ಕತಾರ್: ಅರಬ್ಬರ ನಾಡಲ್ಲಿ ಫಿಫಾ ವಿಶ್ವಕಪ್ (FIFA World Cup) ಆರಂಭಕ್ಕೂ ಮುನ್ನ ಲಿಯೋನೆಲ್ ಮೆಸ್ಸಿ (Lionel Messi) ಸಾರಥ್ಯದ ಅರ್ಜೆಂಟೀನಾ (Argentina) ತಂಡದ ಪರ ನಿರೀಕ್ಷೆ ಹೆಚ್ಚಿತ್ತು. ಆದರೆ ಇದೀಗ ಅರ್ಜೆಂಟೀನಾ ಮಾಡು ಇಲ್ಲವೇ ಮಡಿ ಹಂತಕ್ಕೆ ತಲುಪಿದೆ.
Advertisement
ಫುಟ್‍ಬಾಲ್‍ನ ದಿಗ್ಗಜ ಆಟಗಾರ ಮೆಸ್ಸಿ ಮುಂದಾಳತ್ವದಲ್ಲಿ ಫಿಫಾ ವಿಶ್ವಕಪ್ ಆಡಲು ಕತಾರ್‌ಗೆ ಬಂದಿಳಿಯುತ್ತಿದ್ದಂತೆ ಅರ್ಜೆಂಟೀನಾ ಫುಟ್‍ಬಾಲ್ ಪ್ರಿಯರ ಅಚ್ಚುಮೆಚ್ಚಿನ ತಂಡವಾಗಿತ್ತು. ಆದರೆ ತನ್ನ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ (Saudi Arabia) ವಿರುದ್ಧ ಅಚ್ಚರಿ ಎಂಬಂತೆ ಅರ್ಜೆಂಟೀನಾ ಸೋತು ತನ್ನ ನಾಕೌಟ್ ಹಾದಿಯನ್ನು ದುರ್ಬಲಗೊಳಿಸಿಕೊಂಡಿದೆ. ಇದೀಗ ಎರಡನೇ ಪಂದ್ಯವಾಡಲು ಸಜ್ಜಾಗಿದ್ದು, ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಗೆಲುವು – ಸೌದಿ ಅರೇಬಿಯಾ ಆಟಗಾರರಿಗೆ ರೋಲ್ಸ್ ರಾಯ್ಸ್ ಗಿಫ್ಟ್ ಘೋಷಿಸಿದ ಸರ್ಕಾರ
Advertisement
Advertisement
ಸೌದಿ ಅರೇಬಿಯಾ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾದ ಅರ್ಜೆಂಟೀನಾ, ವಿಶ್ವಕಪ್‍ನ ನಾಕೌಟ್ ರೇಸ್‍ನಲ್ಲಿ ಉಳಿಯಬೇಕಿದ್ದರೆ ಮೆಕ್ಸಿಕೋ ವಿರುದ್ಧದ ಎರಡನೇ ಪಂದ್ಯ ಗೆಲ್ಲಲೇಬೇಕಿದೆ. ಹಾಗಾಗಿ ಮೆಸ್ಸಿ ಚಿತ್ತ ಗೆಲುವಿನತ್ತ ನೆಟ್ಟಿದೆ.
Advertisement
ಆದರೆ ಅರ್ಜೆಂಟೀನಾಗೆ ಪ್ರಬಲ ಪೈಪೋಟಿ ನೀಡಲು ಮೆಕ್ಸಿಕೋ (Mexico) ಸಿದ್ಧವಾಗಿದೆ. ಇದಕ್ಕಾಗಿ ರಣತಂತ್ರವನ್ನು ಹೆಣೆದಿದ್ದು, 2014-16ರ ವರೆಗೆ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದ ಗೆರಾರ್ಡೊ ಮಾರ್ಟಿನೋ ಈಗ ಮೆಕ್ಸಿಕೋ ಕೋಚ್ ಆಗಿದ್ದಾರೆ. ಎದುರಾಳಿಯ ತಂತ್ರಗಾರಿಕೆಯನ್ನು ಸರಿಯಾಗಿ ಅರಿತಿದ್ದಾರೆ. ಹೀಗಾಗಿ ಅರ್ಜೆಂಟೀನಾ ಹೊಸ ಹಾಗೂ ವಿಭಿನ್ನ ರಣತಂತ್ರಗಳೊಂದಿಗೆ ಮೈದಾನಕ್ಕಿಳಿಯಬೇಕಿದೆ. ವಿಶ್ವಕಪ್‍ನಲ್ಲಿ ಅರ್ಜೆಂಟೀನಾ ವಿರುದ್ಧ ಮೆಕ್ಸಿಕೋ 3 ಬಾರಿ ಸೆಣಸಾಡಿದ್ದು ಒಮ್ಮೆಯೂ ಗೆದ್ದಿಲ್ಲ. ಇದನ್ನೂ ಓದಿ: ಬ್ರೆಜಿಲ್‌ಗೆ ಆಘಾತ – ಮುಂದಿನ ಪಂದ್ಯಗಳಲ್ಲಿ ಆಡಲ್ಲ ನೇಮರ್
ಇಂದು ಲುಸೈಲ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 12:30ಕ್ಕೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮೆಸ್ಸಿ ಮ್ಯಾಜಿಕ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಕತಾರ್ ಕಥೆ ಮುಗಿಯಿತು:
ಆತಿಥೇಯ ಕತಾರ್ ಹಾಗೂ ಸೆನೆಗಲ್ ನಡುವಿನ ಪಂದ್ಯದಲ್ಲಿ 1-3 ಗೋಲುಗಳಲ್ಲಿ ಕತಾರ್ ಸೋಲುಂಡಿತು. 41ನೇ ನಿಮಿಷದಲ್ಲಿ ಬೌಲಾಯೆ ಡಿಯಾ, 48ನೇ ನಿಮಿಷದಲ್ಲಿ ಫಮಾರಾ ಡೈಡಿಯೊ, 84ನೇ ನಿಮಿಷದಲ್ಲಿ ಬಂಬಾ ಡಿಯೆಂಗ್ ಸೆನೆಗಲ್ ಪರ ಗೋಲು ಬಾರಿಸಿದರೆ, ಕತಾರ್ ಪರ 78ನೇ ನಿಮಿಷದಲ್ಲಿ ಮೊಹಮದ್ ಮುಂಟಾರಿ ಏಕೈಕ ಗೋಲು ದಾಖಲಿಸಿದರು. ಹೀಗಾಗಿ ಕತಾರ್ ಸೋಲು ಕಾಣಬೇಕಾಯಿತು. ಈ ಮೂಲಕ ಕತಾರ್ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದೆ.