ಹಿಂದಿ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರು ಮೂವತ್ತು ಸೆಕೆಂಡ್ ಕಾಲ ಲಿಪ್ ಲಾಕ್ ಮಾಡಿಕೊಂಡಿದ್ದರು. ಇದು ಚರ್ಚೆಗೂ ಗ್ರಾಸವಾಗಿತ್ತು. ಈ ಕುರಿತು ಕಾರ್ಯಕ್ರಮ ನಡೆಸಿಕೊಡುವ ಸಲ್ಮಾನ್ ಖಾನ್ (Salman Khan) ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ನಿರೀಕ್ಷೆಯಂತೆ ಸಲ್ಮಾನ್ ಬೇಸರ ವ್ಯಕ್ತ ಪಡಿಸಿದ್ದಾರೆ. ಇದು ಫ್ಯಾಮಿಲಿ ಶೋ ಆಗಿರುವುದರಿಂದ ಆ ರೀತಿಯ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಬಿಗ್ ಬಾಸ್ (Bigg Boss OTT) ಮನೆಯಲ್ಲಿ ಏನು ಆಗಬಾರದು ಎಂದು ಪದೇ ಪದೇ ಸಲ್ಮಾನ್ ಖಾನ್ ಹೇಳುತ್ತಿದ್ದರೋ ಅದೇ ಆಗಿತ್ತು. ಇಬ್ಬರು ಸ್ಪರ್ಧಿಗಳ ಮುತ್ತಿನಾಟಕ್ಕೆ ಪ್ರೇಕ್ಷಕರು ತಲೆತಿರುಗಿ ಬಿದ್ದಿದ್ದರು. ಬಿಗ್ ಬಾಸ್ ಇದೊಂದು ಫ್ಯಾಮಿಲಿ ಶೋ. ದಯವಿಟ್ಟು ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಸಾಕಷ್ಟು ಬಾರಿ ಸಲ್ಮಾನ್ ಖಾನ್ ನಿರೂಪಣಾ ವೇಳೆಯಲ್ಲಿ ಹೇಳಿದ್ದರು. ಆದರೂ ಆಗಬಾರದ್ದು ಆಗಿ ಹೋಗಿತ್ತು. ಆದ ಘಟನೆಗೆ ಅನೇಕ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.
ಮೊನ್ನೆ ಬಿಗ್ ಬಾಸ್ ಮನೆ ಸಖತ್ ಬಿಸಿ ಬಿಸಿಯಾಗಿತ್ತು. ಒಂದು ಕಡೆ ಆಕಾಂಕ್ಷಾ (Akanksha) ಮತ್ತು ಜದ್ (Jad) ಏಕಾಂತದಲ್ಲಿ ಕೂತಿದ್ದರು. ಮತ್ತೊಂದು ಕಡೆ ಪೂಜಾ ಭಟ್ (Pooja Bhatt) ತಮ್ಮದೇ ಧ್ಯಾನದಲ್ಲಿ ಮಗ್ನರಾಗಿದ್ದರು. ಒಂದು ರೀತಿಯಲ್ಲಿ ಬಿಗ್ ಬಾಸ್ ಮನೆ ಪಡ್ಡೆಗಳು ರೊಮ್ಯಾಂಟಿಕ್ ಪಾರ್ಕ್ ಆಗಿತ್ತು. ಇಂತಹ ಸಮಯದಲ್ಲಿ ಸಚ್ ದೇವ್ ಸುಮ್ಮನಿರದೇ ‘ಆಕಾಂಕ್ಷ ಅವರು ಜಿದ್ ಗೆ ಕಿಸ್ ಮಾಡಬೇಕು’ ಎಂದು ಸವಾಲು ಎಸೆದೇ ಬಿಟ್ಟರು.
ಸಚ್ ದೇವ್ (Sach Dev) ಇಂಥದ್ದೊಂದು ಬೇಡಿಕೆ ಇಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕಾಂಕ್ಷ ಮತ್ತು ಜದ್ ಗೆ ಇದು ಅನಿರೀಕ್ಷಿತವೂ ಅಲ್ಲ. ಏಕೆಂದರೆ ಅವರಿಬ್ಬರ ಮಧ್ಯ ಏನೋ ನಡೆಯುತ್ತಿದೆ ಎನ್ನುವಂತೆ ಸಾಕಷ್ಟು ಭಾರೀ ಅವರೇ ತೋರಿಸಿಕೊಂಡಿದ್ದಾರೆ. ಹಾಗಾಗಿ ಆಕಾಂಕ್ಷ ಮತ್ತು ಜಿದ್ ಅದನ್ನು ಮಾಡುತ್ತಾರೆ ಎನ್ನುವುದು ಸಚ್ ದೇವ್ ಊಹೆ ಆಗಿತ್ತು. ಈತನ ಬೇಡಿಕೆಯಂತೆ ಇಬ್ಬರೂ ಬರೋಬ್ಬರಿ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ (Lip Lock) ನಲ್ಲೇ ಇದ್ದರು. ಇದನ್ನೂ ಓದಿ:ರೂಪೇಶ್ ಶೆಟ್ಟಿ ‘ಸರ್ಕಸ್’ಗೆ ಬಿಗ್ ಬಾಸ್ ಟೀಮ್ ಸಾಥ್
ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಅದನ್ನು ಸದುಪಯೋಗ ಪಡಿಸಿಕೊಂಡ ಆಕಾಂಕ್ಷ ಮತ್ತು ಜದ್ ಬರೋಬ್ಬರಿ ಅರ್ಧ ನಿಮಿಷಗಳ ಕಾಲ್ ಲಿಪ್ ಲಾಕ್ ಮಾಡಿಕೊಂಡಿದ್ದರು. ಅದನ್ನು ಕಂಡು ಪೂಜಾ ಭಟ್ ಇರಿಸುಮುರುಸುಗೊಂಡರು. ಥೋ.. ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರಿಂದ ಪೂಜಾ ಕೂಗು ಯಾರಿಗೂ ಕೇಳಿಸದಂತಾಯಿತು.
ಆಕಾಂಕ್ಷಾ ಮತ್ತು ಜದ್ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ. ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಕೆಲವರು ಸ್ಕ್ರಿಪ್ಟ್ ರೀತಿಯಲ್ಲೇ ನಡೆದುಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇಂಥದ್ದನ್ನು ಮಾಡುವುದಕ್ಕಾಗಿಯೇ ಇವರು ಇಲ್ಲಿಗೆ ಬಂದಿರುತ್ತಾರೆ ಎಂದು ಕಾಲೆಳೆದಿದ್ದರು.
Web Stories