್ಷಿಪಾಳ್ಯ ಹಾಗೂ ವಿಜಯನಗರ. ಇದನ್ನೂ ಓದಿ: ಇಂದು ಬೆಂಗಳೂರಿನ ಹಲವಡೆ ವಿದ್ಯುತ್ ವ್ಯತ್ಯಯ – ನಿಮ್ಮ ಏರಿಯಾ ಇದ್ಯಾ ಚೆಕ್ ಮಾಡಿಕೊಳ್ಳಿ